ನಟಿ ರವೀನಾ ಟಂಡನ್ ಪದ್ಮಶ್ರೀ ಪಡೆದಿರುವ ಕುರಿತು ಮಗಳು ಭಾವನಾತ್ಮಕ ಪೋಸ್ಟ್ ನ್ನು ಹಂಚಿಕೊಂಡಿದ್ದಾರೆ, ಇದಕ್ಕೆ ನಂತರ ತಾಯಿ ರವೀನಾ ಕೂಡಾ ಉತ್ತರಿಸಿದರು.
ನಟಿ ರವೀನಾ ಟಂಡನ್ ಅವರಿಗೆ ಏಪ್ರಿಲ್ ೫ ರಂದು ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಯಿತು. ಈ ಸುದ್ದಿಯಿಂದ ರವೀನಾ ಟಂಡನ್ ಕುಟುಂಬದಿಂದ ಅಭಿಮಾನಿಗಳವರೆಗೆ ಎಲ್ಲರೂ ತುಂಬಾ ಖುಷಿಯಾಗಿದ್ದಾರೆ ಮತ್ತು ಸಂತೋಷಪಟ್ಟಿದ್ದಾರೆ. ಈ ಪಟ್ಟಿಯಲ್ಲಿ ಅವರ ಮಗಳು ರಾಶಾ ಹೆಸರೂ ಸೇರಿದೆ.
ತಾಯಿ ಇಷ್ಟು ದೊಡ್ಡ ಸಾಧನೆ ಮಾಡಿದ್ದಕ್ಕೆ ಮಗಳು ರಾಶಾ ತುಂಬಾ ಖುಷಿಯಾಗಿದ್ದಾರೆ. ರವೀನಾ ಟಂಡನ್ ಅವರಿಗೆ ಈ ಗೌರವ ಸಿಗುತ್ತಿದ್ದ ಸಂದರ್ಭದಲ್ಲಿ ಅವರ ಇಡೀ ಕುಟುಂಬ ಅಲ್ಲಿ ನೆರೆದಿತ್ತು. ಅದರ ನಂತರ, ರವೀನಾ ಟಂಡನ್ ಅವರು ಮುಂಬೈ ವಿಮಾನ ನಿಲ್ದಾಣದಲ್ಲಿ ಪದ್ಮಶ್ರೀ ಪ್ರಶಸ್ತಿ ಕೈಯಲ್ಲಿ ಹಿಡಿದು ಕಾಣಿಸಿಕೊಂಡರು. ಈ ವೇಳೆ ಅವರ ಮಗಳು ಕೂಡ ಅಲ್ಲಿದ್ದರು. ಇದೀಗ ರಾಶಾ ತಮ್ಮ ತಾಯಿಯ ಈ ಸಾಧನೆಯಿಂದ ಖುಷಿಗೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
ರವೀನಾ ಟಂಡನ್‌ಗೆ ಪದ್ಮಶ್ರೀ :
ರವೀನಾ ಟಂಡನ್ ಅವರು ಸಿನಿಮಾ ಮತ್ತು ಕಲಾ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಏಪ್ರಿಲ್ ೫ ರಂದು ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಈ ಕಾರಣದಿಂದಾಗಿ, ಅವರ ಮಗಳು ತನ್ನ ತಾಯಿಗಾಗಿ ಸಾಮಾಜಿಕ ಮಾಧ್ಯಮದಲ್ಲಿ ಭಾವನಾತ್ಮಕ ಪೋಸ್ಟ್ ನ್ನು ಹಂಚಿಕೊಂಡಿದ್ದಾರೆ. ರಾಶಾ ಬರೆದಿದ್ದಾರೆ- ”ಪದ್ಮಶ್ರೀ ಪ್ರಶಸ್ತಿಯು ಭಾರತದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾಗಿದೆ. ಅಮ್ಮಾ, ನಿನಗೆ ಎಷ್ಟು ಒಳ್ಳೆಯ ವರ್ಷವಿದು. ನಾನದನ್ನು ಮಾಡುತ್ತಿದ್ದೇನೆ ಎಂದು ಯಾವಾಗಲೂ ಹೇಳುತ್ತಿರುತ್ತೀರಿ. ಇಂದು ಎಲ್ಲವನ್ನೂ ಸಾಧಿಸಲು ಅಜ್ಜ ನಿಮಗೆ ಸಹಾಯ ಮಾಡುತ್ತಿದ್ದಾರೆ. ಇದರ ಬಗ್ಗೆ ನನಗೆ ಯಾವುದೇ ಸಂದೇಹವಿಲ್ಲ, ಆದರೆ ಇದು ನಿಮ್ಮ ಎಲ್ಲಾ ಶ್ರಮವನ್ನು ತೆಗೆದುಕೊಳ್ಳುತ್ತದೆ. ನೀವು ಪಡೆಯುತ್ತಿರುವ ಯಶಸ್ಸು, ಪ್ರೀತಿ ಮತ್ತು ಗೌರವಕ್ಕೆ ನೀವು ಖಂಡಿತಾ ಅರ್ಹರು….”
ಮಗಳು ರಾಶಾ ಭಾವನಾತ್ಮಕ ಪೋಸ್ಟ್ ನಲ್ಲಿ ಇನ್ನೂ ಹೇಳಿದ್ದಾರೆ:
ಇಷ್ಟೇ ಅಲ್ಲ, ನಮ್ಮ ಸಮಾಜದ ಅತ್ಯಂತ ಗೌರವಾನ್ವಿತ ಜನರ ಮುಂದೆ ನಿಮ್ಮನ್ನು ಮತ್ತು ನಿಮ್ಮ ಕೆಲಸವನ್ನು ಗೌರವಿಸುವುದನ್ನು ನೋಡಿ, ನನ್ನ ಹೆಮ್ಮೆಯನ್ನು ತಡೆಯಲು ಸಾಧ್ಯವಾಗಲಿಲ್ಲ ಎಂದೂ ರಾಶಾ ಬರೆದಿದ್ದಾರೆ.
ತಾಯಿ, ಇದು ಸಂಪೂರ್ಣವಾಗಿ ನಿಮ್ಮ ಗೆಲುವು. ನಿಮ್ಮ ಸೌಮ್ಯ ಸ್ವಭಾವ, ಅನುಗ್ರಹ ಮತ್ತು ದಯೆಯು ರಣಬೀರ್ ಮತ್ತು ನನಗೆ ಕಷ್ಟಪಟ್ಟು ಕೆಲಸ ಮಾಡಲು ಮತ್ತು ಉತ್ತಮವಾಗಿ ನಡೆಯಲು ಪ್ರೇರೇಪಿಸುತ್ತದೆ. ಆಕಾಶವು ನಿಮಗೆ ಮಿತಿಯಾಗಿದೆ, ನೀವು ಮುಂದಿನದನ್ನು ಏನೆಲ್ಲ ಮಾಡುವಿರಿ ಸಾಧಿಸುವಿರಿ….ಎಂಬುದನ್ನು ನೋಡಲು ನಮಗೆ ಕಾಯಲು ಸಾಧ್ಯವಾಗುತ್ತಿಲ್ಲ.’
ರವೀನಾ ಟಂಡನ್ ಉತ್ತರಿಸಿದರು:
ಇದಾದ ನಂತರ ರವೀನಾ ಟಂಡನ್ ಮಗಳ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ. ಅವರು ಬರೆದಿದ್ದಾರೆ- ’ಧನ್ಯವಾದಗಳು ನನ್ನ ಮಗುವಿಗೆ. ನೀವು ನನ್ನ ದಿನವನ್ನು ಉತ್ತಮವಾಗಿ ಮಾಡಿದ್ದೀರಿ. ನಿಮ್ಮ ಮುಖ ಹೆಮ್ಮೆಯಿಂದ ನಗುತ್ತಿರುವುದನ್ನು ನಾನು ನೋಡಿದಾಗ ಖುಷಿಯಾಗುತ್ತೆ. ಅದಕ್ಕಿಂತ ವಿಶೇಷವಾದದ್ದೇನೂ ಇಲ್ಲ. ಎಲ್ಲಾ ಸ್ನೇಹಿತರು ಮತ್ತು ಹತ್ತಿರದವರಿಂದ ಶುಭಾಶಯಗಳನ್ನು ಸ್ವೀಕರಿಸುವುದಕ್ಕಿಂತ ಉತ್ತಮವಾದದ್ದು ಯಾವುದೂ ಇಲ್ಲ. ಇದು ಈ ಕ್ಷಣವನ್ನು ಇನ್ನಷ್ಟು ವಿಶೇಷಗೊಳಿಸುತ್ತದೆ.” ಎಂದಿರುವರು.
ಮಲ್ಟಿ ಸ್ಟಾರರ್ ’ಕಿಸಿ ಕಾ ಭಾಯ್ ಕಿಸಿ ಕಿ ಜಾನ್” ಫಿಲ್ಮ್ ನ ಟ್ರೈಲರ್ :
ದಬಾಂಗ್ ಖಾನ್ ಅವರೇ ಬಿಡುಗಡೆ ದಿನಾಂಕವನ್ನು ತಿಳಿಸಿದ್ದಾರೆ!
’ಸಲ್ಮಾನ್ ಖಾನ್ ಅವರು ತಮ್ಮ ಮುಂಬರುವ ಫಿಲ್ಮ್ ’ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ ಕಾರಣದಿಂದಾಗಿ ಸಾಕಷ್ಟು ಚರ್ಚೆಯಲ್ಲಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಅವರ ಫಿಲ್ಮ್ ನ ಹಾಡುಗಳು ಮತ್ತು ಪೋಸ್ಟರ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರದಲ್ಲಿವೆ. ಫಿಲ್ಮ್ ನ ಹಲವು ಹಾಡುಗಳು ಒಂದೊಂದಾಗಿ ಬಿಡುಗಡೆಯಾಗಿವೆ. ಹೀಗಿರುವಾಗ ಫಿಲ್ಮ್ ನ ಟ್ರೇಲರ್ ಬಗ್ಗೆ ಅಭಿಮಾನಿಗಳಲ್ಲಿ ಗುಸುಗುಸು ಮೂಡಿದೆ. ಇದರ ಟ್ರೇಲರ್‌ಗಾಗಿ ಜನ ಕಾತರದಿಂದ ಕಾಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಲ್ಮಾನ್ ಖಾನ್ ಅವರೇ ಫಿಲ್ಮ್ ನ ಟ್ರೈಲರ್ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ.

ಸಲ್ಮಾನ್ ಖಾನ್ ಪೋಸ್ಟ್ ಮಾಡಿದ್ದಾರೆ:
ದಬಾಂಗ್ ಖಾನ್ ಅವರೇ ’ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ ಫಿಲ್ಮ್ ನ ಪೋಸ್ಟರ್ ನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ಮತ್ತು ಈ ಫಿಲ್ಮ್ ನ ಟ್ರೇಲರ್ ಬಿಡುಗಡೆ ದಿನಾಂಕವನ್ನು ನೀಡಿದ್ದಾರೆ. ಪೋಸ್ಟರ್ ನ್ನು ಹಂಚಿಕೊಂಡಿರುವ ಸಲ್ಮಾನ್ ಖಾನ್ ಫಿಲ್ಮ್ ನ ಟ್ರೈಲರ್ ನ್ನು ಏಪ್ರಿಲ್ ೧೦ ರಂದು ಬಿಡುಗಡೆ ಮಾಡಲಾಗುವುದು ಎಂದು ಬರೆದಿದ್ದಾರೆ. ಈ ಪೋಸ್ಟ್ ನ್ನು ಅವರು ಇನ್ಸ್ಟ್ರಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
ರೊಮ್ಯಾಂಟಿಕ್ ಪೋಸ್ಟರ್ ನ್ನು ಹಂಚಿಕೊಂಡರು ಸಲ್ಮಾನ್:
ಇದೀಗ ಈ ಪೋಸ್ಟ್ ನೋಡಿದ ಅಭಿಮಾನಿಗಳಲ್ಲಿ ಉತ್ಸಾಹ ಹೆಚ್ಚಿದೆ.ಫಿಲ್ಮ್ ನ ಪೋಸ್ಟರ್ ನ್ನು ಸಲ್ಮಾನ್ ಖಾನ್ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟರ್‌ನಲ್ಲಿ ನಟಿ ಪೂಜಾ ಹೆಗ್ಡೆ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಒಬ್ಬರ ದೃಷ್ಟಿಯಲ್ಲಿ ಒಬ್ಬರನ್ನೊಬ್ಬರು ಕಳೆದುಕೊಂಡಂತೆ ಕಾಣುತ್ತಿದ್ದಾರೆ. ಇಬ್ಬರ ಈ ರೊಮ್ಯಾಂಟಿಕ್ ಸ್ಟೈಲ್ ನ್ನು ಅಭಿಮಾನಿಗಳು ಇಷ್ಟಪಡುತ್ತಿದ್ದಾರೆ.
ಫಿಲ್ಮ್ ಮಲ್ಟಿ ಸ್ಟಾರರ್ ಆಗಿದೆ:
ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ ಫಿಲ್ಮ್ ನ್ನು ಫರ್ಹಾದ್ ಸಾಮ್ಜಿ ನಿರ್ದೇಶಿಸಿದ್ದಾರೆ. ಅದೇ ಸಮಯದಲ್ಲಿ, ಸಲ್ಮಾನ್ ಖಾನ್ ಅವರೇ ಈ ಫಿಲ್ಮ್ ನ್ನು ನಿರ್ಮಿಸುತ್ತಿದ್ದಾರೆ. ಇದರೊಂದಿಗೆ ಪೂಜಾ ಹೆಗ್ಡೆ, ದಗ್ಗುಬಾಟಿ ವೆಂಕಟೇಶ್, ಶಹನಾಜ್ ಗಿಲ್, ಸಿದ್ಧಾರ್ಥ್ ನಿಗಮ್, ರಾಘವ್ ಜುಯಲ್ ಮತ್ತು ಪಾಲಕ್ ತಿವಾರಿ ಮುಂತಾದ ಅನೇಕ ತಾರೆಯರು ಈ ಫಿಲ್ಮ್ ನಲ್ಲಿ ಸಲ್ಮಾನ್ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ. ಬಹುತಾರಾಗಣದ ಫಿಲ್ಮ್ ಇದಾಗಿದ್ದು, ಅಭಿಮಾನಿಗಳು ಇದಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.