ರಸಗೊಬ್ಬರ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ

ಮೈಸೂರು,ಏ.20:ರಸಗೊಬ್ಬರ ಬೆಲೆ ಏರಿಕೆ ವಿರೋಧಿಸಿ ಮೈಸೂರು ಜಿಲ್ಲಾ ರೈತ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಿ ಪ್ರಧಾನ ಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಪತ್ರ ಸಲ್ಲಿಸಿದರು.
ಮೈಸೂರು ತಾಲೂಕು ಕಛೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟ ನಾಕಾರರು ಮಾತನಾಡಿ ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಹೇಳುತ್ತಲೇ ಬಂದಿರುವ ಕೇಂದ್ರ ಸರ್ಕಾರ ರೈತರ ಆದಾಯವನ್ನು ದ್ವಿಗುಣಗೊಳಿಸದೆ ಪ್ರತಿವರ್ಷ ಕೃಷಿ ಉತ್ಪನ್ನ ವೆಚ್ಚವನ್ನು ಹೆಚ್ಚಿಸುತ್ತಲೇ ಬರುತ್ತಿದೆ. ರಸಗೊಬ್ಬರ ಬೆಲೆಯನ್ನು ದುಬಾರಿ ಮಾಡಿ ಕೃಷಿಕರು ಕೃಷಿಯನ್ನೇ ಬಿಡುವಂತ ಹುನ್ನಾರ ನಡೆಸಿದೆ ಎಂದು ಸಾರ್ವತ್ರಿಕವಾಗಿ ಚರ್ಚೆಗಳಾಗುತ್ತಿವೆ. ಕೇಂದ್ರ ಸರ್ಕಾರ ಮೂರು ಕೃಷಿ ವಿರೋಧಿ ಮಸೂದೆಗಳನ್ನು ರೂಪಿಸಿ ಕೃಷಿ ಕಸುಬನ್ನೇ ಕಾಪೆರ್Çೀರೇಟ್ ಕಂಪನಿಗಳ ವಶಕ್ಕೆ ಒಪ್ಪಿಸಲು ಹೊರಟಿದ್ದು ಗೊಬ್ಬರದ ಬೆಲೆ ಏರಿಕೆಯಿಂದ ರೈತ ಸಮುದಾಯವು ಮತ್ತಷ್ಟು ಸಂಕಷ್ಟಕ್ಕೆ ಒಳಗಾಗುವಂತೆ ಮಾಡಿದೆ. ಕೂಡಲೇ ಸರ್ಕಾರ ಏರಿಸಿರುವ ಬೆಲೆಯನ್ನು ಇಳಿಸಬೇಕೆಂದು ಒತ್ತಾಯಿಸಿದರು.
ತಾಲೂಕು ಅಧ್ಯಕ್ಷ ಪಿ. ಮರಂಕಯ್ಯ, ಚಂದ್ರಶೇಖರ್, ನಾಗನಹಳ್ಳಿ ವಿಜಯೇಂದ್ರ, ಮಹೇಶ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.