ಭಾಲ್ಕಿ:ಎ.11: ಬೀದರ ನಿವಾಸಿ ರವೀಂದ್ರ ಕಲ್ಲಯ್ಯಾ ಸ್ವಾಮಿಯವರಿಗೆ ನೀಡಿರುವ ಬೇಡ ಜಂಗಂ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ರದ್ದು ಪಡಿಸಿರುವುದು ಖಂಡನಾರ್ಹವಾಗಿದೆ ಎಂದು ಅಖಿಲ ಕರ್ನಾಟಕ ಬೇಡಜಂಗಮ ಒಕ್ಕೂಟದ ತಾಲೂಕು ಘಟಕದ ಅಧ್ಯಕ್ಷ ಗುರಯ್ಯಾ ಬಿ ಸ್ವಾಮಿ ಎಂದು ತಿಳಿಸಿದ್ದಾರೆ.
ಈ ಕುರಿತು ಮುಖ್ಯ ಚುನಾವಣಾ ಆಯುಕ್ತರಿಗೆ ಬರೆದ ಮನವಿ ಪತ್ರವನ್ನು ಸೋಮವಾರ ತಹಸೀಲ್ದಾರ ಮೂಲಕ ಸಲ್ಲಿಸಿದ ಅವರು, ಬೀದರಿನ ರವೀಂದ್ರ ಕಲ್ಲಯ್ಯಾ ಸ್ವಾಮಿಯವರು 2019 ರ ಅ.27 ರಂದು ಬೀದರ ತಹಸೀಲ್ದಾರರಿಂದ ಬೇಡ ಜಂಗಂ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದಿರುತ್ತಾರೆ. ಈ ಪ್ರಮಾಣ ಪತ್ರಕ್ಕೆ ಇದುವರೆಗೆ ಯಾವುದೇ ಆಕ್ಷೇಪ ವ್ಯಕ್ತಪಡಿಸದೇ ಚುನಾವಣಾ ಸಮಯದಲ್ಲಿ ಏಕಾಏಕಿ ಪ್ರಮಾಣಪತ್ರ ರದ್ದು ಪಡಿಸಿರುವುದು ಖಂಡನಾರ್ಹವಾಗಿದೆ. ಇವರ ಮಕ್ಕಳಿಗೆ ನೀಡಿದ ಪ್ರಮಾಣ ಪತ್ರ ರದ್ದು ಪಡಿಸದೇ ರಾಜಕೀಯ ಒತ್ತಡಕ್ಕೆ ಮಣಿದು ರವೀಂದ್ರ ಸ್ವಾಮಿಯವರ ಪ್ರಮಾಣ ಪತ್ರ ರದ್ದು ಪಡಿಸಿರುವುದು ಖಂಡನಾರ್ಹ. ತಕ್ಷಣವೇ ಇದರಬಗ್ಗೆ ತನಿಖೆ ನಡಿಸಿ, ಇವರ ಪ್ರಮಾಣ ಪತ್ರ ಸರಿಪಡಿಸಿ ರವಿ ಸ್ವಾಮಿಯವರು ಔರಾದ ಕ್ಷೇತ್ರದ ಚುನಾವಣೆಯಲ್ಲಿ ಪರಿಷಿಷ್ಠ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲುವಂತೆ ಸಹಕರಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರಮುಖರಾದ ಮನ್ಮಥ ಸ್ವಾಮಿ ಕಾಕನಾಳ, ಪುರಸಭೆ ಸದಸ್ಯ ಶಂಭುಲಿಂಗ ಸ್ವಾಮಿ, ಡಾ| ಪ್ರಭುಲಿಂಗ ಸ್ವಾಮಿ, ರಂಗರಾವ ಬಿರಾದಾರ ಕಾಕನಾಳ ಸೇರಿಂದತೆ ಮುಂತಾದವರು ಇದ್ದರು.