ರವಿ ಬೆಳಗೆರೆ ಅಗಲಿಕೆಯಿಂದ ಭಾವಪೂರ್ಣ ಶೃದ್ಧಾಂಜಲಿ

ಬಾಗಲಕೋಟೆ,ನ.15 : ಹಿರಿಯ ಪತ್ರಕರ್ತರು ಅಕ್ಷರ ಮಾಂತ್ರಿಕ ಸಾಹಿತಿ ನಿರೂಪಕ ನಟ, ನೇರ ನಿಷ್ಠುರವಾದಿ ರವಿ ಬೆಳಗೆರೆ ಅವರು ದೈವಾಧೀನರಾಗಿರುವುದು ನಮಗೆಲ್ಲರಿಗೂ ನೋವುಂಟು ಮಾಡಿದೆ ಅವರ ಮರಣದಿಂದ ಪತ್ರಿಕಾರಂಗದಲ್ಲಿ ಬೆಳಕಿನ ಹಬ್ಬದಲ್ಲಿ ಕತ್ತಲಾದಂತಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷ ರಮೇಶ ಬದ್ನೂರ ವಿಷಾಧ ವ್ಯಕ್ತಪಡಿಸಿದರು.
ಹಳೆ ನಗರದ ಬಸವೇಶ್ವರ ವೃತ್ತದಲ್ಲಿ ರವಿ ಬೆಳಗೆರೆ ಅವರಿಗೆÀ ಭಾವಪೂರ್ಣ ಶೃದ್ಧಾಂಜಲಿ ಅರ್ಪಿಸಿ ನಂತರ ಸುದ್ದಿಗಾರರೊಂದಿಗೆ ಮಾತನಡಿದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಧರ್ಮಂತಿ, ರವಿ ಬೆಳಗೆರೆಯವರು ಒಬ್ಬ ಅಕ್ಷರ ಮಾಂತ್ರಿಕರು ಅವರ ಬರವಣಿಗೆ ಸಮಾಜದ ಅಭಿವೃದ್ಧಿಗೆ ನಾಂದಿಯಾಗಿದೆ ತಪ್ಪಿತಸ್ಥರ ವಿರುದ್ಧ ನೇರನುಡಿಯುವ ಬರಹಗಾರ ಇವರಾಗಿದ್ದರು ಎಂದರು. ಯುವಕರಿಗೆ ಸ್ಫೂರ್ತಿಯಾಗಿರುವ ಇವರ ನಿಧನ ವಾರ್ತೆ ಪತ್ರಿಕಾಕಾರಂಗದಲ್ಲಿ ಕಗ್ಗತ್ತಲಂತಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕರವೇ ನಗರ ಅಧ್ಯಕ್ಷ ಬಸವರಾಜ ಅಂಬಿಗೇರ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಲ್ಲು ಕಟ್ಟಿಮನಿ, ಜಿಲ್ಲಾ ಸಂಚಾಲಕ ಆತ್ಮರಾಮ ನೀಲನಾಯಕ, ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷ ಸಂಗಮೇಶ ಅಂಬಿಗೇರ, ತಾಲೂಕಾಧ್ಯಕ್ಷ ವಿನೀತ್ ಮೇಲಿನಮನಿ, ನಗರ ಅಧ್ಯಕ್ಷ ಪ್ರವೀಣ ಪಾಟೀಲ, ಮಂಜು ರಾಮದುರ್ಗ, ಮಂಜು ಪವಾರ, ಆಕಾಶ ಆಸಂಗಿ, ಗುರು ಜಿತೂರಿ ಮತ್ತು ರಾಜು ಇನ್ನಿತರು ಉಪಸ್ಥಿತರಿದ್ದರು.