ರವಿ ಬೆಳಗೆರೆಗೆ ಭಾವಪೂರ್ಣ ಶ್ರದ್ಧಾಂಜಲಿ

ತಿಪಟೂರು, ನ. ೧೫- ಹಿರಿಯ ಪತ್ರಕರ್ತ ಹಾಯ್ ಬೆಂಗಳೂರು ಪತ್ರಿಕೆ ಸಂಪಾದಕರಾದ ರವಿ ಬೆಳಗೆರೆ ರವರು ಅಕಾಲಿಕ ಮರಣ ಹೊಂದಿದ ಹಿನ್ನೆಲೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಾಲ್ಲೂಕು ಶಾಖೆ ತಿಪಟೂರು ವತಿಯಿಂದ ಭಾವಪೂರ್ಣ ಶ್ರದ್ದಾಂಜಲಿ ಅರ್ಪಿಸಲಾಯಿತು.
ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಶ್ರದ್ದಾಂಜಲಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕರ್ನಾಟಕ ಕಂಡ ದಿಟ್ಟ ಅಪ್ರತಿಮ ಬರಹಗಾರ ರವಿಬಿಳಿಗೆರೆ ತಮ್ಮ ಹರಿತವಾದ ಬರಹಗಳಿಂದ ದೇಶದಲ್ಲೇ ಮನೆಮಾತಾಗಿದ್ದರು ಎಂದು ಹೇಳಿದರು.
ನಿಜವಾದ ಪತ್ರಕರ್ತನಿಗೆ ಯಾವಾಗಲೂ ರವಿ ಬೆಳೆಗೆರೆ ಆದರ್ಶವಾಗಿ ನಿಲ್ಲುತ್ತಾರೆ. ಕನ್ನಡ ಟ್ಯಾಬ್ಲೆಟ್ ಪತ್ರಿಕಾ ಜಗತ್ತಿಗೆ ಹೊಸ ಆಯಾಮ ನೀಡಿದ ದಿಟ್ಟ ಬರಹಗಾರ ಬಡತನದಿಂದ ಹುಟ್ಟಿದರೂ ಸತತ ಪರಿಶ್ರಮದಿಂದ ಮುಂದೆ ಬಂದವರು. ಪತ್ರಿಕೋದ್ಯಮ, ರಾಜಕೀಯ, ಚಲನಚಿತ್ರ ಸೇರಿದಂತೆ ಎಲ್ಲ ರಂಗದಲ್ಲೂ ಛಾಪು ಮೂಡಿಸಿದ ಚಾತಿ ರವಿಬೆಳೆಗೆರೆಯವರದ್ದು ಎಂದರು. ಹಾಯ್ ಬೆಂಗಳೂರು ಪತ್ರಿಕೆ ಮೂಲಕ ಬೆಂಗಳೂರಿನ ವಿಶಿಷ್ಠತೆಯನ್ನು ಜನರಿಗೆ ಪರಿಚಯಿಸುವ ಜತೆಗೆ ನೂರಾರು ತನಿಖಾ ವರದಿಯ ಮೂಲಕ ಜನರಿಗೆ ಜಾಗೃತಿ ಮೂಡಿಸಿದರು.
ಪತ್ರಿಕೋದ್ಯಮದಲ್ಲಿ ಪಿ. ಲಂಕೇಶ್ ಸ್ಥಾನ ತುಂಬಿದ ವ್ಯಕ್ತಿ ರವಿ ಬಿಳಿಗೆರೆಯವರು ಅವರ ಅಕಾಲಿಕ ಮರಣ ಪತ್ರಿಕೋದ್ಯಮ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಠವಾಗಿದ್ದು, ಅವರ ಆತ್ಮಕ್ಕೆ ದೇವರು ಚಿರಶಾಂತಿ ನೀಡಲಿ ಎಂದು ತಿಳಿಸಿದರು.
ಪತ್ರಕರ್ತ ಭಾಸ್ಕರ್ ಮಾತನಾಡಿ ರವಿಬಿಳಿಗೆರೆ ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದು, ಜಾತಿ ಮೀರಿದ ವ್ಯಕ್ತಿತ್ವ ಬೆಳೆಸಿಕೊಂಡಿದ್ದರು. ಪತ್ರಿಕೋದ್ಯಮದಲ್ಲಿ ಅವರ ಬರಹಕ್ಕೆ ವಿಶಿಷ್ಟವಾದ ಸ್ಥಾನ ಹೊಂದಿದರೂ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಮಂಜುನಾಥ ಹಾಲ್ಕುರಿಕೆ, ನಿರ್ದೇಶಕರಾಸ ಭಾಸ್ಕರ್, ರಂಗನಾಥ್, ಗಣೇಶ್, ಪತ್ರಕರ್ತರಾದ ಕುಮಾರಸ್ವಾಮಿ, ಸಿ.ಎನ್. ಸಿದ್ದೇಶ್ವರ್, ಮಿಥುನ್, ಬಿ.ಟಿ.ಕುಮಾರ್, ಶಶಿಕುಮಾರ್, ಸ್ವಾಮಿ, ಧರಣೇಶ್ ಮತ್ತಿತರರು ಉಪಸ್ಥಿತರಿದ್ದರು.