ರಶ್ಮಿಕಾಜಯ್ ಡೇಟಿಂಗ್ ವೈರಲ್

ಮುಂಬೈ, ಜ ೪- ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಏನು ಹೇಳಿದ್ರು, ಏನು ಮಾಡಿದ್ರು, ಎಲ್ಲಿಗೆ ಹೋದ್ರು ಭಾರಿ ಚರ್ಚೆಯ ವಿಚಾರವಾಗುತ್ತಿದೆ ಎಂಬುದರಲ್ಲಿ ಸಂದೇಹವೇ ಇಲ್ಲ.
ರಶ್ಮಿಕಾ ತನಗೇ ಗೊತ್ತೊ ಗೊತ್ತಿಲ್ಲದೇ ನೆಟ್ಟಗರಿಗೆ ಪ್ರತಿದಿನ ಚರ್ಚೆಯ ಆಹಾರವಾಗಿ ಬಿಟ್ಟಿದ್ದಾರೆ ಎನ್ನಬಹುದು.
ಇದೀಗ ತನ್ನ ಸಿನಿಮಾ ವಿಚಾರಗಳಿಗೆ ಮಾತ್ರವಲ್ಲ ವೈಯಕ್ತಿಕ ವಿಚಾರಗಳಲ್ಲೂ ಸುದ್ದಿಯಾಗ್ತಾರೆ. ವಿಜಯ್ ದೇವರಕೊಂಡ ಜೊತೆ ನ್ಯೂ ಇಯರ್ ಸೆಲೆಬ್ರೇಷನ್ ಮಾಡಿ ಸಿಕ್ಕಿಹಾಕಿಕೊಂಡಿದ್ದು, ಮತ್ತೆ ಟ್ರೋಲ್ಗಳು ಶುರುವಾಗಿದೆ.
ಇಬ್ಬರು ಒಟ್ಟಿಗೆ ಹೊಸ ವರ್ಷ ಸೆಲಬ್ರೇಶನ್ ಮಾಡಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದ್ದು, ಇಬ್ಬರು ಒಂದೇ ಸ್ಥಳದಲ್ಲಿರೋ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ನಡುವೆ ರಶ್ಮಿಕಾ ಮಂದಣ್ಣ ಲೈವ್ ವಿಡಿಯೋ ಮಾಡಲು ಹೋಗಿ ಸಿಕ್ಕಿ ಹಾಕಿಕೊಂಡಿದ್ದಾರೆ.
ಹೊಸ ವರ್ಷಕ್ಕೆಂದು ರಶ್ಮಿಕಾ ಮಂದಣ್ಣ ರೆಸಾರ್ಟ್ ನಲ್ಲಿದ್ದುಕೊಂಡು ಇನ್ ಸ್ಟಾ ಗ್ರಾಮ್ನಲ್ಲಿ ಲೈವ್ ಹೋಸ್ಟ್ ಮಾಡಿದ್ದಾರೆ. ಈ ವೇಳೆ ಅಭಿಮಾನಿಗಳು ಕೇಳಿದ ಅನೇಕ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಮಿಷನ್ ಮಜ್ನು ಸಿನಿಮಾ ಬಗ್ಗೆ ಕೂಡ ಅಭಿಮಾನಿಗಳ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.
ಅಭಿಮಾನಿಗಳ ಪ್ರಶ್ನೆಗೆ ರಶ್ಮಿಕಾ ಉತ್ತರಿಸುತ್ತಿದ್ರು, ನಿಮ್ಮ ವಯಸ್ಸು ಎಷ್ಟು ಎಂದು ಫ್ಯಾನ್ ಕೇಳಿದ್ದಾರೆ. ಈಗ ನನಗೆ ೨೬ ವರ್ಷ ಎಂದು ರಶ್ಮಿಕಾ ಹೇಳಿದ್ದಾರೆ. ಈ ಲೈವ್ ವಿಡಿಯೋ ಹಿಂದೆ ಒಬ್ಬ ಗಂಡಸಿನ ಧ್ವನಿ ಕೇಳಿ ಬಂದಿದೆ. ಈ ವಾಯ್ಸ್ ಪಕ್ಕಾ ವಿಜಯ್ ದೇವರಕೊಂಡ ಅವರದ್ದೇ ಎಂದು ನೆಟ್ಟಿಗರು ಕಂಡು ಹಿಡಿದಿದ್ದಾರೆ. ಹೌದು ಇದು ವಿಡಿ ಅಣ್ಣನ ಧ್ವನಿ ಎಂದು ಮತ್ತೊಬ್ಬರು ಪೋಸ್ಟ್ ಮಾಡಿ ಕಾಲೆಯುತ್ತಿದ್ದಾರೆ. ಒಟ್ಟಿನಲ್ಲಿ ರಶ್ಮಿಕಾರನ್ನು ನೆಟ್ಟಿಗರು ಬೆಂಬಿಡದೇ ಕಾಡುತ್ತಿದ್ದಾರೆ.