ರಸಗೊಬ್ಬರ ಬೆಲೆ ಏರಿಕೆ ಕನ್ನಡ ಭೂಮಿ ಖಂಡನೆ

ಕಲಬುರಗಿ:ಏ.10: ಈಗಾಗಲೇ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಬಿಸಿ ಜನರಿಗೆ ತಟ್ಟಿರುವಾಗ ಈಗ ಕೇಂದ್ರ ಸರಕಾರ ಏಕಾಏಕಿ ರಸಗೊಬ್ಬರ ಬೆಲೆ ಏರಿಕೆ ಮಾಡಿ ರೈತರ ಬೆನ್ನಿಗೆ ಬರೆ ಹಾಕಿದೆ ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ಸಿರಗಾಪೂರ ಆರೋಪಿಸಿದ್ದಾರೆ.

ಡಿ ಅಮೋನಿಯಂ ಫಾಸ್ಫೇಟ್ (ಡಿಎಪಿ) ರಸಗೊಬ್ಬರ ಬೆಲೆ 1200 ಇದ್ದದ್ದು 1900 ರೂಗಳಿಗೆ ಏರಿಕೆ ಮಾಡಲಾಗಿದೆ.ಇದರಿಂದ ರೈತರಿಗೆ ಹೆಚ್ಚುವರಿಯಾಗಿ 700 ರೂ ಹೊಡೆತ ಬಿದ್ದಿದೆ.ಇದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.ಇನ್ನು ಇಫ್ಕೋ ಗೊಬ್ಬರ 1185 ಇದ್ದದ್ದು 1800 ರೂಪಾಯಿಗೆ ಏರಿಕೆಯಾಗಿದೆ.20-20 ರಸಗೊಬ್ಬರವನ್ನು 925ಕ್ಕೆ ಮಾರಾಟವಾಗುತ್ತಿತ್ತು.ಈಗ ಅದರ ಬೆಲೆ 1350 ರೂಗೆ ಏರಿಕೆ ಮಾಡಲಾಗಿದೆ.ಇದರಿಂದ ರೈತರಿಗೆ 425 ಹೆಚ್ಚು ಹಣ ಪಾವತಿಸಬೇಕು.ಕಳೆದ ಹಲವು ವರ್ಷಗಳಿಂದ ಈ ಪ್ರಯಾಣದ ಬೆಲೆ ಏರಿಕೆ ಕಂಡಿಲ್ಲ.ಧಿಡೀರನೆ ಬೆಲೆ ಹೆಚ್ಚಳಕ್ಕೆ ಸರಕಾರದ ರೈತ ವಿರೋಧಿ ನೀತಿಯೇ ಕಾರಣವಾಗಿದೆ.

ರೈತರು ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗುತ್ತಿಲ್ಲ.ಕೃಷಿ ಕೂಲಿ ಕಾರ್ಮಿಕರ ವೇತನ ಹೆಚ್ಚಾಗಿದೆ.ಬೀಜಗಳ ಬೆಲೆ ಸೇರಿದಂತೆ ರಸಗೊಬ್ಬರ ಬೆಲೆ ಏರಿಕೆಯಿಂದಾಗಿ ರೈತರಿಗೆ ಸಂಕಷ್ಟ ಎದುರಾಗಿದೆ.ಕೂಡಲೇ ಕೇಂದ್ರ ಸರ್ಕಾರ ರಸಗೊಬ್ಬರ ಬೆಲೆ ಏರಿಕೆ ಹಿಂಪಡೆಯಬೇಕು.ಕೃಷಿ ಸಲಕರಣೆಗಳ ಮೇಲೆ ಹೆಚ್ಚಿನ ಸಬ್ಸಿಡಿ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.