ರಸಗೊಬ್ಬರ, ಕ್ರಿಮಿನಾಶಕಗಳ ನೂತನ ಮಳಿಗೆ ಆರಂಭ

ಆನೇಕಲ್‌ಮಾ.೦೬:ಮರಸೂರು ಗೇಟ್ ಬಳಿಯಿರುವ ಆರ್.ಟಿ.ಓ.ಕಚೇರಿ ಮುಂಬಾಗದಲ್ಲಿ ರೈತರಿಂದ ರೈತರಿಗೋಸ್ಕರ ನೂತನವಾಗಿ ಪ್ರಾರಂಭಗೊಂಡ ರಸಗೊಬ್ಬರ ಹಾಗೂ ಕ್ರಿಮಿನಾಶಕಗಳ ನೂತನ ಮಾರಾಟ ಮಳಿಗೆ ಆನೇಕಲ್ ತಾಲ್ಲೂಕು ಹಸಿರು ಮನೆ ಬೆಳೆಗಾರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಕೂನು ಮಡಿವಾಳ ಸೋಮಣ್ಣ ಹಾಗೂ ಸಂಘದ ಪದಾದಿಕಾರಿಗಳು ಚಾಲನೆ ನೀಡಿದರು.
ಸೋಮಣ್ಣ ಮಾತನಾಡಿ ಈ ದೇಶದ ಬೆನ್ನುಲುಬು ರೈತ, ರೈತ ಪ್ರಗತಿಗೊಂಡರೆ ಮಾತ್ರ ದೇಶ ಅಭಿವೃದ್ದಿಯತ್ತಾ ಸಾಗಲು ಸಾಧ್ಯವಾಗುತ್ತದೆ ಎಂಬ ಸತ್ಯವನ್ನು ಅರಿತು ಈಗಾಗಲೇ ಆನೇಕಲ್ ತಾಲ್ಲೂಕು ಹಸಿರು ಮನೆ ಬೆಳೆಗಾರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ರೈತರ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸುತ್ತಾ ಬಂದಿದ್ದು,
ರೈತರಿಗೆ ಇನ್ನಷ್ಠು ಸೇವೆಯನ್ನು ನೀಡಬೇಕು ಮತ್ತು ರೈತರಿಗೆ ಖಾಸಗಿ ರಸಗೊಬ್ಬರ ಹಾಗೂ ಕ್ರಿಮಿನಾಶಕಗಳ ಮಾರಾಟ ಮಳಿಗೆ ಮಾಲೀಕರಿಂದ ಆಗುವಂತಹ ತೊಂದರೆಗಳನ್ನು ತಪ್ಪಿಸಬೇಕು ಮತ್ತು ರೈತರಿಗೆ ಗುಣಮಟ್ಟಣದಲ್ಲಿ ರಸಗೊಬ್ಬರಗಳು ಮತ್ತು ಕ್ರಿಮಿನಾಶಕಗಳ ಔಷದಿಗಳು ನೇರವಾಗಿ ಕೈಗೆ ಸಿಗಬೇಕು ಎಂಬುವ ಉದ್ದೇಶದಿಂದ ರೈತರಿಂದಲೇ ದೇಣಿಗೆಯನ್ನು ಪಡೆದು ಸುಮಾರು ೩೫ ಲಕ್ಷ ರೂಪಾಯಿ ವೆಚ್ಚದಲ್ಲಿ ಇಂದು ಆನೇಕಲ್ ತಾಲ್ಲೂಕು ಹಸಿರು ಮನೆ ಬೆಳೆಗಾರರ ಕ್ಷೇಮಾಭಿವೃದ್ದಿ ಸಂಘದ ಆವರಣದಲ್ಲಿಯೇ ನೂತನವಾಗಿ ಸಾವಯುವ ಮತ್ತು ರಸಗೊಬ್ಬರ ಹಾಗೂ ಕ್ರಿಮಿನಾಶಕಗಳ ಮಾರಾಟ ಮಳಿಗೆ ಪ್ರಾರಂಭಿಸಿದ್ದೇವೆ ಅಂದರೆ ಈ ಮಳಿಗೆಯಲ್ಲಿ ಯಾವುದೇ ಮಧ್ಯವರ್ತಿಗಳು ಇರುವುದಿಲ್ಲ, ಕಂಪನಿಗಳಿಂದ ನೇರವಾಗಿ ಬಂದಂತಹ ಗುಣಮಟ್ಟದ ರಸಗೊಬ್ಬರ ಹಾಗೂ ಕ್ರಿಮಿನಾಶಕಗಳನ್ನು ನೇರವಾಗಿ ರೈತರ ಕೈಸೇರುವಂತೆ ಮಾಡುವುದೇ ನಮ್ಮ ಉದ್ದೇಶವಾಗಿದೆ ಎಂದರು. ಯಾವುದೇ ಸರ್ಕಾರ ಮಾಡದೇ ಇರುವಂತಹ ಕೆಲಸವನ್ನು ಆನೇಕಲ್ ತಾಲ್ಲೂಕು ಹಸಿರು ಮನೆ ಬೆಳೆಗಾರರ ಕ್ಷೇಮಾಭಿವೃದ್ದಿ ಸಂಘವು ಮಾಡಿದೆ ಎಂದರೆ ತಪ್ಪಾಗಲಾರದು. ಹಸಿರು ಮನೆ ಬೆಳೆಗಾರರು ಸಾಕಷ್ಠು ಸಮಸ್ಯೆಗಳನ್ನು ಅನುಭವಿಸುತ್ತಿದ್ದು ಸರ್ಕಾರ ಕೂಡಲೇ ಸಮಸ್ಯೆಗಳನ್ನು ಬಗೆಹರಿಸಿಕೊಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ಆನೇಕಲ್ ತಾಲ್ಲೂಕು ಹಸಿರು ಮನೆ ಬೆಳೆಗಾರರ ಕ್ಷೇಮಾಭಿವೃದ್ದಿ ಸಂಘದ ಉಪಾಧ್ಯಕ್ಷ ಲೋಕೇಶ್ ರೆಡ್ಡಿ, ಕಾರ್ಯದರ್ಶಿ ಮೋಹನ್, ಮಂಜುನಾಥ್, ಅಶೋಕ್, ಬಾಬುರೆಡ್ಡಿ, ರಾಜ್ ಗೋಪಾಲ್ ರೆಡ್ಡಿ, ದೊಡ್ಡಹಾಗಡೆ ಮದು, ರಾಮಕೃಷ್ಣಪ್ಪ, ವೆಂಕಟೇಶ್, ಕೀರ್ತನಾ, ಗೋಪಾಲ್ ರೆಡ್ಡಿ, ಮಲ್ಲೇಶ್ ರೆಡ್ಡಿ, ಶಿವಕುಮಾರ್, ಲಾಯರ್ ವಿಜಯಕುಮಾರ್, ಪ್ರಸಾದ್ ರೆಡ್ಡಿ, ಆರ್. ಮಂಜುನಾಥ್ ಜಯಶಂಕರ್ ರೆಡ್ಡಿ, ಪಾರ್ಥಪ್ಪ ಮತ್ತು ಸಂಘದ ಪದಾದಿಕಾರಿಗಳು ಹಾಜರಿದ್ದರು.