ಬೇಕಾಗುವ ಸಾಮಾಗ್ರಿಗಳು : ಒಣ ಮೆಣಸಿನಕಾಯಿ, ಕೊತ್ತಂಬರಿ ಬೀಜ , ಕಾಳು ಮೆಣಸಿನಕಾಯಿ, ಜೀರಿಗೆ, ಮೆಂತೆ ಬೀಜ, ಸಾಸಿವೆ, ಎಣ್ಣೆ, ಕರಿಬೇವು , ಇಂಗು, ಅರಶಿನ ಪುಡಿ
ಮಾಡುವ ವಿಧಾನ: ಒಂದು ಬಾಣಲೆಯಲ್ಲಿ ಮೊದಲು ಒಣ ಮೆಣಸಿನಕಾಯಿಗಳನ್ನು ಹಾಕಿ ಚೆನ್ನಾಗಿ ಗರಿ ಗರಿಯಾಗುವ ತನಕ ಹುರಿದುಕೊಳ್ಳಿ. ನಂತರ ಕೊತ್ತಂಬರಿ ಬೀಜಗಳನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ಹಾಗೆಯೇ ಒಂದೂವರೆ ದೊಡ್ಡ ಚಮಚ ಆಗುವಷ್ಟು ಕಾಳು ಮೆಣಸನ್ನು ಹಾಕಿ. ನಂತರ, ೨ ಚಮಚ ಜೀರಿಗೆಯನ್ನು ಹಾಕಿ. ಮೆಂತೆ ಬೀಜ ಕಡಿಮೆ ಪ್ರಮಾಣದಲ್ಲಿರಬೇಕು.ಇಲ್ಲದಿದ್ದರೆ ತುಂಬಾ ಕಹಿ ಬರುತ್ತದೆ . ಒಂದು ದೊಡ್ಡ ಚಮಚ ಸಾಸಿವೆಯು ರಸಂಗೆ ಒಳ್ಳೆ ಪರಿಮಳ ನೀಡುತ್ತದೆ . ಒಂದು ದೊಡ್ಡ ಚಮಚ ಆಗುವಷ್ಟು ಸಾಸಿವೆಯನ್ನು ಕೂಡ ಹಾಕಿ ಹುರಿಯಿರಿ. ಎಣ್ಣೆ ಹಾಕದೆಯೂ ಹುರಿಯಬಹುದು ಅಥವಾ ಕೇವಲ ಒಂದು ಚಮಚದಷ್ಟು ಎಣ್ಣೆಯನ್ನು ಹಾಕಿ ಎಲ್ಲ ಸಾಮಾಗ್ರಿಗಳನ್ನು ಹುರಿಯಬಹುದು. ಎಲ್ಲಾ ಮಸಾಲೆಗಳನ್ನು ಕಡಿಮೆ ಉರಿಯಲ್ಲಿ ೪ ರಿಂದ ೫ ನಿಮಿಷಗಳ ಕಾಲ ಹುರಿಯಿರಿ ನಿರಂತರವಾಗಿ ಕೈ ಬಿಡದೆ ಹುರಿದುಕೊಳ್ಳಿ . ೪ ರಿಂದ ೫ ನಿಮಿಷ ಹುರಿದಾದ ಮೇಲೆ ಕರಿ ಬೇವು ಹಾಗೂ ಅರ್ಧ ಚಮಚ ಇಂಗನ್ನು ಹಾಕಿಕೊಳ್ಳಿ. ಬೇಕಿದ್ದರೆ ಅರಸಿನ ಪುಡಿಯನ್ನು ಸಹ ಹಾಕಿ.ಅರಸಿನ ಪುಡಿಯನ್ನು ಹಾಕದಿದ್ದರೂ ನಡೆಯುತ್ತದೆ.ರಸಂ ಮಾಡುವ ಸಮಯದಲ್ಲಿ ಅರಸಿನ ಪುಡಿಯನ್ನು ಹಾಕಬಹುದು. ಎಲ್ಲಾ ಹುರಿದ ಪದಾರ್ಥಗಳನ್ನು ತಣ್ಣಗಾಗಲು ಬಿಡಿ ನಂತರ ಅವುಗಳನ್ನು ಮಿಕ್ಸಿ ಜಾರ್ ಗೆ ಹಾಕಿ ನುಣ್ಣಗೆ ರುಬ್ಬಿ ಪುಡಿಯನ್ನು ಗಾಳಿಯಾಡದ ಬಾಟಲಿಗೆ ಹಾಕಿ ಇಡಿ.