ರವೆ ಉಂಡೆ

ಹಬ್ಬಗಳಲ್ಲಿ ಮಾಡುವ ಸಿಹಿ ತಿಂಡಿ. ಮಾಡುವುದು ಸುಲಭ! ಮಾಡಿಟ್ಟರೆ 1 ವಾರದವರೆಗೂ ಚೆನ್ನಾಗಿರುತ್ತದೆ.
ಮಾಡುವ ವಿಧಾನ:
ಒಂದು ಪಾವು ಸಕ್ಕರೆಯಲ್ಲಿ ನಾಲ್ಕು ಏಲಕ್ಕಿ ಸಿಪ್ಪೆ ಬಿಡಿಸಿ ಹಾಕಿ ಪುಡಿ ಮಾಡಿಡಿ.
ಒಂದು ಗಿಟುಕು ಕೊಬ್ಬರಿ ತುರಿದಿಡಿ.
ಒಂದು ಪಾವು ಚಿರೋಟಿ ರವೆ ನಾಲ್ಕು ಚಮಚ ತುಪ್ಪ ಹಾಕಿ ಘಮ್ಮೆಂದು ವಾಸನೆ ಬರುವವರೆಗೆ ಹುರಿದಿಡಿ.
ಬಾಣಲೆಯಲ್ಲಿ ಸ್ವಲ್ಪ ತುಪ್ಪ ಹಾಕಿ ತುಂಡರಿಸಿದ ಗೋಡಂಬಿ, ದ್ರಾಕ್ಷಿ ಹಾಕಿ ಹುರಿದು ರವೆಗೆ ಹಾಕಿ ಚೆನ್ನಾಗಿ ಕಲೆಸಿ ರವೆ ಸ್ವಲ್ಪ ಬಿಸಿಯಿದ್ದಾಗಲೇ ಸ್ವಲ್ಪ ನೀರು/ಹಾಲು ಚಿಮುಕಿಸಿ ಚಿಕ್ಕ ಚಿಕ್ಕ ಉಂಡೆ ಮಾಡಿ ಸವಿಯಿರಿ.