ರವಿ ಬೆಳೆಗೇರಿ ನಿಧನಕ್ಕೆ ಜಿಲ್ಲಾ ಪತ್ರಕರ್ತರ ಸಂಘದಿಂದ ಸಂತಾಪ

ಬೀದರ ನ.14:-ಹಿರಿಯ ಪತ್ರಕರ್ತ ಹಾಗೂ ಹಾಯ್ ಬೆಂಗಳೂರ್ ಸಂಪಾದಕರು, ಸಾಹಿತಿ, ಸಂಘಟಕರಾದ ರವಿ ಬೆಳೆಗೇರಿ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರು ಹಾಗೂ ಅಶೋಕಾ ಕೋಟೆ ಪತ್ರಿಕೆ ಸಂಪಾದಕರಾದ ಅಶೋಕಕುಮಾರ ಕರಂಜಿ ಹಾಗೂ ಸಂಘದ ಪದಾಧಿಕಾರಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ತನ್ನ ಬರವಣೆಗೆಗಳ ಮೂಲಲಕವೇ ನಾಡಿನ ಉದ್ದಗಲಕ್ಕೂ ತನ್ನದೇ ಆದ ಓದುಗರ ವಲಯ ಸೃಷ್ಟಿಸಿಕೊಂಡಿದ್ದ ವಿಭಿನ್ನ ಮನೋಭಾವದ ವ್ಯಕ್ತಿತ್ವದ ಸೂಕ್ಷ್ಮ ಸಂವೇದೆನಿಯ ರವಿ ಬೆಳೆಗೇರೆಯವರ ಪ್ರತಿಭೆ ಅದ್ಬುತವಾದದ್ದು ಸಾಹಿತಿಯಾಗಿ ಸಾಹಿತ್ಯ ಲೋಕಕ್ಕೆ ನೀಡಿದ್ದ ಕೊಡುಗೆ ಅನನ್ಯ.

 ವಿವಾದಗಳನ್ನು ಮೈಮೇಲೆ ಎಳೆದುಕೊಂಡು ಅದನೆಲ್ಲಾ ಬೆಗನೆ ಪಕಕ್ಕೆ ಸರಿಸಿ ಬರವಣಿಗೆಯ ಲೋಕದಲ್ಲಿ ಮುಳಗಿ ಹೋಗುತ್ತಿದ್ದ ಒಬ್ಬ ಕ್ರಿಯಾಶೀಲ ಲೇಖಕ ಆದ್ದರಿಂದ ರವಿ ಬೇಳೆಗೇರಿಯವರ ಆತ್ಮಕ್ಕೆ ಶಾಂತಿ ಸಿಗಲೇಂದು ಹಾಗೂ ದುಃಖ ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಆ ದೇವರು ಕರುಣಿಸಲಿ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕ ಬೀದರ ದೇವರಲ್ಲಿ ಪ್ರಾರ್ಥಿಸಿದ್ದಾರೆ.