ರವಿ ಬೆಳೆಗೆರೆ ನಿಧನ- ಶ್ರದ್ಧಾಂಜಲಿ ಸಭೆ

ಮಾನ್ವಿ:ನ.13- ಖ್ಯಾತ ಬರಹಗಾರ ಪತ್ರಕರ್ತರಾದ ರವಿ ಬೆಳೆಗೆರೆ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ ಅವರ ಆತ್ಮಕ್ಕೆ ಶಾಂತಿ ಕೋರಿ ಮಾನ್ವಿ ಕಾರ್ಯನಿರತ ಪತ್ರಕರ್ತ ಸಂಘದಿಂದ 1ನಿಮಿಷ ಮೌನಾಚರಣೆ ಹಾಗೂ ಶ್ರದ್ಧಾಂಜಲಿ ಸಭೆ ಮಾಡಲಾಯಿತು.
ಪಟ್ಟಣದ ಪತ್ರಿಕಾ ಭವನದಲ್ಲಿ ಖ್ಯಾತ ಬರಹಗಾರ ಪತ್ರಕರ್ತರಾದ ರವಿ ಬೆಳಗೆರೆ ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಅವರ ಆತ್ಮಕ್ಕೆ ಶಾಂತಿ ಕೋರಿ 1ನಿಮಿಷ ಕಾಲ ಮೌನಾಚರಣೆ ಮಾಡಿ ತಾಲ್ಲೂಕಿನ ಹಿರಿಯ ಪತ್ರಕರ್ತರಾದ ಹ್ಯಾರಿಸ್ ಹಿರೇಕೊಟ್ನೆಕಲ್, ಪಿ ಪರಮೇಶ್, ಶರಣಬಸವ ನೀರಮಾನ್ವಿ,ತಾಯಪ್ಪ ಬಿ ಹೊಸೂರ್, ಸಿದ್ರಾಮಯ್ಯ ಸ್ವಾಮಿ, ಚನ್ನಬಸವ ಬಾಗಲವಾಡ ಅವರು ರವಿ ಬೆಳೆಗೆರೆ ಅವರು ಕಲ್ಯಾಣ ಕರ್ನಾಟಕದವರಾಗಿ ಬೆಂಗಳೂರಿನ ಅತಿದೊಡ್ಡ ಪತ್ರಕರ್ತರಾಗಿ ಹೆಸರು ಮಾಡಿದ್ದಾರೆ ನೇರನುಡಿ ರವಿ ಬೆಳೆಗೆರೆ ಅವರ ಮಾತಾಗಿತ್ತು ರವಿ ಬೆಳೆಗೆರೆ ಅವರ ನಿಧನರಾದ್ದರಿಂದ ಪತ್ರಕರ್ತನ ರಂಗದಲ್ಲಿ ತುಂಬಲಾರದ ನಷ್ಟ ಉಂಟಾಗಿದೆ ಎಂದು ಹೇಳಿ ಅವರ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದರು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಶ್ರೀನಿವಾಸ ರಾವ್,ನಾಗರಾಜ್ ತಡಕಲ್,ಮಾರೆಪ್ಪ ಅಮರಾವತಿ, ಲಕ್ಷ್ಮಣ ಕಪಗಲ್, ರಾಜಶೇಖರ್ ಎಚ್,ನವೀನ್ ಕುಮಾರ್,ಚಂದ್ರಶೇಖರ್ ಮುದ್ಲಾಪುರ,ಗಯಾಸ್,ಬಸವರಾಜ ತಡಕಲ್, ಹನಮಂತ ಬ್ಯಾಗವಾಟ್, ಅಜ್ಮತ್ ಖಾನ್, ರವಿ ಆಲ್ದಾಳ್,ಹುಸೇನಪ್ಪ ನಂದಿಹಾಳ,ಶಿವಕುಮಾರ್ ಜಗಲಿ,ಶಿವಕುಮಾರ್ ಬ್ಯಾಗವಾಟ್,ಪರಶುರಾಮ,ಉಪಸ್ಥಿತರಿದ್ದರು.