ರಷ್ಯಾದಿಂದ ಕಚ್ಚಾ ತೈ ಆಮದು, ರೈತರಿಗೆ ಅನುಕೂಲ

ಮಾಸ್ಕೋ,ಜು.೧೦- ರಷ್ಯಾದಿಂದ ರಸಗೊಬ್ಬರ ಮತ್ತು ಕಚ್ಚಾ ತೈಲವನ್ನು ಭಾರತ ಆಮದು ಮಾಡಿಕೊಳ್ಳುವುದರಿಂದ ದೇಶದ ರೈತರು ಮತ್ತು ಸಾಮಾನ್ಯ ಜನರಿಗೆ ಅನುಕೂಲವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಭಾರತ-ರಷ್ಯಾ ಸ್ನೇಹ ಮತ್ತು ಬಾಂಧವ್ಯದ ಪರಿಣಾಮವಾಗಿ ರೈತರಿಗೆ ಮಣ್ಣಿನ ಪೋಷಕಾಂಶದ ಕೊರತೆ ಎದುರಿಸದಂತೆ ಮತ್ತು ಸಾಮಾನ್ಯ ಜನರನ್ನು ತೊಂದರೆಗಳಿಂದ ರಕ್ಷಿಸಲು ಸಹಕಾರಿಯಾಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ದ್ವಿಪಕ್ಷೀಯ ಸಹಕಾರ ಕುರಿತ ಚರ್ಚೆ ಬಳಿಕ ಈ ಮಾಹಿತಿ ಹಂಚಿಕೊಂಡಿರುವ ಅವರು ರಸಗೊಬ್ಬರದ ಸಮರ್ಪಕ ಲಭ್ಯತೆ ಖಾತ್ರಿಪಡಿಸುವಲ್ಲಿ ದೊಡ್ಡ ಪಾತ್ರ ವಹಿಸಿದೆ. ದೇಶದ ರೈತರ ಹಿತಾಸಕ್ತಿಗೆ ಬದ್ಧರಾಗಿದ್ದೇವೆ” ಎಂದು ಹೇಳಿದ್ದಾರೆ

ರಷ್ಯಾ, ಭಾರತಕ್ಕೆ ರಸಗೊಬ್ಬರದ ಪ್ರಮುಖ ಪೂರೈಕೆದಾರರಾಗಿ ಹೊರಹೊಮ್ಮಿದೆ ಮತ್ತು ಕಳೆದ ಮೂರು ವರ್ಷಗಳಲ್ಲಿ ಆಮದು ಪ್ರಮಾಣ ಶೇಕಡ ೩೦೦ ಕ್ಕಿಂತ ಹೆಚ್ಚಿದೆ. ೨೦೨೧-೨೨ ರಲ್ಲಿ ೧.೨೬ ಮೆಟ್ರಿಕ್ ಟನ್‌ನಿಂದ ೨೦೨೩-೨೪ ರಲ್ಲಿ ೫.೨೩ ಮೆಟ್ರಿಕ್ ಟನ್‌ಗೆ ಏರಿಕೆಯಾಗಿದೆ.

ಕಳೆದ ಹಣಕಾಸು ವರ್ಷದಲ್ಲಿ ಆಮದು ಮಾಡಿಕೊಂಡ ರಸಗೊಬ್ಬರ ೨೦೨೧-೨೨ ರಲ್ಲಿ ೭೭೩.೫ ದಶಲಕ್ಷ ಡಾಲರ್‌ಗೆ ಹೋಲಿಸಿದರೆ ಸುಮಾರು ೨.೧ ಶತಕೋಟಿ ಡಾಲರ್‍ಗೆ ಏರಿಕೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ

ಕಳೆದ ಮೂರು ವರ್ಷಗಳಲ್ಲಿ ಕಚ್ಚಾ ತೈಲದ ಸಾಗಣೆಯ ಮೌಲ್ಯವು ೫.೨ ಶತಕೋಟಿ ಡಾಲರ್‌ನಿಂದ ೫೪.೫ ಶತಕೋಟಿ ಡಾಲರ್‌ಗೆ ಹೆಚ್ಚಾಗುವ ಮೂಲಕ ಒಟ್ಟಾರೆ ೧೦ ಪಟ್ಟು ಹೆಚ್ಚಾಗಿದೆ .೨೦೨೨-೨೩ ಕ್ಕೆ ಹೋಲಿಸಿದರೆ ಕಳೆದ ವರ್ಷ ಕಚ್ಚಾ ಆಮದು ಶೇಕಡಾ ೪೫ರಷ್ಟು ಹೆಚ್ಚಾಗಿದೆ ಎಂದಿದ್ಧಾರೆ

ಜಾಗತಿಕ ಪೂರೈಕೆ ಸರಪಳಿಯು ಅಡ್ಡಿಪಡಿಸಿದಾಗ ಕೋವಿಡ್ -೧೯ ಸಾಂಕ್ರಾಮಿಕ ಸಮಯದಲ್ಲಿ ಮಣ್ಣಿನ ಪೋಷಕಾಂಶದ ಸಾಕಷ್ಟು ಲಭ್ಯತೆ ಖಚಿತಪಡಿಸಿಕೊಳ್ಳಲು ರಷ್ಯಾದಿಂದ ರಸಗೊಬ್ಬರ ಆಮದು ಸರ್ಕಾರಕ್ಕೆ ಸಹಾಯ ಮಾಡಿದೆ.ಉಕ್ರೇನ್‌ನಲ್ಲಿನ ಯುದ್ಧದ ನಂತರವೂ ಭಾರತೀಯ ಕಂಪನಿಗಳು ದೇಶದಿಂದ ಮಣ್ಣಿನ ಪೊ?ಷಕಾಂಶಗಳನ್ನು ಆಮದು ಮಾಡಿಕೊಳ್ಳುವುದನ್ನು ಮುಂದುವರೆಸಿವೆ ಎಂದು ತಿಳಿಸಿದೆ