ರವೆ ಸಜ್ಜಿಗೆ ಮಾಡುವ ವಿಧಾನ

ಸಣ್ಣ ರವೆ : ಒಂದು ಕಪ್
ಹಾಲು:‌ ಒಂದು ಪಾವು
ಸಕ್ಕರೆ : ಮುಕ್ಕಾಲು ಪಾವು
ತುಪ್ಪ: ಎರಡು ಚಮಚ
ಕೇಸರಿ: ಚಿಟಿಕೆ
ಪಚ್ಚ ಕರ್ಪೂರ: ಸ್ವಲ್ಪ
ಏಲಕ್ಕಿ : ನಾಲ್ಕು
ದ್ರಾಕ್ಷಿ, ಗೋಡಂಬಿ , ಬಾದಾಮಿ ಸ್ವಲ್ಪ
ಸಣ್ಣ ರವೆ ಹುರಿದುಕೊಂಡು, ಪಾವು ಹಾಲು ಒಲೆ ಮೇಲೆ ಇಟ್ಟು ಕುದಿದ ನಂತರ ಮುಕ್ಕಾಲು ಪಾವು ಸಕ್ಕರೆ ಹಾಕಿ ಒಂದು ಚಟಾಕು ತುಪ್ಪ ಹಾಕಿ , ಒಂದು ಚಿಟಿಕೆ ಕೇಸರಿಯನ್ನು ಹಾಲಿನಲ್ಲಿ ಅರೆದುಕೊಂಡು, ಒಂದು ಚೂರು ಪಚ್ಚ ಕರ್ಪೂರ, ನಾಲ್ಕು ಏಲಕ್ಕಿ ಪುಡಿ ಮಾಡಿ ಈ ಹಾಲಿಗೆ ಹಾಕಿ ಕುದಿದ ನಂತರ ರವೆ ಹಾಕಿ ಸಣ್ಣ ಉರಿ ಮಾಡಿ ಕಲಸಿ ಮುಚ್ಚಿಟ್ಟು ನಂತರ ಕಲಸಿ ಕೆಳಗೆ ಇಡಬೇಕು. ಈ ಕಡೆ ಗೋಡಂಬಿ ಬಾದಾಮಿ ಹುರಿದು ಕೆಳಕ್ಕೆ ಇರಿಸಿ ಬಾದಾಮಿ ಮಾತ್ರ ಅರೆದು ಪುಡಿ ಮಾಡಿ ದ್ರಾಕ್ಷಿ, ಗೋಡಂಬಿ ಬಾದಾಮಿ ಎಲ್ಲಾ ಹಾಕಿ ಕಲಸಿ ಮುಚ್ಚಿಡಬೇಕು. ಇದೇ ಸತ್ಯನಾರಾಯಣ ದೇವರಿಗೆ ಮಾಡುವ ಸಜ್ಜಿಗೆ.