ರಸವೇ ಜನನ ವಿರಸವೆ ಮರಣ ಜೀವನ ಸಾಮರಸ್ಯ

ಬೀದರ್: ಜು.25: ವ್ಯಕ್ತಿ ವ್ಯಕ್ತಿ ಗತವಾಗಿ ಸ್ವಾರ್ಥಿ ಪುರಾಣಗಳಿಂದ ಸ್ವಾರ್ಥ ನಡೆದು ಬಂದಿದೆ ವೈಭವಿಕರಣ ಜಗತ್ತು ನಮಗೆ ತಲ್ಲಣಿಸಿದೆ ನಮ್ಮಮಕ್ಕಳಿಂದ ನಾವು ಬದಲಾವಣೆ ಸಹಕಾರ ಬಯಸಿದರೆ ಅದು ಭ್ರಮ ನಿರಸನಕ್ಕೆಕಾರಣ ಎಂದು ಪ್ರಗತಿಪರ ಚಿಂತಕ ಪೆÇ್ರ. ಸಿದ್ದು ಯಾಪಲಪರವಿ ನುಡಿದರು.
ನಗರದ ಡಾ. ಚನ್ನಬಸ ಪಟ್ಟದೇವೆವರ ಮಂದಿರದಲ್ಲಿ ವಚನ ಚಾರಿಟೇಬಲ್ ಸೊಸೈಟಿ ವತಿಯಿಂದ ವಚನ ಸಂಸ್ಕøತಿ ಕೌಟುಂಬಿಕನಿರ್ವಹಣೆ ಬಗೆಗಿನ ಕಾರ್ಯಾಗಾರದಲ್ಲಿ ಮಾತನಾಡುತ್ತ ದಾಂಪತ್ಯ ಜೀವನ ಬಗ್ಗೆ ಆತಂಕ ಬೇಡ. ವರ್ಷದಲ್ಲಿ ನಮ್ಮ ವ್ಯವಹಾರಿಕನಡೆವಳಿಕೆಯಿಂದಲೆ ವಿಚ್ಚೇದನ ವಾಗುತ್ತಿರುವುದು ಒಂದು ವಿಪರಾಸ್ಯ ನಮ್ಮ ಕೌಟುಂಬಿಕ ಜೀವನದಲ್ಲಿ ಹೊಂದಾಣಿಕೆ ಮಾಡಿಕೊಂಡಾಗ ಸಂತೃಪ್ತಿ ಸಾಧ್ಯ ಗಂಡ ಹೆಂಡತಿ ಯಲ್ಲಿ ಸಹನೆ ಶಕ್ತಿ ಇರಬೇಕಾಗಿರುವುದು ಅನಿವಾರ್ಯ ಸಣ್ಣ ವಿಷಯಕ್ಕೆ ಜಗಳ ಮಾಡಿ ಸ್ವ ಪ್ರತಿಷ್ಟೆಯಿಂದ ಮಾತನಾಡಿದರೆ ಕುಟುಂಬವೇ ನಿರ್ನಾಮ ಬಿಚ್ಚಿ ಹೇಳಬೇಕಾಗಿಲ್ಲ.
ಉತ್ತರ ಕರ್ನಾಟಕ ಸಾಂಸ್ಕೃತಿಕವಾದ ಪ್ರದೇಶ ನಮ್ಮ ಸಂಸ್ಕೃತಿ ಬಸವ ಪರಂಪರೆಯ ಮಳೆ ಅಲವಟ್ಟಿದೆ. ಇಲ್ಲಿ ಸಾಮಾಜಿಕ ಬದ್ಧತೆಗೆ ಒತ್ತು ನೀಡಲಾಗಿದೆ. ಅನುಭಮಂಟಪದಲ್ಲಿ ಲಿಂಗ ಬೇದಕ್ಕೆ ಅವಕಾಶ ವಿರಲಿಲ್ಲ ಅಂತಯೇ ಅಂದು ಸತಿಪತಿಗಳ ಬದುಕು ಬಂಗಾರವಾಗಿರುವುದೆಂಬುದಕ್ಕೆ ಅನೇಕ ಉದಾಹರಣೆಗೆ ಗಮನಿಸ ಬಹುದಾಗಿದೆ ಎಂದರು.
ಶರಣರ ವಿಚಾರಧಾರೆ ಆಂತರಿಕ ವಾಗಿ ಅಳವಿಡಿಸಕೊಂಡಹ ಹೋದರೆ ಬದುಕು ಸುಂದರ ಇತ್ತೀಚಿನ ದಿನಗಳಲ್ಲಿ ಜವಾಬ್ದಾರಿ ಹೆಚ್ಚಾದಂತೆಲ್ಲ ಮನಸ್ಸುಗಳು ಕಡದುತ್ತಿವೆ ಇದರಿಂದ ಹೊರ ಬರಲು ವಚನಗಳು ದಿನ ನಿತ್ಯ ಪಠಿಸಿ ಅರ್ಥೈಸಿಕೊಳ್ಳಬೇಕು ಎಂದರು.
ಮನೆಯಲ್ಲಿ ಹೆಂಡತಿ ಆಚಾರ ವಿಚಾರ ಒಂದಾಗಿಸಿಕೊಂಡರೆ ಅದು ಮೌಲ್ಯ ವಿತ ಸಂಸಾರ ನಮ್ಮ ಮನಸ್ಸು ಅವ್ಯವಸ್ಥೆ ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಡುತ್ತದೆ. ಅನುಭವ ಮಂಟಪದ ವಿಚಾರ ಪ್ರತಿಯೊಬ್ಬರಲ್ಲಿ ಬಿತ್ತಿದಾಗ ಜಾಗೃತ ನಿರ್ಮಾಣ ಮಾಡಲು ಸಾಧ್ಯ. ಕುಟುಂಬದಲ್ಲಿ ಅಗತ್ಯ ಅನಿವಾರ್ಯತೆ ಇದ್ದಾಗ ಸಾಮರಸ್ಯ ದಿಂದ ಚರ್ಚಿಸಿ ಮುನ್ನುಗಿದ್ದಾಗ ವಚನ ಸಂಸ್ಕೃತಿ ಹೊರಹೊಮ್ಮಿ ಶಾಂತವಾದ ಕೌಟುಂಬಿಕ ನಿರ್ವಹಣೆ ಮಾಡಲು ಸಾಧ್ಯ ಎಂದು ವಿಚಾರ ವ್ಯಕ್ತಪಡಿಸಿದರು.
ಈ ಕಾರ್ಯಾಗಾರದಲ್ಲಿ 150 ಶರಣ ದಂಪತಿಗಳು ಭಾಗವಹಿಸಿದ್ದು ಡಾ.ಎಸ್. ಆರ್. ಮಠಪತಿ, ರೇವಣಪ್ಪಮೂಲಗೆ, ಲಿಂಗಾರತಿ ನಾವದಗೆರೆ, ಶಿವಶಂಕರ ಟೋಕರೆ, ತಮ್ಮ ಪ್ರಶ್ನೆಗಳಿಗೆ ಸಮಂಜಸವಾದ ಉತ್ತರಗಳನ್ನು ಪಡೆದಿರುವುದು ಕಾರ್ಯಗಾರಕ್ಕೆ ಮೆರಗು ಬಂದಿದೆ.
ಈ ಸಂದರ್ಭದಲ್ಲಿ ರೇಖಾ ಯಾಪಲಪರವಿ, ರತ್ನಾ ಪಾಟೀಲ, ಜಯದೇವಿ ಯದಲಾಪೂರೆ, ಡಾ. ಬಸವರಾಜ ಬಲ್ಲೂರ, ಪ್ರಕಾಶ ಗಂದಿಗುಡೆ, , ಮಾಥರ್ಂತ ಮಹಾರಾಜ, ಸೇರಿದಂತೆ ನೂರಾರು ದಂಪತಿಗಳು ಉಪಸ್ಥಿತರಿದ್ದರು.
ರಮೇಶಮಠಪತಿ ಪ್ರಾಸ್ತಾವಿಕ ಮಾತನಾಡಿದರೆ, ಅಲ್ಲಮಪ್ರಭು ನಾವದಗೇರೆ ಸ್ವಾಗತಿಸಿದರೆ , ಶಿವಕುಮಾರ್ ಸಾಲಿ ಒಂದಿಸಿದರು.ಈ ಸಮಾರಂಭದಲ್ಲಿ ಮನ್ನಳ್ಳಿ ಗ್ರಾಮ ಆದರ್ಶ ದಂಪತಿಗಳಾದ ಪಾರ್ವತಿ ಮಹಾರುದ್ರಪ್ಪಾ ಸಂಗೋಳಗಿ ವಿಶೇಷವಾಗಿ ಸನ್ಮಾನಿ ಗೌವರಿಸಿದರು.