ರಷ್ಯಾಗೆ ಶಸ್ತ್ರಾಸ್ತ್ರ ಪೂರೈಕೆಯಿಲ್ಲ

ಪ್ಯೊಗ್ಯಾಂಗ್ (ಉತ್ತರ ಕೊರಿಯಾ), ಮೇ ೧೭- ರಷ್ಯಾಗೆ ಉತ್ತರ ಕೊರಿಯಾ ಶಸ್ತ್ರಾಸ್ತ್ರಗಳನ್ನು ಸಾಗಿಸುತ್ತಿದೆ ಎಂಬ ಆರೋಪವನ್ನು ಉತ್ತರ ಕೊರಿಯಾ ನಾಯಕ ಕಿಮ್ ಜೊಂಗ್ ಉನ್ ಅವರ ಸಹೋದರಿ ಕಿಮ್ ಯೊ ಜೊಂಗ್ ಅವರು ನಿರಾಕರಿಸಿದ್ದು, ಇದೊಂದು ಅಸಂಬದ್ಧವಾಗಿದೆ ಎಂದು ಕರೆದಿದ್ದಾರೆ.
ಉಕ್ರೇನ್ ವಿರುದ್ಧದ ಯುದ್ದದಲ್ಲಿ ರಷ್ಯಾಗೆ ಉತ್ತರ ಕೊರಿಯಾವು ಪರಮಾಣು-ಶಸ್ತ್ರಸಜ್ಜಿತ ಉತ್ತರದಿಂದ ಫಿರಂಗಿ ಮತ್ತು ಕ್ರೂಸ್ ಕ್ಷಿಪಣಿಗಳನ್ನು ಪೂರೈಸಲಿದೆ ಎಂಬ ಆತಂಕವನ್ನು ಅಮೆರಿಕಾ ವ್ಯಕ್ತಪಡಿಸುತ್ತಲೇ ಬಂದಿದೆ. ಈ ಆರೋಪಗಳಿಗೆ ಸದ್ಯ ಉತ್ತರ ನೀಡಿರುವ ಕಿಮ್ ಯೊ ಜೊಂಗ್, ಶುಕ್ರವಾರ ಅಧಿಕೃತ ಕೊರಿಯಾದ ಕೇಂದ್ರ ಸುದ್ದಿ ಸಂಸ್ಥೆ ಪ್ರಕಟಿಸಿದ ಹೇಳಿಕೆಯ ಪ್ರಕಾರ, “ನಮ್ಮ ಮಿಲಿಟರಿ ತಾಂತ್ರಿಕ ಸಾಮರ್ಥ್ಯಗಳನ್ನು ಯಾವುದೇ ದೇಶಕ್ಕೆ ರಫ್ತು ಮಾಡುವ ಉದ್ದೇಶವನ್ನು ಉತ್ತರ ಕೊರಿಯಾ ಹೊಂದಿಲ್ಲ. ಆದರೆ ನಾವು ಉತ್ಪಾದಿಸಿದ ಶಸ್ತ್ರಾಸ್ತ್ರಗಳನ್ನು ರಷ್ಯಾಗೆ ಪೂರೈಸಲಾಗುತ್ತಿದೆ ಎಂಬ ತಪ್ಪು ಅಭಿಪ್ರಾಯವನ್ನು ಅಮೆರಿಕಾ ಹಾಗೂ ದಕ್ಷಿಣ ಕೊರಿಯಾ ಸೃಷ್ಟಿಸುತ್ತಿದೆ. ನಮಗೆ ಅತ್ಯಂತ ತುರ್ತು ವಿಷಯವೆಂದರೆ ಯಾವುದನ್ನಾದರೂ ’ಜಾಹೀರಾತು’ ಅಥವಾ ’ರಫ್ತು’ ಮಾಡುವುದು ಅಲ್ಲ, ಆದರೆ ನಮ್ಮ ಸೈನ್ಯದ ಯುದ್ಧ ಸನ್ನದ್ಧತೆ ಮತ್ತು ಯುದ್ಧ ನಿರೋಧಕವನ್ನು ಗುಣಮಟ್ಟ ಮತ್ತು ಪ್ರಮಾಣದಲ್ಲಿ ಹೆಚ್ಚು ಪರಿಪೂರ್ಣವಾಗಿಸುವುದು ಎಂದು ಕಿಮ್ ಯೋ ಜೊಂಗ್ ತಿಳಿಸಿದ್ದಾರೆ. ಬಹುಮಟ್ಟಿಗೆ ಪ್ರತ್ಯೇಕವಾಗಿರುವ ಉತ್ತರ ಕೊರಿಯಾವು ಇತ್ತೀಚೆಗೆ ಮಾಸ್ಕೋದೊಂದಿಗೆ ಮಿಲಿಟರಿ ಸಂಬಂಧಗಳನ್ನು ಬಲಪಡಿಸಿದೆ. ಅಲ್ಲದೆ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಆಡಳಿತದ ಮೇಲೆ ಅಂತಾರಾಷ್ಟ್ರೀಯ ನಿರ್ಬಂಧಗಳನ್ನು ಮೇಲ್ವಿಚಾರಣೆ ಮಾಡುವ ತಜ್ಞರ ಸಮಿತಿಯ ನವೀಕರಣವನ್ನು ನಿರ್ಬಂಧಿಸಲು ಯುಎನ್ ಸೆಕ್ಯುರಿಟಿ ಕೌನ್ಸಿಲ್‌ನಲ್ಲಿ ವೀಟೋವನ್ನು ಬಳಸಿದ್ದಕ್ಕಾಗಿ ಉತ್ತರ ಕೊರಿಯಾವು ಕಳೆದ ತಿಂಗಳು ರಷ್ಯಾಕ್ಕೆ ಧನ್ಯವಾದ ತಿಳಿಸಿತ್ತು.