ರಸಪ್ರಶ್ನೆ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆಓದುವ ಅಭಿರುಚಿ ಬೆಳೆಸಿದ ಸಂಜೆವಾಣಿ: ಭೀಮಾಶಂಕರ್ ತೆಗ್ಗೆಳ್ಳಿ

ಕಲಬುರಗಿ,ಜೂ.6-ಪ್ರತಿ ವಿಧಾನಸಭೆ ಚುನಾವಣೆಯಲ್ಲಿ ಓದುಗರಿಗಾಗಿ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಚಿನ್ನ ಮತ್ತು ನಗದು ಬಹುಮಾನ ವಿತರಿಸುವುದರ ಮೂಲಕ ಸಂಜೆವಾಣಿ ಓದುವ ಅಭಿರುಚಿಯನ್ನು ಬೆಳೆಸುವ ಕೆಲಸ ಮಾಡುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ ಶ್ಲಾಘಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸಂಜೆ 2023ರ ವಿಧಾನಸಭೆ ಚುನಾವಣೆಯ ಪ್ರಯುಕ್ತ ಸಂಜೆವಾಣಿ ಓದುಗರಿಗಾಗಿ ಆಯೋಜಿಸಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಸಮಾರಂಭವನ್ನು ಅವರು ಪತ್ರಿಕೆ ಸಂಸ್ಥಾಪಕರಾದ ಡಾ.ಬಿ.ಎಸ್.ಮಣಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದರ ಮೂಲಕ ಮತ್ತು ಸಸಿಗೆ ನೀರೆರೆಯುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಇದೇ ರೀತಿ ಮುಂಬರುವ ದಿನಗಳಲ್ಲಿಯೂ ಸಂಜೆವಾಣಿ ಓದುಗರಿಗಾಗಿ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಲಿ, ಜನರಲ್ಲಿ ಪತ್ರಿಕೆಗಳನ್ನು ಓದುಗ ಅಭಿರುಚಿ ಬೆಳೆಸಲಿ ಎಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಹಾಯಕ ಆಯುಕ್ತರಾದ ಮಮತಾಕುಮಾರಿ, ಡಿಸಿಪಿ ಅಡ್ಡೂರು ಶ್ರೀನಿವಾಸಲು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ ಯಡ್ರಾಮಿ ಅವರು ಮಾತನಾಡಿ, ಸಾಮಾಜಿಕ ಜಾಲತಾಣಗಳ ಅಬ್ಬರದ ನಡುವೆಯೂ ಪತ್ರಿಕೆಗಳು ನಿಖರವಾದ ಮತ್ತು ಸತ್ಯವಾದ ಮಾಹಿತಿಯನ್ನು ಓದುಗರಿಗೆ ತಲುಪಿಸುವುದರ ಮೂಲಕ ತಮ್ಮ ವಿಶ್ವಾsಸಾರ್ಹತೆಯನ್ನು ಉಳಿಸಿಕೊಂಡಿವೆ ಎಂದರು.
ಶರಣಬಸವ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಟಿ.ವಿ.ಶಿವಾನಂದನ್, ಮಹಾಲಕ್ಷ್ಮೀ ಜ್ಯುವೆಲರ್ಸ್‍ನ ನಿರ್ದೇಶಕರಾದ ನಾಗರಾಜ ಮೈಲಾಪೂರ, ಮಣ್ಣೂರ್ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯ ಜನರಲ್ ಮ್ಯಾನೇಜರ್ ಮಹಮ್ಮದ್ ಇಸ್ಮಾಯಿಲ್ ಮುಖ್ಯಅತಿಥಿಗಳಾಗಿ ಆಗಮಿಸಿದ್ದರು. ಸಂಜೆವಾಣಿ ಪತ್ರಿಕೆಯ ಸಂಪಾದಕರಾದ ಟಿ.ಗಣೇಶಕುಮಾರ ಅಧ್ಯಕ್ಷತೆ ವಹಿಸಿದ್ದರು.
ಪತ್ರಿಕೆಯ ಹಿರಿಯ ವರದಿಗಾರ ಮಹೇಶ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಿಕೆಯ ಬೀದರ್ ಜಿಲ್ಲಾ ವರದಿಗಾರ ಹಾಗೂ ಬೀದರ್ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ ಸ್ವಾಗತಿಸಿದರು. ಜಾಹೀರಾತು ವಿಭಾಗದ ಮಹೇಶ ತಳಕೇರಿ ವಂದಿಸಿದರು. ಕುಮಾರಿ ಪ್ರಮೋದಿನಿ ಪ್ರಾರ್ಥನಾ ಗೀತೆ ಹಾಡಿದರು. ಗುರುರಾಜ ಕಾರ್ಯಕ್ರಮ ನಿರೂಪಿಸಿದರು.
ಹಿರಿಯ ವರದಿಗಾರ ಚಂದ್ರಕಾಂತ ಹುಣಸಗಿ, ವರದಿಗಾರರಾದ ನಜೀರ್ ಮಿಯಾನ್ ಹಟ್ಟಿ, ವಿಜಯೇಂದ್ರ ಕುಲಕರ್ಣಿ, ನಾಗರಾಜ ಹೂವಿನಹಳ್ಳಿ, ಹಿರಿಯ ಛಾಯಾಗ್ರಾಹಕ ಮಹ್ಮದ್ ಮುಕ್ತಾರೋದ್ದೀನ್, ಸಿಬ್ಬಂದಿಗಳಾದ ಮಮತಾ ಯಡ್ರಾಮಿ, ನಿರ್ಮಲಾ ಗುಡ್ಡದ, ಶಶಿಕಲಾ ಹಳ್ಳಿಖೇಡ, ಅಂಬಿಕಾ ಅಂಗಡಿ, ಶರಣು ಕಣ್ಣಿ, ಪ್ರಶಾಂತ ಉದನೂರ, ಕಿರಣಕುಮಾರ ಪೋತನಕರ, ರಘುವೀರಸಿಂಗ್ ಠಾಕೂರ, ಆಕಾಶ ದೇವನೂರ, ಜಗನ್ನಾಥ, ಪ್ರಸರಣ ವಿಭಾಗದ ಶಿವಶರಣಪ್ಪ ದೇವನೂರ, ಜಾಹೀರಾತು ವಿಭಾಗದ ಬಸವರಾಜ ಮಂಗಾಣೆ ಸೇರಿದಂತೆ ಎಲ್ಲ ಸಿಬ್ಬಂದಿ ವರ್ಗದವರು, ಬಹುಮಾನಿತರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಬಹುಮಾನ ವಿತರಣೆ
ವಿನೋದ ಪಾಟೀಲ ಶಹಾಪುರ ಅವರಿಗೆ ಮಹಾಲಕ್ಷ್ಮೀ ಜ್ಯುವೆಲರ್ಸ್ ಪ್ರಾಯೋಜಕತ್ವದಲ್ಲಿ ಸೂಪರ್ ಬಂಪರ್ ಬಹುಮಾನವಾದ 10 ಗ್ರಾಂ. ಚಿನ್ನದ ನೆಕ್ಲೆಸ್, ಸಿದ್ದು ಯಡ್ರಾಮಿ ಅವರಿಗೆ ಮಣ್ಣೂರ್ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯ ಪ್ರಾಯೋಜಕತ್ವದಲ್ಲಿ ಪ್ರಥಮ ಬಹುಮಾನವಾಗಿ 50 ಸಾವಿರ ರೂ.ನಗದು, ಕೀರ್ತಿ ಕಲಬುರಗಿ ಅವರಿಗೆ ಬೀದರ್ ಅರುಣೋದಯ ಎಂಟರ್ ಪ್ರೈಸೆಸ್‍ನ ರವೀಂದ್ರ ಸ್ವಾಮಿ ಅವರ ಪ್ರಾಯೋಜಕತ್ವದಲ್ಲಿ 40 ಸಾವಿರ ರೂ.ನಗದು, ಬಿಜೆಪಿ ಮುಖಂಡರಾದ ಶಿವಕಾಂತ ಮಹಾಜನ ಅವರ ಪ್ರಾಯೋಜಕತ್ವದಲ್ಲಿ 25 ಸಾವಿರ ರೂ.ನಗದು ಬಹುಮಾನವನ್ನು ರಾಘವೇಂದ್ರ, ಶ್ರೇಯಾ ಶಾಸ್ತ್ರಿ, ವಿನೋದ ಪಾಟೀಲ, ರಾಜಶೇಖರ ಶಾಸ್ತ್ರಿ, ಬನಶಂಕರಿ ಕಲಬುರಗಿ, ನಿರ್ಮಲಾ, ಭೀಮಾಶಂಕರ, ಪ್ರವೀಣ್ ಅರನಾಳ, ಸ್ವಾತಿ, ಸಿದ್ಧಾರ್ಥ ಯಡ್ರಾಮಿ, ಮಡಿವಾಳಪ್ಪ ಚಿನಮಳ್ಳಿ, ಆವಿಷ್ಕಾರ ಮದಗೋಡ, ರೇಖಾ ಅಶೋಕ ಯಡ್ರಾಮಿ, ಶ್ರೀದೇವಿ ಯಡ್ರಾಮಿ, ಬಸವರಾಜ ಹಲಕರ್ಟಿ, ಸ್ವಾತಿ ಕುಲಕರ್ಣಿ, ಕಸ್ತೂರಿ ಜೇವರ್ಗಿ, ವಿಕ್ಟೋರಿಯಾ ಬೀದರ್, ಚಂದ್ರು ಅಕ್ಕಲಕೋಟ, ಭಾರತಿ ಸಾಕೆ, ಗುರಣ್ಣಗೌಡ, ಶೋಭಾ ಜೇವರ್ಗಿ, ಲಕ್ಷ್ಮೀ ಹಲಕರ್ಟಿ, ನಿರ್ಮಲಾ ಶಹಾಪುರ, ರಾಜು ಯಡ್ರಾಮಿ( ತಲಾ 1 ಸಾವಿರ ರೂ.ನಗದು) ಅವರಿಗೆ ವಿತರಿಸಲಾಯಿತು.