ರವೀಂದ್ರನಾಥ್ ರಿಂದ ಬೋರ್ ವೆಲ್ ದುರಸ್ತಿ

ರಾಯಚೂರು, ಮೇ.೨೮- ನಗರದ ಎಲ್ ಬಿಎಸ್ ನಗರದ ವಾರ್ಡ್ ನಂಬರ್ ೨೯ ರ ಜಂಡ ಕಟ್ಟ ಹತ್ತಿರ ಕಳೆದ ೧೫ ದಿನಗಳಿಂದ ಬೋರ್ ವೆಲ್ ಕೆಟ್ಟು ಸಾರ್ವಜನಿಕರಿಗೆ ಸಮಸ್ಯೆಯಾಗಿದ ಕಾರಣ ಸ್ಪಂದಿಸಿದ ಮುಖಂಡ ರವಿಂದ್ರನಾಥ ದುರಸ್ತಿಗೊಳಿಸಿದ್ದಾರೆ.
ಬೋರ್ವೆಲ್ ಕೆಟ್ಟ ಪರಿಣಾಮ ಜನರು ನಗರಸಭೆ ಸದಸ್ಯ ಸುನಿಲ್ ಕುಮಾರ್ ಅವರಿಗೆ ತಿಳಿಸಿದ್ದರು. ಆದರೆ ಅವರು ಸ್ಪಂದಿಸದ ಕಾರಣ
ಡಿಫೀಟೆಡ್ಡ್ ಕೌನ್ಸಲರ್
ಎಸ್. ರವೀಂದ್ರನಾಥ್ ಅವರಿಗೆ ತಿಳಿಸಿದರು ಅವರು ಸಮಸ್ಯೆಗೆ ಸ್ಪಂದಿಸಿ ಸಹಕಾರನೀಡಿ ಸ್ವತಹ ನಿಂತು ಕೆಲಸ ಮಾಡಿಸಿ ಪೂರ್ಣಗೊಳಿಸಿ ಜನರ ಉಪಯೋಗಿಸುವಂತೆ ಮಾಡಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.