ರವಿ ಬೋಸರಾಜುರನ್ನು ಭೇಟಿ ಮಾಡಿದ ಮಕ್ತಲ್ ಅಭ್ಯರ್ಥಿ ಶ್ರೀಹರಿ

ರಾಯಚೂರು.ನ.೧೭- ತೆಲಂಗಾಣ ವಿಧಾನ ಸಭಾ ಚುನಾವಣೆ ನಿಮಿತ್ಯ ಕರ್ನಾಟಕ ಗಡಿ ಭಾಗವಾದ ಮಕ್ತಲ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಶ್ರೀ ಹರಿ ಅವರು ಕಾಂಗ್ರೆಸ್ ರಾಜ್ಯ ಯುವ ಮುಖಂಡರಾದ ರವಿ ಬೋಸರಾಜು ಅವರನ್ನು ಭೇಟಿ ಮಾಡಿ ಪ್ರಚಾರ ಸಭೆಗೆ ಆಗಮಿಸಬೇಕೆಂದು ಆಹ್ವಾನಿಸಿ ತೆಲಂಗಾಣ ಚುನಾವಣೆಯ ಕುರಿತು ಸುಧೀರ್ಘವಾಗಿ ಚರ್ಚಿಸಿದರು.
ರವಿ ಭೋಸರಾಜು ಅವರು ಜಿಲ್ಲೆಯ ಗಡಿ ಭಾಗದಲ್ಲಿ ತಮ್ಮದೆ ಪ್ರಭಾವ ಹೊಂದಿರುವುದು ಸೇರಿ ಈ ಹಿಂದೆ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರ ಮಾಡಿದ್ದರಿಂದ ಪ್ರಚಾರ ಸಭೆಯಲಿ ಭಾಗವಹಿಸುವಂತೆ ಆಹ್ವಾನ ನೀಡಿದ್ದಾರೆ.
ಈ ಸಂದರ್ಭದಲ್ಲಿ ಹಿರಿಯರಾದ ಗೋಪಾಲ ರಡ್ಡಿ ಕೆ.ಶಾಂತಪ್ಪ, ಜಿಂದಪ್ಪ, ಮೋಹನ್, ಗೋಪಾಲ ರಡ್ಡಿ, ಶ್ರೀನಿವಾಸ ರಡ್ಡಿ, ರಾಘವೇಂದ್ರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.