ರವಿ ಬೋಸರಾಜು ಹುಟ್ಟುಹಬ್ಬ: ಬಡ ರೋಗಿಗಳಿಗೆ ಹಣ್ಣು, ಬ್ರೇಡ್ ವಿತರಣೆ

ಕವಿತಾಳ.ಫೆ.೧೫- ಕಾಂಗ್ರೆಸ್ ಯುವ ಮುಖಂಡ ರವಿ ಬೋಸರಾಜು ಹುಟ್ಟು ಹಬ್ಬದ ನಿಮಿತ್ತ ಅವರ ಅಭಿಮಾನಿಗಳು ಇಂದು ಬೆಳಿಗ್ಗೆ ಸಮುದಾಯ ಆರೋಗ್ಯ ಕೇಂದ್ರದಲ್ಲಿನ ಬಡ ರೋಗಿಗಳಿಗೆ ಹಣ್ಣು, ಬ್ರೇಡ್ ವಿತರಣೆ ಮಾಡಲಾಯಿತು.
ಪಟ್ಟಣ ಪಂಚಾಯತ ಮಾಜಿ ಸದಸ್ಯ ಗಂಗಪ್ಪ ದಿನ್ನಿ ಮಾತನಾಡಿ ರವಿ ಬೋಸರಾಜು ಸಾಮಾಜಿ ಕಳಕಳಿಯನ್ನು ಹೊಂದಿದ್ದು, ಸಮಾಜ ಸೇವೆ ಮಾಡುತ್ತಿದ್ದಾರೆ. ಕೊರೋನಾ ಸಂದರ್ಭದಲ್ಲಿ ಅವರ ತಂದೆ ಎನ್.ಎಸ್.ಬೋರಾಜು ಪೌಂಡೇಶನ್ ಹೆಸರು ವತಿಯಿಂದ ಪ್ರತಿದಿನ ಅನ್ನ ದಾಸೋಹ ಮಾಡಿ, ಆರ್ಥಿಕವಾಗಿ ಬಡ ಕುಟುಂಬಗಳಿಗೆ ಸಹಾಯ ಮಾಡಿದ್ದರು ಎಂದು ಹೇಳಿದರು.
ಜಿ.ಪಂ. ಮಾಜಿ ಸದಸ್ಯರಾದ ಕಿರಿಲಿಂಗಪ್ಪ, ಮಾಳಪ್ಪ ತೋಳ, ಪ.ಪಂ. ಸದಸ್ಯ ಮಲ್ಲಿಕಾರ್ಜುನಗೌಡ, ಪ.ಪಂ. ಮಾಜಿ ಸದಸ್ಯ ಮೌನೇಶ ಹಿರೇಕುರುಬರು, ಮುಖಂಡರಾದ ಮೌನೇಶ ನಾಯಕ, ಸಿದ್ದಪ್ಪ ದಡ್ಯಾಳಿ, ಯಾಕೋಬ, ನಿಂಗರಾಜ ಪೂಜಾರಿ, ಶಿವಪ್ಪ ದಿನ್ನಿ ಸೇರಿ ವೈದ್ಯಾಧಿಕಾರಿಗಳಿದ್ದರು.