ರಸಪ್ರಶ್ನೆ ರಾಜ್ಯ ಮಟ್ಟಕ್ಕೆ ಆಯ್ಕೆ

(ಸಂಜೆವಾಣಿ ವಾರ್ತೆ)
ಸಿಂಧನೂರು.ಡಿ.೨೨- ತಾಲೂಕಿನ ತುರವಿಹಾಳ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪಿಯುಸಿ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇದು ತುಂಬಾ ಸಂತೋಷದ ವಿಷಯ ಎಂದು ಕಾಲೇಜಿನ ಪ್ರಾಚಾರ್ಯರಾದ ಮಲ್ಲಪ್ಪ ತಿಳಿಸಿದರು.
೨೦೨೩-೨೪ ನೇ ಸಾಲಿನ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ರಾಯಚೂರು ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಗುರುವಾರ (ಡಿ.೨೧) ರಂದು ನಡೆಸಿದ ಭಿತ್ತಿ ಪತ್ರ, ಪ್ರಬಂಧ, ರಸಪ್ರಶ್ನೆ ಯಲ್ಲಿ ಚಟುವಟಿಕೆಗಳಲ್ಲಿ ತುರವಿಹಾಳ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಸುನೀತಾ ತಂ ನಿಂಗಪ್ಪ (ದ್ವಿತೀಯ ಪಿಯುಸಿ) ಕರಿಯಪ್ಪ ತಂ ನಿಂಗಪ್ಪ ದೇವರಮನಿ (ಪ್ರಥಮ ಪಿ.ಯು.ಸಿ) ಜಿಲ್ಲೆಯಲ್ಲಿ ಭಾಗವಹಿಸಿ ಜಿಲ್ಲಾ ಮಟ್ಟದಲ್ಲಿ ಗೆದ್ದು ರಾಜ್ಯಮಟ್ಟದಲ್ಲಿ ಆಯ್ಕೆಯಾಗಿದ್ದಾರೆ. ರಾಜ್ಯಮಟ್ಟದಲ್ಲಿ ಗೆದ್ದು ಕಾಲೇಜಿನ ನಮ್ಮ ತಾಲೂಕಿನ ಕೀರ್ತಿ ಬೆಳಗಲಿ ಎಂದು ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು, ಪಾಲಕರು ಆಶಿಸಿದರು. ಕಾಲೇಜಿನ ರಾಜ್ಯ ಶಾಸ್ತ್ರ ಉಪನ್ಯಾಸಕರಾದ ಮಂಜುನಾಥ ಹೊಸಮನಿ ನೋಡಲ್ ಅಧಿಕಾರಿ ಯಾಗಿ ಭಾಗವಹಿಸಿ ವಿದ್ಯಾರ್ಥಿಗಳನ್ನು ಕರೆದೊಯ್ದು ಪ್ರೋತ್ಸಾಹಿಸಿದ್ದಾರೆ ಎಂದು ತಿಳಿಸಿದರು.