ರಸಗೊಬ್ಬರ ಲಾರಿ ಅಪಘಾತ: ಚಾಲಕನಿಗೆ ಗಾಯ

ಸಂಜೆವಾಣಿ ವಾರ್ತೆ
ಹನೂರು ಜು 4 : ಹನೂರು ತಾಲ್ಲೂಕಿನ ಗಡಿ ಭಾಗವಾದ ನಾಲ್ ರೋಡ್ ಸಮೀಪದ ಗರಿಕೆಕಂಡಿ ಚೆಕ್ ಪೆÇೀಸ್ಟ್ ಸಮೀಪ ತಮಿಳುನಾಡಿನ ಈರೋಡ್ ನಿಂದ ವೈವಸಾಯಕ್ಕೆ ರೈತರು ಉಪಯೋಗಿಸುವ ರಸಗೊಬ್ಬರ ತುಂಬಿಕೊಂಡು ಕರ್ನಾಟಕದ ಮೈಸೂರಿನತ್ತ ಬರುತಿದ್ದ ಲಾರಿಯೊಂದು ಚಾಲಕನ ಅಜಾಗರುಕತೆಯಿಂದ ನಿಯಂತ್ರಣ ತಪ್ಪಿ ಅಪಘಾತವಾಗಿದ್ದು, ಚಾಲಕ ಗಂಭೀರವಾಗಿ ಗಾಯ ಗೊಂಡಿದ್ದಾನೆ.
ತಮಿಳುನಾಡಿನಲ್ಲಿ ರಸಗೊಬ್ಬರಗಳು ಕಡಿಮೆ ಬೆಲೆ ಇರುವುದರಿಂದ ಅಕ್ರಮವಾಗಿ ಕರ್ನಾಟಕದ ಗಡಿ ಜಿಲ್ಲೆ ಗಳಿಗೆ ತಂದು ಇಲ್ಲಿ ರೈತರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತೀರುವುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ ಈಗ ತನಿಖೆಯಿಂದ ಹೊರ ಬರ ಬೇಕಾಗಿದೆ.
ಅಪಘಾತದಲ್ಲಿ ಲಾರಿಯೂ ಸಂಪೂರ್ಣ ಜಖಂ ಗೊಂಡಿದ್ದು, ರಸಗೊಬ್ಬರದ ಮೂಟೆಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದಾವೆ ಕೆಲ ಕಾಲ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಗಾಯಾಳು ಚಾಲಕನನ್ನು ತಮಿಳುನಾಡಿನ ಹಂದಿಯೂರು ಆಸ್ಪತ್ರೆಗೆ ಸೇರಿಸಲಾಗಿದೆ. ಎಂದು ತಿಳಿದು ಬಂದಿದೆ
ಈ ಸಂಬಂಧ ತಮಿಳುನಾಡಿನ ಬರಗೂರು ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈ ಕೊಂಡಿದ್ದಾರೆ.