ರಸಗೊಬ್ಬರ ಬೆಲೆ ಏರಿಕೆ ಖಂಡಿಸಿ ಏ.೨೬ರಂದು ಎಂಪಿ ಮತ್ತು ಕೇಂದ್ರ ಮಂತ್ರಿಗಳ ಕಚೇರಿಗೆ -ರೈತಸಂಘ ಪಿಕೆಟಿಂಗ್

ರಾಯಚೂರು.ಏ.೨೨-ರಸಗೊಬ್ಬರ ಬೆಲೆ ಏರಿಕೆ ಖಂಡಿಸಿ ಏ.೨೬ರಂದು ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ರಾಜ್ಯದ ಎಲ್ಲ ಸಂಸದರ ಮತ್ತು ಕೇಂದ್ರ ಸಚಿವ ಸದಾನಂದ ಗೌಡರ ಮನೆಯ ಮುಂದೆ ಪಿಕೆಟಿಂಗ್ ಮಾಡಿ ಮನವಿ ಸಲ್ಲುಸಲಾಗುತ್ತದೆ ಎಂದು ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲೀ ಪಾಟೀಲ್ ಅವರು ಹೇಳಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ಕೇಂದ್ರ ಸರ್ಕಾರ ಇತ್ತೀಚಿಗೆ ರಸಗೊಬ್ಬರ ಬೆಲೆಯನ್ನು ಶೇ.೪೦ರಿಂದ ೪೫ರಷ್ಟು ಹೆಚ್ಚಿಸಿದ್ದು ರೈತರಿಗೆ ತೀವ್ರ ತೊಂದರೆ ಯಾಗಿದೆ ಇದರಿಂದ ಕೃಷಿ ಉತ್ಪಾದನಾ ಬೆಲೆ ಕಡಿಮೆ ಆಗುತ್ತಿದೆ ಈ ಕೊರೊನ ಮಹಾಮಾರಿಯಿಂದ ಕೃಷಿ ಕ್ಷೇತ್ರದ ನಲಿಗಿ ಹೋಗಿದ್ದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾವಸ್ತುಗಳು ಬೆಲೆ ಏರಿಕೆ ಆಗಿರುವುದರಿಂದ ರಸಗೊಬ್ಬರದ ಬೆಲೆ ಏರಿಕೆ ಮಾಡಲಾಗಿದೆ ಎಂದು ಉಡಾಫೆ ಉತ್ತರವನ್ನು ನೀಡುತ್ತಿದ್ದಾರೆ ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾದ ಕನಸು ಎಲ್ಲೆಗೆ ಹೋಯಿತು ಎಂದು ಪ್ರಶ್ನೆ ಮಾಡಿದರು.
ಕೇಂದ್ರ ಸರ್ಕಾರವು ರೈತರನ್ನು ಕಡೆಗಾಣಿಸುತ್ತಿದ್ದೆ ಇಂಧನ ಬೆಲೆ ಹೇರಿಕೆ ಮೂರು ಕೃಷಿ ಕಾಯ್ದೆ ಜಾರಿ ಮಾಡಿದ್ದಾರೆ ಅದರಿಂದ ರಸಗೊಬ್ಬರ ಬೆಲೆ ಏರಿಕೆ ಖಂಡಿಸಿ ಏ.೨೬ರಂದು ಸಂಸದರ ಕಚೇರಿ ಮುಂದೆ ರಸಗೊಬ್ಬರ ಬೆಲೆ ಕಡಿಮೆ, ವಿದ್ಯುತ್ ಸಮಸ್ಯೆ ಕುರಿತಂತೆ ರೈತರ ಜಮೀನುಗಳಿಗೆ ೧೦ ಗಂಟೆ ವಿದ್ಯುತ್ ಒದಗಿಸಲು ಕೋವಿಡ್ ನೀತಿ ಸಂಹಿತೆ ಜಾರಿ ಇರುವುದರಿಂದ ಕೇವಲ ತಾಲೂಕು ಅಧ್ಯಕ್ಷರು ಹಾಗೂ ಜಿಲ್ಲಾ ಪದಾಧಿಕಾರಿಗಳ ಸೇರಿ ಸಾಮಾಜಿಕ ಅಂತರ ಕಾಯ್ದು ಕೊಂಡು ಪಿಕೆಟಿಂಗ್ ಹಾಕಲಾಗುತ್ತದೆ ಎಂದರು.
ರೈತ ಸಂಘದ ಟವಲ್ ಗೆ ಹಣ ಜಮಾ ಮಾಡುವ ಬಗ್ಗೆ,ಸಂಘದ ಪತ್ರಿಕೆಗೆ ಚಂದಾದಾರರನ್ನು ನೊಂದಯಿಸಿಕೊಳ್ಳಲು ನೋಡುತ್ತಿದ್ದಾರೆ, ರಾಜ್ಯದ ಪ್ರತಿ ಜಿಲ್ಲೆಯ ೧೦೦ಜನ ಕಾರ್ಯಕರ್ತರಿಗೆ ರೈತರ ಬಗ್ಗೆ ತರಬೇತಿಯನ್ನು ನೀಡಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಭೂದಯ್ಯ ಸ್ವಾಮಿ, ಮಲ್ಲಣ್ಣ ದಿನ್ನಿ,ಗೌರಿ ನಾಯಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.