ರಷ್ಯಾಕ್ಕೆ ಬುದ್ದಿ ಕಲಿಸಲು ಉಕ್ರೇನ್ ಪಣ

ನ್ಯೂಯಾರ್ಕ್, ಸೆ.೨೨- ಉಕ್ರೇನ್‌ನಲ್ಲಿ ನಡೆಸುತ್ತಿರುವ ಯುದ್ದವನ್ನು ನಿಲ್ಲಿಸುವ ವಿಚಾರದಲ್ಲಿ ರಷ್ಯಾ ಯಾವುದೇ ರೀತಿಯಲ್ಲಿ ಗಂಭೀರತೆ ಪ್ರದರ್ಶಿಸುತ್ತಿಲ್ಲ. ನಾವು ರಷ್ಯಾ ಸೈನಿಕರನ್ನು ಉಕ್ರೇನ್‌ನಿಂದ ಹಿಮ್ಮೆಟ್ಟಿಸಲಿದ್ದೇವೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತಿಳಿಸಿದ್ದಾರೆ. ಅವರು ನ್ಯೂಯಾರ್ಕ್‌ನಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡುತ್ತಿದ್ದರು.
ರಷ್ಯಾದಲ್ಲಿ ಸೇನೆಯನ್ನು ಆಂಶಿಕವಾಗಿ ಜಮಾವಣೆಗೊಳಿಸಲು ಅಧ್ಯಕ್ಷ ವ್ಯಾದಿಮಿರ್ ಪುಟಿನ್ ಆದೇಶ ನೀಡಿದ ಬೆನ್ನಿಗೆ ಝೆಲೆನ್ಸ್ಕಿ ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಿದರು. ಒಂದೆಡೆ ಪುಟಿನ್ ಒಂದೆಡೆ ಮಾತುಕತೆಗಳ ಬಗ್ಗೆ ಮಾತನಾಡುತ್ತಾರೆ. ಆದರೆ ಮತ್ತೊಂದೆಡೆ ಮಿಲಿಟರಿ ಪಡೆಯನ್ನು ಸಜ್ಜುಗೊಳಿಸುವಿಕೆ ಪ್ರಕ್ರಿಯೆಂiiನ್ನು ಮುಂದುವರೆಸುತ್ತಿದ್ದಾರೆ. ಅಲ್ಲದೆ ಮಾತುಕತೆಗಳ ಬಗ್ಗೆ ಮಾತನಾಡುತ್ತಾರೆ. ಅದೂ ಅಲ್ಲದೆ ಉಕ್ರೇನ್‌ನ ಆಕ್ರಮಿತ ಪ್ರದೇಶಗಳಲ್ಲಿ ಹುಸಿ ಜನಾಭಿಪ್ರಾಯ ಸಂಗ್ರಹಣೆಗಳ ಬಗ್ಗೆ ಮಾತನಾಡುತ್ತಿದ್ದಾರೆ. ನಾವು ನಮ್ಮ ಬಲವನ್ನು ಇಡೀ ದೇಶಾದ್ಯಂತ ವಿಸ್ತರಿಸಬಹುದು. ಉಕ್ರೇನ್ ವಿರುದ್ಧ ರಷ್ಯಾ ಘೋರ ಅಪರಾಧ ಮಾಡಿದ್ದು, ಅದಕ್ಕವರು ತಕ್ಕ ಶಿಕ್ಷೆ ಅನುಭವಿಸಬೇಕು. ಅಲ್ಲದೆ ಸೂಕ್ತ ರೀತಿಯಲ್ಲಿ ಅವರು ಬೆಲೆ ತೆರಬೇಕು. ನಮ್ಮ ಪ್ರದೇಶವನ್ನು ಕದ್ದ, ಸಾವಿರಾರು ಜನರ ಕೊಲೆಗಳಿಗೆ, ಮಹಿಳೆಯರು ಮತ್ತು ಪುರುಷರ ಚಿತ್ರಹಿಂಸೆ ಮತ್ತು ಅವಮಾನಗಳಿಗೆ ರಷ್ಯಾ ವಿರುದ್ಧ ಉಕ್ರೇನ್ ಶಿಕ್ಷೆಯನ್ನು ಆಗ್ರಹಿಸುತ್ತಿದೆ. ರಷ್ಯಾ ನಿಜವಾದ ಮಾತುಕತೆಗಳಿಗೆ ಭಯ ಪಡುತ್ತಿದ್ದು, ಯಾವುದೇ ನ್ಯಾಯಯುತ ಅಂತಾರಾಷ್ಟ್ರೀಯ ಜವಾಬ್ದಾರಿಗಳನ್ನು ಪೂರೈಸಲು ಬಯಸುವುದಿಲ್ಲ ಎಂದು ಝೆಲೆನ್ಸ್ಕಿ ತಿಳಿಸಿದ್ದಾರೆ.