ರಶ್ಮಿಕಾ ಮಂದಣ್ಣಗೆ ಹಾಟ್ ಸ್ಟೆಪ್ಪರ್ ಪ್ರಶಸ್ತಿ

ಮುಂಬೈ, ಜು ೧೬- ಎಚ್ ಟಿ ಇಂಡಿಯಾದ ಮೋಸ್ಟ್ ಸ್ಟೈಲಿಶ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾದ ಅನುಪಮ್ ಖೇರ್ ಅವರು ರಶ್ಮಿಕಾ ಮಂದಣ್ಣ ರೊಂದಿಗೆ ಫೋನ್‌ನಲ್ಲಿ ಪೋಟೋ ಕ್ಲಿಕ್ ಸಿಕೊಳ್ಳಲು ಮುಂದಾದಾಗ ರಶ್ಮಿಕಾ ನಾಚಿ ನೀರಾದ ಪ್ರಸಂಗ ನಡೆದಿದೆ.
ರಶ್ಮಿಕಾ ಕೆಂಪು ಡ್ರೆಸ್‌ನಲ್ಲಿ ಹಾಟ್ ಗೆ ಕಾಣಿಸಿಕೊಂಡರೆ, ಅನುಪಮ್ ಫಾರ್ಮಲ್ ಗ್ರೇ ಸೂಟ್ ಧರಿಸಿದ್ದರು. ಅಲ್ಲದೇ ಇಬ್ಬರು ಒಟ್ಟಿಗೆ ಪೋಟೋಗೆ ಪೋಸ್ ನೀಡಿದರು.
ಅನುಪಮ್ ಖೇರ್ ಮತ್ತು ರಶ್ಮಿಕಾ ಮಂದಣ್ಣ ಭಾಗವಹಿಸಿ ಪರಸ್ಪರ ಅಭಿಮಾನವನ್ನು ಪ್ರದರ್ಶಿಸಿದಲ್ಲದೇ ರೆಡ್ ಕಾರ್ಪೆಟ್ ಮೇಲೆ ಇಬ್ಬರೂ ಒಟ್ಟಿಗೆ ಪೋಸ್ ನೀಡಿದರು, ಮತ್ತು ಅನುಪಮ್ ಕೂಡ ತನ್ನ ಫೋನ್ ಅನ್ನು ಎದುರಗಡೆಯವರಿಗೆ ಹಸ್ತಾಂತರಿಸಿ ಪೋಟೋ ಕ್ಲಿಕ್ ಮಾಡಲು ಹೇಳಿದರು.ಕ್ಯಾಮರಾಗಳಿಗೆ ಅನುಪಮ್ ಜೊತೆ ಪೋಸ್ ಕೊಡುವ ಮುನ್ನ ರಶ್ಮಿಕಾ ಕೆನ್ನೆ ತಟ್ಟಿ ನಗುತ್ತಿದ್ದರು.
ಮೋಸ್ಟ್ ಸ್ಟೈಲಿಶ್ ಹಾಟ್‌ಸ್ಟೆಪ್ಪರ್ ಪ್ರಶಸ್ತಿಯನ್ನು ಗೆದ್ದಿರುವ ರಶ್ಮಿಕಾ ಮಂದಣ್ಣ ಅವರು ಈವೆಂಟ್‌ನಲ್ಲಿ ಸಿಹಿ ಭಾಷಣ ಮಾಡಿದರು. ವೇದಿಕೆಯಲ್ಲಿ ತನ್ನನ್ನು ಪರಿಚಯಿಸಿಕೊಂಡರು, “ನನ್ನನ್ನು ತಿಳಿದಿಲ್ಲದವರಿಗೆ ನನ್ನ ಹೆಸರು ರಶ್ಮಿಕಾ ಮಂದಣ್ಣ” ಎಂದು ಹೇಳಿದರು. ಅಲ್ಲಿರುವ ಎಲ್ಲರಿಗೂ ಅವಳ ಹೆಸರು ತಿಳಿದಿದೆ ಎಂದಾಗ “ನಾನು ಇನ್ನೂ ನನ್ನನ್ನು ಪರಿಚಯಿಸಿಕೊಳ್ಳಬೇಕು, ಏಕೆಂದರೆ ನಾನು ಇಲ್ಲಿಗೆ ಬಂದಿರುವುದು ಇದೇ ಮೊದಲು. ಇದು ತುಂಬಾ ವಿಶೇಷವಾಗಿದೆ … ನಾನು ಅಂತಹ ಸುಂದರವಾದ ಮುಖಗಳ ಮುಂದೆ ಮಾತನಾಡುತ್ತಿದ್ದೇನೆ … ಇಲ್ಲಿಗೆ ಬರಲು ಆರು ವರ್ಷಗಳ ಶ್ರಮ, ಪಟ್ಟಿದ್ದೇನೆ ಎಂದರು ರಶ್ಮಿಕಾ.”
ರಶ್ಮಿಕಾ ಸದ್ಯ ಅನಿಮಲ್, ಪುಷ್ಪ ೨, ಮಿಷನ್ ಮಜ್ನು ಮುಂತಾದ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.