ರಸ್ತಾಪುರ ಭೀಮ ಕವಿ, ಸ್ಮಾರಕ ನಿರ್ಮಾಣ ಕಸಾಪ ಭವನ ಕಟ್ಟಡಕ್ಕೆ ಸಚಿವ ದರ್ಶನಾಪುರ ಭರವಸೆ

ಶಹಾಪುರ:ಜು.25:ಸಗರ ನಾಡಿನಲ್ಲಿ ಅನೇಕ ಕವಿಗಳು ಸಾಹಿತಿಗಳು ವೀರಯೋಧರನ್ನು ಕಂಡ ನಾಡಾಗಿದ್ದು. ಮುಂದಿನ ದಿನಗಳಲ್ಲಿ ರಸ್ತಾಪುರದ ಭೀಮ ಕವಿ, ಸಗರದ ಸ್ವತಂತ್ರ್ಯ ಹೋರಾಟಗಾರ ದಿ, ಅಚ್ಚಪ್ಪಗೌಡ ಸುಬೇದಾರ, ಬೊಮ್ಮಯ್ಯ,ಏತಯ್ಯ, ನವರ ಸ್ಮಾರಕ ನಿರ್ಮಿಸಿ ಅವರ ನೆನಪು ಸಮಾಜಕ್ಕೆ ಪೂರಕವಾಗಲು ಶ್ರಮಿಸುವದಾಗಿ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಮಾಧ್ಯಮಗಳ ಸಚಿವ ಶರಣಬಸ್ಪಪ್ಪಗೌಡ ದರ್ಶನಾಪುರವರು ಭರವಸೆ ನಿಡಿದರು, ಅವರು ತಾಲುಕಾ ಕಸಾಪ 3 ನೆಯ ಸಾಹಿತ್ಯ ಸಮ್ಮೆಳನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು, ಮುಂದುವರೆದು ಮಾತನಾಡಿದ ಅವರು,ಮುಂದೆ ಸಗರ ಅತಿ ಹೆಚ್ಚು ಸದಸ್ಯರ ಸ್ಥಾನಮಾನ ಹೊಂದಿದೆ, ಮುಂದೆ ಶಿಘ್ರದಲ್ಲೆ ಸಗರ ಪಟ್ಟಣ ಪಂಚಾಯತ್ ಎಂದು ಸರ್ಕಾರ ನಿರ್ಧಿಷ್ಟ ಅಧಿಕೃತ ಆದೇಶ ಹೊರ ಬಿಳಲ್ಲಿದೆ ಎಂದು ದರ್ಶನಾಪುರವರು ಹೇಳಿದರು, ಇಂದು ಅಭಿವೃದ್ದಿಯಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಯಿಂದ ಶೇ>50% ರಷ್ಟು ಶೈಕ್ಷಣಿಕ ಅಭ್ಯಧ್ಯಯಕ್ಕೆ ಅನುಧಾನ ಮಿಲಸಾಗಿದ್ದು ಶಾಲಾ ಕೊಣೆಗಳ ಕಟ್ಟಡ ಮತ್ತು ಶೌಚಾಲಯ ಹಾಗೂ ಶುದ್ದ ಕುಡಿಯುವ ನೀರು ಒದಗಿಸಲು ಈ ಅನುಧಾನ ವೆಚ್ಚ ಮಾಡಲಾಗುತ್ತದೆ. ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಿದಲ್ಲಿ ಕನ್ನಡ ಸರ್ಕಾರಿ ಶಾಲೆಗೆ ಮಕ್ಕಳು ಸೇರಿಕೊಳ್ಳಲು ಸಾಧ್ಯವಾಗುತ್ತದೆ.ಶಿಕ್ಷಕರ ಕೊರತೆ ನೀಗಿಸಲು ರಾಜ್ಯ ಸರ್ಕಾರ ಮುಂದಾಗಿದ್ದು ನೆನೆಗುದಿಗೆ ಬಿದ್ದಿದ್ದ ಶಾಲಾ ಶಿಕ್ಷಕರನ್ನು ಶಿಘ್ರದಲ್ಲೆ ನೇಮಕ ಮಾಡಲಾಗುತ್ತದೆ, ಕಾಯಕವೆ ಕೈಲಾಸವೆಂದ ಅಣ್ಣ ಬಸವಣ್ಣನವರ ನುಡಿಯಂತೆ ಶಿಕ್ಷಕರು ನಿಮ್ಮ ಶಾಲಾ ಮಕ್ಕಳಿಗೆ ಉತ್ತಮ ಶಿಕ್ಷಣ ಕಲಿಕೆ ಮಾಡಿದಲ್ಲಿ ನಿಮ್ಮ ಹೆಸರು ಹಜರಾಮರವಾಗಿರುತ್ತದೆ ಎಂದರು,ಕನ್ನಡಪರ ಸಂಘಟನೆಗಳಿಂದ ಇಂದು ಕನ್ನಡ ನಾಡು ನುಡಿಗೆ ಮೆರಗು ನಿಡಿದೆ ಎಂದ ಅವರು ಸಗರದಲ್ಲಿ ವಲಯ ಕಸಾಪ ಅಧ್ಯಕ್ಷರಾದ ಡಾ,ದೆವಿಂದ್ರಪ್ಪ ಹಡಪದವರು ನೀಡಿದ 3 ಸಾವಿರ ಸ್ಕೊರ್ ಪೀಟ್ ಖಾಲಿ ನಿವೇಶನದಲ್ಲಿ ಕಸಾಪ ಭವನ ನಿರ್ಮಾಣಕ್ಕೆ ಅನುಧಾನ ಒದಗಿಸುವದಾಗಿ ತಿಳಿಸಿದರು.