ರಸ್ತೆಗಳಲ್ಲಿ ಕುದುರೆಗಳ ಕಾಟ: ಅಟ್ಟಾಡಿಸಿ ಕಚ್ಚಿದ ಕುದುರೆ

ನಂಜನಗೂಡು. ಏ.05: ನಗರದ 17 ವಾರ್ಡಿನಲ್ಲಿ ಮಿತಿಮೀರಿದ ಕುದುರೆಗಳ ಕಾಟ ಬೆಚ್ಚಿಬಿದ್ದ ಸಾರ್ವಜನಿಕರು.
ಶಂಕರಪುರದ ನಿವಾಸಿ ಪುಟ್ಟಮ್ಮ ಮತ್ತು ನೀಲಕಂಠ ನಗರದ ಅಪ್ಪಿಯ ಗಾಯಗೊಂಡ ಮಹಿಳೆಯರು ಶಂಕರ್ ಪುರ ನಿವಾಸಿ ಪುಟ್ಟಮ್ಮ ಮನೆಯಿಂದ ಅಂಗಡಿಗೆ ದಿನಿಸಿ ಪದಾರ್ಥಗಳನ್ನು ತೆಗೆದುಕೊಂಡು ಬರುವ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿ ಇದ್ದ ಕುದುರೆಗಳು ಪುಟ್ಟಮ್ಮ ನಾ ಮೇಲೆ ದಾಳಿ ಮಾಡಿದಾಗ ಮಹಿಳೆ ಗಾಯಗೊಂಡಿದ್ದಾರೆ ಪಕ್ಕದಲ್ಲಿ ಇದ್ದಂತಹ ಮಹಿಳೆ ಅಪ್ಪಿಯ ಹೆದರಿ ಓಡುತ್ತಿರುವಾಗ ಬಿದ್ದು ಗಾಯಗೊಂಡಿದ್ದಾರೆ.
ತಕ್ಷಣ ಅಲ್ಲಿದ್ದ ಹುಡುಗರು ಕಲ್ಲಿನಿಂದ ಕುದುರೆಗಳನ್ನು ಹೊಡೆದು ಓಡಿಸಿದ್ದಾರೆ ಹೆಚ್ಚಿನ ಅನಾಹುತ ಆಗದೆ ಇಬ್ಬರು ಮಹಿಳೆಯರು ಪಾರಾಗಿದ್ದಾರೆ ಇಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಸಾರ್ವಜನಿಕರು ನಗರಸಭೆ ಅಧಿಕಾರಿಗಳಿಗೆ ಮತ್ತು ಕುದುರೆ ಮಾಲೀಕರಿಗೆ ಹಿಡಿಶಾಪ ಹಾಕಿದರು ರಸ್ತೆಗಳಲ್ಲಿ ವೃದ್ಧರು ಮಕ್ಕಳು ಓಡಾಡುತ್ತಿರುತ್ತಾರೆ.
ಇಂತಹ ಸಮಯದಲ್ಲಿ ಕುದುರೆಗಳು ದಾಳಿ ಮಾಡಿದರೆ ಮಕ್ಕಳ ಗತಿಯೇನು ಎಂಬುದೇ ನಮಗೆ ಚಿಂತಾಜನಕವಾಗಿದೆ ಆದ್ದರಿಂದ ಅಧಿಕಾರಿಗಳು ತಕ್ಷಣ ಕುದುರೆ ಮಾಲೀಕರಿಗೆ ನೋಟಿಸ್ ನೀಡಿ ಕುದುರೆಗಳನ್ನು ರಸ್ತೆಗೆ ಬಿಡದಂತೆ ಎಚ್ಚರಿಕೆ ನೀಡಬೇಕೆಂದು ಮನವಿ ಮಾಡಿದ್ದಾರೆ ಇಲ್ಲದಿದ್ದರೆ ನಗರಸಭೆ ಕಚೇರಿಯ ಮುಂದೆ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸ್ಥಳಕ್ಕೆ ನಗರಸಭಾ ಸದಸ್ಯ ಸಿದ್ದಿಕಿ ಬಂದು ಮಾಹಿತಿ ಪಡೆದರು ನಗರಸಭೆ ಆಯುಕ್ತರಿಗೆ ಗಮನಕ್ಕೆ ತಂದು ಕುದುರೆಗಳನ್ನು ರಸ್ತೆಗೆ ಬಿಡದಂತೆ ಮಾಲೀಕರಿಗೆ ಎಚ್ಚರಿಕೆ ನೀಡಲು ಸೂಚಿಸಿದರು ಮುಂದೆ ಈ ರೀತಿ ಘಟನೆಗಳು ನಡೆಯದಂತೆ ಕ್ರಮ ವಹಿಸುವಂತೆ ಸೂಚಿಸಿದರು.