ರವಿ ಬೋಸರಾಜರನ್ನು ಓಪೆಕ್,ರಿಮ್ಸ್ ಆಸ್ಪತ್ರೆ ಪ್ರವೇಶ ನಿರ್ಬಂಧ ಖಂಡನೀಯ

ಮಾನ್ವಿ.ಮೆ.೨೦-ಜಿಲ್ಲೆಯಲ್ಲಿ ಕೊರೊನಾ ದಿನೇ ದಿನೇಗಂಭೀರಗೊಂಡು ಅನೇಕರು ಸಾವಿಗೆ ಗುರಿಯಾಗುತ್ತಿದ್ದು, ಈ ಬಗ್ಗೆ ಸರ್ಕಾರವನ್ನು ಎಚ್ಚರಿಸುವ ಪ್ರಯತ್ನ ನಡೆಸುತ್ತಿದ್ದ ರವಿ ಬೋಸರಾಜು ಅವರನ್ನು ಓಪೆಕ್ ಮತ್ತು ರಿಮ್ಸ್ ಆಸ್ಪತ್ರೆ ಪ್ರವೇಶ ನಿರ್ಬಂಧ ಅತ್ಯಂತ ಖಂಡನೀಯವಾಗಿದೆಂದು ಕಾಂಗ್ರೆಸ್ ಮುಖಂಡ ನಾರಾಯಣಸ್ವಾಮಿ ಹೇಳಿದರು.
ಜಿಲ್ಲೆಯಲ್ಲಿ ಕೊರೊನಾ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತದ ವೈಫಲ್ಯಸಾವು ನೋವು ಹೆಚ್ಚುವುದಕ್ಕೆ ಕಾರಣವಾಗಿದೆ. ರವಿಬೋಸ್ ರಾಜು ಅವರು, ಪದೇ ಪದೇ ಸರ್ಕಾರವನ್ನು ಎಚ್ಚರಿಸುವ ಮೂಲಕ ಕೊರೊನಾ ಸೋಂಕಿತರಿಗೆ ಉತ್ತಮ ಚಿಕಿತ್ಸೆಗೆ ಒತ್ತಾಯಿಸುತ್ತಿದ್ದರೂ, ಯಾವುದೇ ಗಮನ ನೀಡುತ್ತಿಲ್ಲ. ಸ್ವತಃ ಕೊರೊನಾ ಸೋಂಕಿತರು ಓಪೆಕ್ ಮತ್ತು ರಿಮ್ಸ್ ಆಸ್ಪತ್ರೆಯ
ಅವ್ಯವಸ್ಥೆಯ ಬಗ್ಗೆ ದೂರವಾಣಿ ಕರೆ ಮಾಡಿ, ರವಿ ಬೋಸರಾಜು ಅವರಿಗೆ ಮಾಹಿತಿ ನೀಡಿ, ಈ ಸ್ಥಿತಿಯನ್ನು ಸುಧಾರಿಸುವಂತೆ ಕೇಳುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ರವಿ ಬೋಸರಾಜು ಅವರು, ಆಸತ್ರೆಗೆ ಭೇಟಿ ನೀಡಿ, ಅಲ್ಲಿಯ ಸ್ಥಿತಿಗತಿ ಪರಿಶೀಲಿಸಿ, ಸೋಂಕಿತರಿಗೆ ಉತ್ತಮ ಚಿಕಿತ್ಸೆಗೆ ಬೇಕಾದ ವ್ಯವಸ್ಥೆಗೆ ಸ್ಥಳೀಯ ವೈದ್ಯರೊಂದಿಗೆ ಚರ್ಚಿಸುವುದು ತಪ್ಪೇ? ವಾಸ್ತವದಲ್ಲಿ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಮಾಡಬೇಕಾದ ಕಾರ್ಯವನ್ನು ರವಿ ಬೋಸರಾಜು ಅವರು ಮಾಡುತ್ತಿದ್ದಾರೆ. ಇದನ್ನು
ಬೆಂಬಲಿಸಬೇಕಾದ ಜಿಲ್ಲಾಡಳಿತ, ಅವ್ಯವಸ್ಥೆಯನ್ನು ಮುಚ್ಚಿಡಲು ರವಿ
ಬೋಸರಾಜು ಅವರನ್ನೇ ಆಸ್ಪತ್ರೆ ಭೇಟಿಯಿಂದ ನಿರ್ಬಂಧಿಸಿರುವುದು ಎಷ್ಟು ಸರಿ? ರವಿ ಬೋಸರಾಜು ಅವರನ್ನು ನಿರ್ಬಂಧಿಸುವ ಮೂಲಕ ಜಿಲ್ಲಾಡಳಿತ ಮತ್ತು ಸರ್ಕಾರ ಓಪೆಕ್ ಮತ್ತು ರಿಮ್ಸ್ ಆಸ್ಪತ್ರೆಯ ಅವ್ಯವಸ್ಥೆಯನ್ನು ಮುಚ್ಚಿಡುವ ಪ್ರಯತ್ನ ನಡೆಸಿದೆ. ಇದರಿಂದ ಜಿಲ್ಲೆಯಲ್ಲಿ ಕೋವಿಡ್ ಸಾವಿನ ಸಂಖ್ಯೆಯೂ ಅತ್ಯಾಧಿಕವಾಗುವಂತೆ ಮಾಡಿದೆ. ಇತ್ತೀಚಿಗೆ ಬ್ರಾಹ್ಮಣರೊಬ್ಬರ ನಿಧನ ಸಂದರ್ಭದಲ್ಲಿ ಅಸಾಹಯಕ ಪತ್ನಿಗೆ ನೆರವು ನೀಡಿ, ಮೃತರ ಅಂತ್ಯ ಸಂಸ್ಕಾರ ಮಾಡಿರುವುದು ತಪ್ಪೇ? ಎಂದು ಕೇಳಿದ ಅವರು, ಬೋಸರಾಜು ಫೌಂಡೇಷನ್ ಅಲ್ಲಿಯ ಸೋಂಕಿತರಿಗೆ ಪೌಷ್ಠಿಕ ಡ್ರೈಫ್ರಟ್ಸ್ ನೀಡುವ ಕಾರ್ಯ ಅಪರಾಧವೇ?.
ಅಲ್ಲದೇ, ಸಕಾಲಕ್ಕೆ ಚಿಕಿತ್ಸೆ ದೊರೆಕಿಸಿಕೊಡಬೇಕೆಂಬ ರವಿ ಬೋಸರಾಜು ಅವರ ಪ್ರಯತ್ನ ಸೋಂಕಿತರಿಗೆ ಅನುಕೂಲವೇ, ಅನಾನುಕೂಲವೇ ಎಂದು ಪ್ರಶ್ನಿಸಿದ ಅವರು, ಜಿಲ್ಲಾಡಳಿತ, ಸರ್ಕಾರದ ವೈಫಲ್ಯದಿಂದಾಗಿ ರವಿ ಅವರು ಈ ಕಾರ್ಯ ಮಾಡಬೇಕಾಗಿದೆ. ಸ್ವತಃ ಸರ್ಕಾರ ಈ ಎಲ್ಲಾ ವ್ಯವಸ್ಥೆ ಸರಿಪಡಿಸಿದರೆ, ರವಿ ಬೋಸರಾಜು ಅವರ ಭೇಟಿ ಅಗತ್ಯವಾಗುತ್ತಿರಲಿಲ್ಲ. ಜನ ತಮ್ಮ ಚಿಕಿತ್ಸೆ ಅಸ್ತವ್ಯಸ್ತತೆ ಸಂದರ್ಭದಲ್ಲಿ ನೇರವಾಗಿ ರವಿ ಬೋಸರಾಜು ಅವರನ್ನು ಸಂಪರ್ಕಿಸುತ್ತಿದ್ದಾರೆಂದರೆ, ಸರ್ಕಾರ ಮತ್ತು ಜಿಲ್ಲಾಡಳಿತಕ್ಕಿಂತ ರವಿ ಬೋಸರಾಜು ಅವರ ಮೇಲೆ ಹೆಚ್ಚಿನ ನಂಬಿಕೆ ಇರುವುದು ಸ್ಪಷ್ಟಗೊಳ್ಳುತ್ತದೆಂದು ಹೇಳಿದ ಅವರು, ಸರ್ಕಾರ ತನ್ನ ವೈಫಲ್ಯ ಸರಿಪಡಿಸಿಕೊಂಡು ಸೋಂಕಿತರಿಗೆ ಚಿಕಿತ್ಸೆ ನೀಡಲು ಗಮನ ಹರಿಸಬೇಕೆಂದು ಒತ್ತಾಯಿಸಿದ್ದಾರೆ.