ರವಿ ಬೋಸರಾಜು ಅವರ ಹೋರಾಟ : ಕೊರೊನಾ ಸೋಂಕಿತರಿಗೆ ಚಿಕಿತ್ಸೆ

ರಾಯಚೂರು.ಮೇ.೨೦- ಜಿಲ್ಲೆಯಲ್ಲಿ ಈ ಹಿಂದೆ ಆಕ್ಸಿಜನ್ ಕೊರತೆಗೆ ಸಂಬಂಧಿಸಿ ಕಾಂಗ್ರೆಸ್ ಯುವ ಮುಖಂಡ ರವಿ ಬೋಸರಾಜು ಅವರು, ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಧರಣಿ ಮಾಡಿದ್ದು, ಕೇವಲ ರಾಜಕೀಯಕ್ಕಾಗಲ್ಲ, ಕೊರೊನಾ ನೂರಾರು ಸೋಂಕಿತರ ಜೀವ ರಕ್ಷಣೆಗೆ ಎನ್ನುವುದು ಬಿಜೆಪಿಯ ಜಿಲ್ಲಾ ಯುವ ಘಟಕದ ಅಧ್ಯಕ್ಷ ಸಂಜೀವ ರೆಡ್ಡಿ ಅವರು ಅರಿತುಕೊಳ್ಳಬೇಕೆಂದು, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಗೋವಿಂದ ರೆಡ್ಡಿ ಅವರು ಹೇಳಿದ್ದಾರೆ.
ನವೋದಯ ಆಸ್ಪತ್ರೆ ಸೇರಿದಂತೆ ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಮಾಹಿತಿ ದೊರೆಯುತ್ತಿದ್ದಂತೆ ರವಿ ಬೋಸರಾಜು ಅವರು, ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಧರಣಿ ಹೂಡಿದ್ದರು. ಇದರಿಂದ ಇಡೀ ಆಡಳಿತ ವ್ಯವಸ್ಥೆ ಕ್ರಿಯಾಶೀಲರಾಗಿ ಆಕ್ಸಿಜನ್ ಪೂರೈಕೆಗೆ ಮುಂದಾದರು. ಸ್ವತಃ ನವೋದಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಸ್.ಆರ್.ರೆಡ್ಡಿಯವರು ಜಿಲ್ಲಾಡಳಿತಕ್ಕೆ ದೂರವಾಣಿ ಕರೆ ಮಾಡಿ, ಚಿಕ್ಕಸೂಗೂರು ಎಂಎಸ್‌ಐಎಲ್‌ನಿಂದ ಆಕ್ಸಿಜನ್ ಪೂರೈಕೆ ಮಾಡಲಾಗದ ಪರಿಸ್ಥಿತಿಯ ಮಾಹಿತಿ ಬಗ್ಗೆ ಮನವರಿಕೆ ಮಾಡಿ, ಮುಂಜಾನೆ ೧೦.೩೦ ಕ್ಕೆ ನವೋದಯ ಸೋಂಕಿತರನ್ನು ರಿಮ್ಸ್ ಮತ್ತು ಓಪೆಕ್‌ಗೆ ಸ್ಥಳಾಂತರಿಸುವ ಬಗ್ಗೆ ಮಾಹಿತಿ ನೀಡಿದರು. ಇದಕ್ಕೆ ಜಿಲ್ಲಾಧಿಕಾರಿಗಳೇ ಸಾಕ್ಷಿ. ಮತ್ತು ಅಂದು ಎಂಎಸ್‌ಐಎಲ್‌ನಲ್ಲಿ ತಾಂತ್ರಿಕ ಸಮಸ್ಯೆ ಸಾಕ್ಷಿಯಾಗಿದೆ.
ಇದೆಲ್ಲವನ್ನೂ ಪರಿಶೀಲಿಸದೇ, ಕೇವಲ ಶಾಸಕರನ್ನು ಮೆಚ್ಚಿಸುವ ಕೆಲಸ ನೀಡಿದರೇ, ಜನರಿಗೆ ಮಾಡುವ ಅನ್ಯಾಯವಾಗುತ್ತದೆ. ಜನರು ಸಾಯುತ್ತಿರುವಾಗ ಆಡಳಿತರೂಢ ಪಕ್ಷವಾದ ಬಿಜೆಪಿ ಮತ್ತು ಅವರ ಶಾಸಕರು ಆಸ್ಪತ್ರೆಗೆ ಭೇಟಿ ನೀಡಿ, ಅಲ್ಲಿಯ ಸ್ಥಿತಿಗತಿ ಪರಿಶೀಲಿಸದೇ, ಹೇಳಿಕೆ ನೀಡುವುದರಿಂದ ಜನ ನಿಮ್ಮ ಬಗ್ಗೆಯ ತಪ್ಪು ಅಭಿಪ್ರಾಯ ಸಂಶಯ ಪಡುತ್ತಾರೆ. ರವಿ ಬೋಸರಾಜು ಅವರು ನೇರವಾಗಿ ಓಪೆಕ್ ಮತ್ತು ರಿಮ್ಸ್ ಆಸ್ಪತ್ರೆಗೆ ತೆರಳಿ, ಸೋಂಕಿತರ ಬಳಿ ಹೋಗಿ ಅವರ ಯೋಗಕ್ಷೇಮ ವಿಚಾರಿಸುತ್ತಾರೆ. ಆದರೆ, ಸ್ವತಃ ವೈದ್ಯರಾದ ಶಾಸಕ ಡಾ.ಶಿವರಾಜ ಪಾಟೀಲ್ ಅವರು ಏಕೆ ಸೋಂಕಿತರ ಬಳಿ ಹೋಗಲಿಲ್ಲ. ಅವಕ ಕಷ್ಟ ಕಾರ್ಪಣ್ಯ ಕೇಳಿ ತಿಳಿಯಲಿಲ್ಲ. ಇದು ಇವರ ಆಡಳಿತ ವೈಖರಿ.
ರವಿ ಬೋಸರಾಜು ಅವರ ಹೋರಾಟ ಮತ್ತು ಒತ್ತಡದ ಹಿನ್ನೆಲೆ, ಇಂದು ಓಪೆಕ್ ಮತ್ತು ರಿಮ್ಸ್ ಆಸ್ಪತ್ರೆ ಸ್ವಚ್ಛ ಮಾಡಲಾಗುತ್ತಿದೆ. ರೆಮ್‌ಡಿಸಿವಿರ್ ಇಂಜಕ್ಷನ್ ನಿಯಮಾನುಸಾರ ವಿತರಿಸಲಾಗುತ್ತಿದೆ. ಆಕ್ಸಿಜನ್ ಕೊರತೆಯಾಗದಂತೆ ನಿರ್ವಹಿಸವಾಗುತ್ತಿದೆ. ಪ್ರಜಾಪ್ರಭುತ್ವದಲ್ಲಿ ಆಳುವ ಪಕ್ಷಕ್ಕೆ ಕೇಳುವವರು ಇರಲೇಬೇಕು. ಈ ಕೆಲಸವನ್ನು ನಮ್ಮ ನಾಯಕ ರವಿ ಬೋಸರಾಜು ಅವರು ಮಾಡುತ್ತಿದ್ದಾರೆ. ರಾಜಕೀಯ ಮಾಡುವ ಉದ್ದೇಶ ನಮಗಿಲ್ಲ. ಚುನಾವಣೆಗೂ ಇನ್ನೂ ಸಮಯವಿದೆ. ಅಂದು ರಾಜಕೀಯ ಮಾಡೋಣಾ. ಆದರೆ, ಈಗ ಜನರ ಪ್ರಾಣ ಉಳಿಸುವುದು ನಮ್ಮ ಗುರಿ.
ಶಾಸಕರಿಗೆ ನಿಜವಾಗಿಯೂ ಜನರ ಬಗ್ಗೆ ಕಾಳಜಿಯಿದ್ದರೇ, ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆ ಸುಧಾರಣೆಗೆ ಮುಂದಾಗಲಿ. ಅವರ ನಾವು ನಿಲ್ಲಲು ಸಿದ್ಧರಿದ್ದೇವೆ. ಕೇವಲ ನಾಟಕ ಮಾಡುವುದು ಬಿಟ್ಟು, ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಬೇಕು. ಈ ಬಗ್ಗೆ ನೀವು ಸಹ ನಿಮ್ಮ ಶಾಸಕರಿಗೆ ಕೇಳಬೇಕು. ಇಲ್ಲದಿದ್ದರೇ, ಜನ ನಿಮ್ಮನ್ನು ಕ್ಷಮಿಸುವುದಿಲ್ಲ. ಈ ಬಗ್ಗೆ ಕೊರೊನಾದಿಂದ ಜನ ಸಾಯುತ್ತಿದ್ದಾರೆ. ಈಗಲೂ ನೀವು ಸತ್ಯ ಹೇಳದಿದ್ದರೇ ಮುಂದೆ ನಿಮಗೆ ತಕ್ಕಪಾಠ ಕಳುಹಿಸುವ ಪ್ರಸಂಗ ನಿರ್ಮಾಣವಾಗಲಿದೆ. ದಯವಿಟ್ಟು ರಾಜಕೀಯ, ನಾಟಕ ಮಾಡುವುದು ಬಿಟ್ಟು, ನಿಮ್ಮ ಶಾಸಕರು ರಿಮ್ಸ್ , ಓಪೆಕ್ ಆಸ್ಪತ್ರೆಗಳ ಕೊರೊನಾ ಸೋಂಕಿತರಿಗೆ ಉತ್ತಮ ಸೌಲಭ್ಯ ಮತ್ತು ಚಿಕಿತ್ಸೆ ದೊರೆಯುವಂತೆ ಮಾಡಲು ಪ್ರಯತ್ನಿಸಿದರೇ, ನಾವು ಅವರಿಗೆ ಬೆಂಬಲಿಸಲು ಸಿದ್ಧರಿದ್ದೇವೆ. ಅವರು ನಿರ್ಲಕ್ಷ್ಯಿಸಿದರೇ, ನಾವೇ ಬೀದಿಗಿಳಿದು ಜನರ ಹಿತಕ್ಕಾಗಿ ಸಂಘರ್ಷ ನಡೆಸಬೇಕಾಗುತ್ತದೆ.