ರಷ್ಯಾದ ಸ್ಪುಟ್ನಿಕ್ -ವಿ ಲಸಿಕೆ ತುರ್ತು ಬಳಕೆಗೆ ದೇಶದಲ್ಲಿ ಅನುಮತಿ

ನವದೆಹಲಿ, ಏ. 12- ದೇಶದಲ್ಲಿ ಕೊರೋನಾ ಸೋಂಕಿಗೆ ಲಸಿಕೆ‌ ನೀಡಲು ರಷ್ಯಾ ಅಭಿವೃದ್ಧಿ ಪಡಿಸಿರುವ ಸ್ಪುಟ್ನಿಕ್-ವಿ ಲಸಿಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.

ಭಾರತೀಯ ಔಷಧ ಮಹಾ ನಿಯಂತ್ರಣಾಲಯ ತಜ್ಞರ ಸಮಿತಿ ಸ್ಪಟ್ನಿಕ್ -ವಿ ಲಸಿಕೆಯ ಗುಣಮಟ್ಟ ಸೇರಿದಂತೆ ವಿವಿಧ ವಿಷಯಗಳನ್ನು ವರದಿಯನ್ನು ಪರಿಶೀಲಿಸಿ ಅಂತಿಮವಾಗಿ ದೇಶದಲ್ಲಿ ತುರ್ತು ಬಳಕೆಗೆ ಅನುಮತಿ ನೀಡಿದೆ

ಇದರೊಂದಿಗೆ ದೇಶದಲ್ಲಿ ಕೋವಿಡ್ ಸೋಂಕಿನ‌ ವಿರುದ್ದ ಹೋರಾಟಕ್ಕೆ ನೀಡುತ್ತಿರುವ ಮೂರನೇ ಲಸಿಕೆ ಯಾಗಿದೆ.

ಈಗಾಗಲೇ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯ‌ ಮತ್ತು ಆಸ್ಟ್ರಾಝೆನಕಾ ಅಭಿವೃದ್ಧಿ ಪಡಿಸಿರುವ “ಕೋವಿಶೀಲ್ಡ್”, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮತ್ತು ಭಾರತ್ ಬಯೋಟೆಕ್ ಸಂಸ್ಥೆ ಜಂಟಿಯಾಗಿ ಅಭಿವೃದ್ಧಿಪಡಿಸಿರುವ “ಕೋವಾಕ್ಸಿನ್” ಲಸಿಕೆ ದೇಶದಲ್ಲಿ ಕೋವಿಡ್ ಸೋಂಕಿತರಿಗೆ ನೀಡಲಾಗುತ್ತಿದೆ.

2020ರ ಸೆಪ್ಟೆಂಬರ್ ನಲ್ಲಿ ಡಾ. ರೆಡ್ಡೀಸ್ ಪ್ರಯಾಗಾಲಯ ರಷ್ಯಾದ ನೇರ ಹೂಡಿಕೆ ನಿಧಿ ಅಡಿಯಲ್ಲಿ ‌ ಅಭಿವೃದ್ಧಿ ಪಡಿಸಿರುವ ಸ್ಪುಟ್ನಿಕ್‌- ವಿ ಲಸಿಕೆಯನ್ನು ದೇಶದಲ್ಲಿ ಜನರ ಮೇಲೆ ಪ್ರಯೋಗ ಮಾಡಲಾಗಿತ್ತು.ಅದರ ಸಮಗ್ರ ಮಾಹಿತಿಯನ್ನು ತಜ್ಞರ ಸಮಿತಿ ಸಂಪೂರ್ಣವಾಗಿ ಪರಿಶೀಲಿಸಿದ ಬಳಿಕ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಿದೆ.

ದೇಶದಲ್ಲಿ ಈಗಾಗಲೇ ಕೋವ್ಯಾಕ್ಸಿನ್ ಮತ್ತು ಕೋವಿ ಶೀಲ್ಡ್ ಲಸಿಕೆಯನ್ನು ಜನವರಿ 16ರಿಂದ ನೀಡಲಾಗುತ್ತದೆ .ಇದೀಗ ಇದರ ಜೊತೆಗೆ ಸ್ಪುಟ್ನಿಕ್ -ವಿ ಲಸಿಕೆ ನೀಡಲು ಕೇಂದ್ರ ಸರಕಾರ ಅನುಮತಿ ನೀಡಿದೆ

ಪ್ರಾಯೋಗಿಕ ಹಂತದಲ್ಲಿ ಸ್ಪುಟ್ನಿಕ್ – ವಿ‌ಲಸಿಕೆ ಶೇ. 91.4 ರಷ್ಟು ಯಶಸ್ವಿಯಾಗಿತ್ತು.ಈ ಹಿನ್ನೆಲೆಯಲ್ಲಿ ಈ ಲಸಿಕೆ ಬಳಿಕೆಗೆ ಅವಕಾಶ ಮಾಡಿಕೊಡಲಾಗಿದೆ.

ದೇಶಗಳಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಂಕಿತರಿಗೆ ಲಸಿಕೆ ನೀಡಲಿ ಈಗಿರುವ ಎರಡು ಲಸಿಕೆಯ ಜೊತೆಗೆ ಮತ್ತೊಂದು ಸೇರ್ಪಡೆಯಾಗಿದೆ