ರಷ್ಯಾದಲ್ಲಿ ೩ನೇ ಹಂತದ ಲಸಿಕೆ ಪ್ರಯೋಗ ಯಶಸ್ವಿ

KAZAN, RUSSIA - MAY 8, 2020: A medical worker handles blood samples at Tatarstan's Republican Clinical Hospital admitting patients with suspected or diagnosed coronavirus infection. Yegor Aleyev/TASS Ðîññèÿ. Êàçàíü. Ìåäèöèíñêèé ñîòðóäíèê â ëàáîðàòîðèè âî âðåìÿ òåñòèðîâàíèÿ àíàëèçà êðîâè â Ðåñïóáëèêàíñêîé êëèíè÷åñêîé áîëüíèöå, ãäå îêàçûâàþò ïîìîùü ïàöèåíòàì c êîðîíàâèðóñíîé èíôåêöèåé èëè ïîäîçðåíèåì íà íåå. Åãîð Àëååâ/ÒÀÑÑ

ಮಾಸ್ಕೊ, ಆ. ೨- ಕೊರೊನಾ ವೈರಸ್ ಸೋಂಕು ನಿಯಂತ್ರಣಕ್ಕೆ ರಷ್ಯಾದಲ್ಲಿ ಅಭಿವೃದ್ಧಿಪಡಿಸಿರುವ ಲಸಿಕೆಯ ೩ನೇ ಹಂತದ ಪ್ರಯೋಗ ಯಶಸ್ವಿಯಾಗಿ ಪೂರ್ಣಗೊಂಡಿದೆ.
ಗಮಲೇಯ ವಿಶ್ವವಿದ್ಯಾನಿಲಯ ನೇತೃತ್ವದಲ್ಲಿ ಮಿಲಿಟರಿ ಹಾಗೂ ಸರ್ಕಾರಿ ಸಂಶೋಧಕರು ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದರು.
ಈ ಲಸಿಕೆಯ ೨ ಹಂತದ ಪ್ರಯೋಗಗಳು ಈಗಾಗಲೇ ಯಶಸ್ವಿಯಾಗಿ ಪೂರ್ಣಗೊಂಡಿದ್ದವು.ಇದರ ಬೆನ್ನ ಹಿಂದೆಯೇ ಲಸಿಕೆಯ ೩ನೇ ಹಂತದ ಪ್ರಯೋಗ ಸಹ ಯಶಸ್ವಿಯಾಗಿದೆ ಎಂದು ರಷ್ಯಾ ಮಾಧ್ಯಮಗಳು ವರದಿ ಮಾಡಿವೆ.
ಕೊರೊನಾ ವೈರಸ್ ಲಸಿಕೆಯ ವೈದ್ಯಕೀಯ ಪ್ರಯೋಗಗಳು ಈಗಾಗಲೇ ಪೂರ್ಣಗೊಂಡಿದ್ದು, ಲಸಿಕೆ ನೋಂದಣಿಗಾಗಿ ಸರ್ಕಾರ ಹಾಗೂ ವೈದ್ಯಕೀಯ ಔಷಧಿ ನಿಯಂತ್ರಣ ಸಂಸ್ಥೆಯೊಂದಿಗೆ ಪ್ರಕ್ರಿಯೆಗಳನ್ನು ಆರಂಭಿಸಲಾಗಿದೆ ಎಂದು ಲಸಿಕೆ ಅಭಿವೃದ್ಧಿಪಡಿಸಿರುವ ಸಂಶೋಧಕರು ತಿಳಿಸಿರುವುದಾಗಿ ಸುದ್ದಿಸಂಸ್ಥೆ ಹೇಳಿದೆ.
ಲಸಿಕೆಯ ವಿವಿಧ ಹಂತದ ಪ್ರಯೋಗಗಳು ಯಶಸ್ವಿಯಾಗುತ್ತಿರುವ ಬೆನ್ನಲ್ಲೆ ಬರುವ ಅಕ್ಟೋಬರ್‌ನಲ್ಲಿ ಸಾಮೂಹಿಕ ಕೋವಿಡ್ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ರಷ್ಯಾ ಆರೋಗ್ಯ ಸಚಿವರು ಹೇಳಿಕೆ ನೀಡಿದ್ದಾರೆ.
ಆದರೆ, ರಷ್ಯಾದ ಕೆಲ ಮಾಧ್ಯಮಗಳು ೩ನೇ ಹಂತದ ವೈದ್ಯಕೀಯ ಪ್ರಯೋಗಗಳಿಗೆ ಸಾಕಷ್ಟು ಕಾಲಾವಕಾಶ ತಗಲುವುದರಿಂದ ಕಡಿಮೆ ಅವಧಿಯಲ್ಲಿ ಲಸಿಕೆ ಪ್ರಯೋಗ ಪೂರ್ಣಗೊಳ್ಳಲು ಸಾಧ್ಯವಿಲ್ಲ ಎಂದು ಹೇಳಿವೆ.
ಈಗಾಗಲೇ ಪೂರ್ಣಗೊಳಿಸಿರುವ ಎರಡೂ ಹಂತದ ಲಸಿಕೆ ಪ್ರಯೋಗಗಳಿಗಿಂತಲೂ ೩ನೇ ಹಂತದ ಪ್ರಯೋಗ ಅತಿ ಹೆಚ್ಚು ಪ್ರಾಮುಖ್ಯತೆ ಹೊಂದಿರುವುದರಿಂದ ಹಾಗೂ ಮನುಷ್ಯನ ದೇಹದಲ್ಲಿ ಲಸಿಕೆ ಹೇಗೆ ಕೆಲಸ ಮಾಡಲಿದೆ.
ರೋಗ ನಿರೋಧಕ ಶಕ್ತಿ ಹೇಗೆ ಹೆಚ್ಚಳವಾಗಲಿದೆ ಎನ್ನುವ ಕುರಿತಂತೆಯೂ ಪರೀಕ್ಷೆ ನಡೆಸಬೇಕಾಗಿದೆ ಹಾಗೂ ಸಾವಿರಾರು ಜನರನ್ನು ಪರೀಕ್ಷೆಗೆ ಒಳಪಡಿಸಲು ಸಾಕಷ್ಟು ಸಮಯಬೇಕಾಗಲಿದೆ ಎಂದು ಮಾಧ್ಯಮಗಳು ತಿಳಿಸಿವೆ. ಆದರೂ, ೨ನೇ ಹಂತದ ಪ್ರಯೋಗದ ಫಲಿತಾಂಶ ಆಧರಿಸಿ ಜನರಿಗೆ ಲಸಿಕೆ ಹಾಕಬಹುದು ಎಂದು ಹೇಳಲಾಗುತ್ತಿದ್ದು, ಜನರಿಗೆ ಲಸಿಕೆ ನೀಡಿದ ನಂತರ ೩ನೇ ಹಂತದ ಪ್ರಯೋಗಗಳ ಪರಿಶೀಲನೆಗೆ ಮುಂದಾಗಬಹುದೆಂದೂ ಅಭಿಪ್ರಾಯಪಡಲಾಗಿದೆ.ಆದರೆ, ಈ ಎಲ್ಲ ಕ್ರಮಗಳು ರಷ್ಯಾದ ಕೈಗೊಳ್ಳುವ ಸರ್ಕಾರದ ನಿರ್ಧಾರವನ್ನು ಅವಲಂಬಿಸಿದೆ.