ರಸಾನುಭವ ಅಕ್ಷರ ರೂಪದಲ್ಲಿ ಹೊರಹೊಮ್ಮಿಸುವವರೇ ನಿಜವಾದ ಕವಿಗಳು

ಬಾದಾಮಿ(ಬಿಂದುಮಾಧವ ಕುಲಕರ್ಣಿ ವೇದಿಕೆ), ಮಾ28: ಜಗತ್ತಿನಲ್ಲಿ ಸೂರ್ಯ ಚಂದ್ರ ಹುಟ್ಟಿದ ಮೇಲೆ ಪ್ರಕೃತಿಯಲ್ಲಿ ಎಲ್ಲ ಬದಲಾವಣೆಗಳು ಆಗುತ್ತಲೆ ಬಂದಿವೆ. ಇಲ್ಲಿರುವ ಪ್ರತಿ ಒಂದು ವಸ್ತುವನ್ನು ಗಮನಿಸಿ ಕವಿಯಾದವನು ಕವನವನ್ನು ಬರೆಯುತ್ತಾನೆ ಕಲಾಕಾರನಾದವನು ಕಲೆಯನ್ನು ಬಿಡಿಸುತ್ತಾನೆ ಎಂದು ಕನ್ನಡಪ್ರಭ ಹುಬ್ಬಳ್ಳಿಯ ಸ್ಥಾನಿಕ ಸಂಪಾದಕ ಮಲ್ಲಿಕಾರ್ಜುನ ಸಿದ್ದಣ್ಣವರ ಹೇಳಿದರು.
ನೀಲಗುಂದ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ತಾಲೂಕಾ 8ನೇ ಕನ್ನಡ ಸಾಹಿತ್ಯ ಸಮ್ಮೇಳನದ 1ನೇ ಕವಿಗೋಷ್ಠಿಯಲ್ಲಿ ಸಮಕಾಲಿನ ಕಲೆ ಮತ್ತು ಕಲಾವಿದರು ಎಂಬ ವಿಷಯದ ಮೇಲೆ ಉಪನ್ಯಾಸದಲ್ಲಿ ಮಾತನಾಡಿ ವಾಸ್ತವ ಅನ್ನುವುದು ಅದು ಪುನಃ ಸೃಷ್ಠಿಯಾದಾಗ ನಂತರ ಅದು ಕಲೆಯಾಗಿ ಹೊರ ಹೊಮ್ಮುತ್ತದೆ. ಕವಿತೆಯನ್ನು ಕಾಟಾಚಾರಕ್ಕೆ ಬರೆಯುವವರು ಕವಿಗಳಲ್ಲ. ಅನುಭವವನ್ನು ಮಸ್ತಕದಲ್ಲಿರಿಸಿ ರಸಾನುಭವಗಳ ಮೂಲಕ ಅಕ್ಷರ ರೂಪದಲ್ಲಿ ಹೊರಹೊಮ್ಮಿಸುವವರೆ ನಿಜವಾದ ಕವಿಗಳು ಎಂದರು.
ಜಗತ್ತಿನಲ್ಲಿ ನಿಜವಾದ ಕಲೆಗಾರತಿ ತಾಯಿ. ಅಮ್ಮ ಹೆತ್ತ ಬಳಿಕ ಮಗುವಿನ ತಲೆ ಮುಖ, ಕಾಲು ಕೈ, ಮೂಗು ಎಲ್ಲವನ್ನು ಸರಿಯಾಗಿ ತಿದ್ದುವುದರ ಮೂಲಕ ಮಗುವನ್ನು ಸುಂದರವನ್ನಾಗಿ ಮಾಡಿ ಮುಂದೆ ಸಮಾಜದಲ್ಲಿ ಅವನನ್ನು ಉತ್ತಮವಾಗಿ ಬೆಳೆಯಲು ದಾರಿ ತೋರಿಸುತ್ತಾಳೆ.
ಇಂದು ಪ್ರತಿಯೂಬ್ಬ ಯುವಕ ಯುವತಿಯರು ಸಾಮಾಜಿಕ ಜಾಲತಾಣದಿಂದ ನಮ್ಮಲ್ಲಿರುವ ಸಾಂಪ್ರದಾಯಿಕ ಕಲೆ ಸಂಸ್ಕøತಿ ಸಾಹಿತ್ಯ, ಜನಪದ ಕೊಡುಗೆಗಳ ಮೇಲೆ ದಾಳಿ ಮಾಡಿವೆ. ಇದನ್ನು ಯಾರು ಸರಿಯಾದ ರೀತಿಯಲ್ಲಿ ಗಮನಿಸುತ್ತಿಲ್ಲ ಪುರಾತನ ಕಲೆಗಳು ಸಂಪ್ರ್ರದಾಯ ಎಲ್ಲವು ನಶಿಸಿ ಹೋಗುತ್ತಿವೆ. ಅದು ಹಳ್ಳಿಗಳಲ್ಲಿ ಸಂಪೂರ್ಣವಾಗಿ ಹಾಳಾಗುತ್ತಿರುವುದು ವಿಷಾಧÀನೀಯ, ಐತಿಹಾಸಿಕ ಬಾದಾಮಿ ತಾಲೂಕಿನ ಹಂಸನೂರ ಗ್ರಾಮ ಅನೇಕ ಹೆಣ್ಣು ಮಕ್ಕಳನ್ನು ಕಲಾವಿದರನ್ನು ಹೊರತಂದ ಗ್ರಾಮವಾಗಿದೆ ಆ ಗ್ರಾಮವನ್ನು ಕಲಾಗ್ರಾಮವನ್ನಾಗಿ ಮಾಡಬೇಕು ಅದನ್ನು ಮಾಡುವ ಹಾಗೆ ಸರಕಾರದ ಮೇಲೆ ಒತ್ತಡವನ್ನು ಹಾಕ ಬೇಕಾಗಿದೆ ಎಂದರು.
ಇಂದು ಹಂಸನೂರ ಗ್ರಾಮದ ಕಲಾವಿದರು ಬರುವ ದಿನಗಳಲ್ಲಿ ಒಳ್ಳೆ ಬದುಕನ್ನು ಕಟ್ಟಿಕೊಳ್ಳುವಂತಾಗ ಬೇಕಾಗಿದೆ ಎಂದು ಹೇಳಿದರು.
ಕಾಳಿದಾಸ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯ ಡಾ. ಲೋಕಣ್ಣ ಭಜಂತ್ರಿ ತಾಲೀಕಿನ ಶಾಸನಗಳಲ್ಲಿ ಸಾಂಸ್ಕøತಿಕ ಸಂಪತ್ತು ಎಂಬ ವಿಷಯ ಕುರಿತು ಮಾತನಾಡಿ ಬಾದಾಮಿ ಪರಿಸರದಲ್ಲಿ ಇರುವ ಶಾಸನಗಳು ನಮ್ಮ ಸಂಸ್ಕøತಿ ಕಲೆ, ಧಾರ್ಮಿಕ ಹಾಗೂ ಸಾಮಾಜಿಕ ಸತ್ವಗಳನ್ನು ತಿಳಿಸಿಕೊಡುತ್ತವೆ ಎಂದು ಶಾಸನಗಳ ಮಹತ್ವದ ಕುರಿತು ವಿಷಯ ಮಂಡಿಸಿದರು.
ಗೋಷ್ಠಿಯ ಅಧ್ಯಕ್ಷತೆಯನ್ನು ಡಾ. ವಾಯ್.ಎಮ್. ಯಾಕೊಳ್ಳಿ ವಹಿಸಿಕೊಂಡಿದ್ದು ವೇದಿಕೆಯಲ್ಲಿ ಸಮ್ಮೇಳನ ಸರ್ವಾಧ್ಯಕ್ಷ ಡಾ.ಕರವೀರಪ್ರಭು ಕ್ಯಾಲಕೊಂಡ, ಡಾ. ಈ.ಐ.ನಂದಿಕೋಲಮಠ, ಎಸ್.ಎಚ್. ನಾಡಗೌಡ್ರ, ತಾಲೂಕಾ ಅಕ್ಷರದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಆರ್.ಎಸ್.ಆದಾಪೂರ, ರಾಜೇಂದ್ರ ದೇಸಾಯಿ, ಎಸ್.ಎಚ್. ನರೆಣ್ಣವರ, ಡಾ.ಎಚ್.ಎಸ್.ಘಂಟಿ, ಎಮ್.ಎ.ಕೇಸರಿ ಎಸ್.ಎಮ್. ಭಂಡಾರಿ, ರಾಜೇಶ್ವರಿ ಬಾದವಾಡಗಿ, ಶೋಭಾ ಚಾವಡಿ ಈರಯ್ಯ ಹಾಲಭಾವಿ, ಜಿ.ಜಿ. ಕಟಗೇರಿ ಉಪಸ್ಥಿತರಿದ್ದರು. ಎಮ್.ಎ. ಘಂಟಿ ಸ್ವಾಗತಿಸಿದರು. ಉಜ್ವಲಕಾಂತ ಬಸರಿ ನಿರೂಪಿಸಿದರು. ವಾಯ್. ಎಫ್. ಶರೀಫ ವಂದಿಸಿದರು.