ರವೆ ವಡೆ ವಿಧಾನ – ೨

ಬೇಕಾಗುವ ಪದಾರ್ಥಗಳು:
ಕಾಯಿತುರಿ – ೧ ಲೋಟ
ಇಂಗು – ಚಿಟಿಕೆ
ಹಸಿಮೆಣಸಿನಕಾಯಿ – ೬
ಕರಿಬೇವು – ಸ್ವಲ್ಪ
(ಇವುಗಳನ್ನು ರುಬ್ಬಿಕೊಳ್ಳಬೇಕು)
ಇತರೆ:
ಚಿರೋಟಿರವೆ – ೧ ಲೋಟ
ಉಪ್ಪು – ರುಚಿಗೆ ತಕ್ಕಷ್ಟು
ಮೊಸರು – ೨ ಚಮಚ
ಎಣ್ಣೆ – ಕರಿಯಲು
ವಿಧಾನ:
ನೀರು ಹಾಕಿ ರುಬ್ಬಿ ಚಟ್ನಿ ತಯಾರಿಸಬೇಕು. ಚಿರೋಟಿರವೆಗೆ ಉಪ್ಪು, ಕಾಯಿಸಿದ ಎಣ್ಣೆ ಸ್ವಲ್ಪ ಹಾಕಿ, ರುಬ್ಬಿದ ಚಟ್ನಿ ಮೊಸರು ಹಾಕಿ ಕಲೆಸಿ, ವಡೆ ಆಕಾರದಲ್ಲಿ ತಟ್ಟಿ ಕರಿಯಬೇಕು.