ರವೀಂದ್ರ ಜಲ್ದಾರ್ ನೇತೃತ್ವದಲ್ಲಿ ಭರ್ಜರಿ ಪ್ರಚಾರ

ರಾಯಚೂರು ಏ ೨೮
ವಿಧಾನಸಭಾ ಚುನಾವಣೆಯ ಪ್ರಚಾರದ ಅಂಗವಾಗಿ ಜಹೀರಾಬಾದ್ ಏರಿಯ ಹಾಗೂ ವಾರ್ಡ್ ನಂ-೧೩ರಲ್ಲಿ ಬೆಳಿಗ್ಗೆ
ಬಿಜೆಪಿ ಮುಖಂಡ ರವೀಂದ್ರ ಜಲ್ದಾರ್ ಅವರ ನೇತೃತ್ವದಲ್ಲಿ ಬಿಜೆಪಿ ಭರ್ಜರಿ ಪ್ರಚಾರವನ್ನು ಕೈಗೊಂಡಿದ್ದರು.
ಈ ಸಂದರ್ಭದಲ್ಲಿ ಡಾ ಎಸ್ ಎಸ್ ಪಾಟೀಲ್ ರಾಯಚೂರು ನಗರ ವಿಧಾನಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಇವರನ್ನ ಅದ್ದೂರಿಯಾಗಿ ಮೆರವಣಿಗೆ ಮುಖಾಂತರ ಸ್ವಾಗತಿಸಿದರು ಹಾಗೂ ಸ್ಥಳೀಯ ನಿವಾಸಿಗಳು ಸೇರಿದಂತೆ ಸಾವಿರಾರು ಕಾರ್ಯಕರ್ತರು ಜನರು ಪಾಲ್ಗೊಂಡು ಮನೆಮನೆಗೆ ತೆರಳಿ ಮತಯಾಚನೆ ಮಾಡಿದರು.