ರವಿ ಬೆಳೆಗೇರೆ ನಿಧನದಿಂದ ಪತ್ರಿಕಾ ರಂಗಕ್ಕೆ ಭಾರಿ ನಷ್ಟ: ಕಮಠಾಣೆ

ಬೀದರ:ನ.15: ಪತ್ರಕರ್ತ ಹಾಗೂ ಹಾಯ್ ಬೆಂಗಳೂರ್ ಸಂಪಾದಕರು, ಸಾಹಿತಿ, ಸಂಘಟಕರಾದ ರವಿ ಬೆಳೆಗೇರಿ ನಿಧನದಿಂದ ಪತ್ರಿಕಾ ರಂಗಕ್ಕೆ ತುಂಬಲಾರರದ ನಷ್ಟವಾಗಿದೆ ಎಂದು ಬೀದರ ಕೋಟೆ ವಾರ ಪತ್ರಿಕೆ ಸಂಪಾದಕರಾದ ಅನೀಲಕುಮಾರ ಕಮಠಾಣೆ ತಿಳಿಸಿದರು.

ನಗರದ ಬೀದರ ಕೋಟೆ ವಾರ ಪತ್ರಿಕೆಯ ಕಛೇರಿಯಲ್ಲಿ ಹಮ್ಮಿಕೊಂಡ ಭಾವ ಪೂರ್ಣ ಶೃದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.

ತನ್ನ ಬರವಣೆಗೆಗಳ ಮೂಲಕ ಭ್ರಷ್ಟಾಚಾರ ನಿರ್ಮೂಲನೆ ಮಾಡುವದರಲ್ಲಿ ಬೇಳೆಗೇರಯವರು ಪ್ರಮುಖ ಪಾತ್ರ ವಹಿಸಿದರು ಪ್ರತಿಭೆ ಅದ್ಬುತವಾದದ್ದು ಸಾಹಿತಿಯಾಗಿ ಸಾಹಿತ್ಯ ಲೋಕಕ್ಕೆ ನೀಡಿದ್ದ ಕೊಡುಗೆ ಅನನ್ಯ ಎಂದರು.

ಪತ್ರಿಕೆಯ ಜಿಲ್ಲಾ ವರದಿಗಾರ ಸೋಮನಾಥ ಬಿರಾದಾರ, ಭಾಲ್ಕಿ ವರದಿಗಾರ ಸಿ ಪಿ ಕಾನಡೆ, ಬಸವಕಲ್ಯಾಣ ವರದಿಗಾರ ದತ್ತಾತ್ರಿ ಧೂರೆ, ಬೀದರ ತಾಲುಕಾ ವರದಿಗಾರ ಶಿವರಾಜ ಪಾಟೀಲ್ ನವಲಾಸಪೂರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.