ರವೀಂದ್ರಸ್ವಾಮಿ ಜಾತಿಪ್ರಮಾಣಪತ್ರ ರದ್ದು

ಬೀದರ,ಏ 4:ರವೀಂದ್ರ ಸ್ವಾಮಿ ಕಲ್ಲಯ್ಯ ಸ್ವಾಮಿ ಅವರಿಗೆ ನೀಡಿರುವ
ಬೇಡಜಂಗಮ ಜಾತಿ ಪ್ರಮಾಣ ಪತ್ರ ರದ್ದುಗೊಳಿಸಿ ನ್ಯಾಯಾಲಯ ಆದೇಶಿಸಿದೆ.
ಉಚ್ಚ ನ್ಯಾಯಲಯದವಿಭಾಗೀಯ ಪೀಠಕ್ಕೆ ರವೀಂದ್ರ ಸ್ವಾಮಿ ತಪ್ಪು ಮಾಹಿತಿ ನೀಡಿರುವದರಿಂದ ಜಿಲ್ಲಾಧಿಕಾರಿಗಳ ಆದೇಶ (ದಿ.23-03-2018)
ಅಂತಿಮಗೊಂಡಿರುವದಾಗಿ ಉಚ್ಚ ನ್ಯಾಯಾಲಯದವಿಭಾಗೀಯ ಪೀಠವು ನಿರ್ಧರಿಸಿದೆ. ಆದರೆ ರವೀಂದ್ರ ಸ್ವಾಮಿ ಅವರು ಜಿಲ್ಲಾಧಿಕಾರಿಗಳಆದೇಶವನ್ನು ಉಚ್ಚ ನ್ಯಾಯಲಯದಲ್ಲಿ ಪ್ರಶ್ನಿಸಿರುತ್ತಾರೆ. ಮತ್ತು ಉಚ್ಚ ನ್ಯಾಯಾಲಯವು ಜಿಲ್ಲಾಧಿಕಾರಿಗಳ ಆದೇಶ (ದಿ. 23-03-2018)ವನ್ನು ರದ್ದುಪಡಿಸಿರುತ್ತದೆ. ಈವಿಷಯವನ್ನು ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠದಗಮನಕ್ಕೆ ರವೀಂದ್ರ ಸ್ವಾಮಿಯು ತಂದಿರುವುದಿಲ್ಲ. ರವೀಂದ್ರಸ್ವಾಮಿಯು ಸಕ್ಷಮ ಪ್ರಾಧಿಕಾರಿಗಳನ್ನು ಮತ್ತುನ್ಯಾಯಾಲಯಗಳನ್ನು ದಾರಿ ತಪ್ಪಿಸುವುದು, ತಪ್ಪು ನಿರೂಪಣೆಹಾಗೂ ತಪ್ಪು ಗ್ರಹಿಕೆಗಳನ್ನು ಸತತವಾಗಿ ಮಾಡುತ್ತಿರುವ ಕಾರಣಕ್ಕಾಗಿ ವಿಭಾಗೀಯ ಪೀಠವುರವೀಂದ್ರ ಸ್ವಾಮಿ ಅವರಿಗೆ 1 ಲಕ್ಷಗಳ ರೂ. ದಂಡವನ್ನು ವಿಧಿಸಿದೆ ಎಂದು ಜಿಲ್ಲಾಧಿಕಾರಿಗಳ ಕಾರ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.