ರವಿ ಬೆಳಗೆರಿ ನಿಧನಕ್ಕೆ ಪತ್ರಕರ್ತರ ಸಂಘ ಸಂತಾಪ

ದೇವದುರ್ಗ.ನ.೧೪-ಹಿರಿಯ ಪತ್ರಕರ್ತ ರವಿ ಬೆಳೆಗೆರ ಅವರ ನಿಧನಕ್ಕೆ ದೇವದುರ್ಗ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಶುಕ್ರವಾರ ಸಭೆ ಸೇರಿ ಶ್ರದ್ದಾಂಜಲಿ ಸಲ್ಲಿಸಿತು.
ಸಂಘದ ಅಧ್ಯಕ್ಷ ಬಸನಗೌಡ ದೇಸಾಯಿ ಅಧ್ಯಕ್ಷತೆಯಲ್ಲಿ ಸಭೆ ಸೇರಿ ೨ ನಿಮಿಷಗಳ ಕಾಲ ಮೌನಾಚರಣೆ ಮಾಡಿ ರವಿ ಬೆಳಗೆರಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಶ್ರದ್ದಾಂಜಲಿ ಸಲ್ಲಿಸಿದರು. ನಂತರ ಮಾತನಾಡಿ ರವಿ ಬೆಳಗೆರಿ ಅಪ್ರತಿಮ ಪತ್ರಕರ್ತರಾಗಿ ದೇಶಾದ್ಯಂತ ಹೆಸರು ಮಾಡಿದವರು. ಬಾಲ್ಯ ಜೀವನದಲ್ಲಿ ಸಾಕಷ್ಟು ಕಷ್ಟಪಟ್ಟು ಪತ್ರಿಕಾರಂಗ ಪ್ರವೇಶಿಸಿ ಪತ್ರಿಕಾರಂಗದಲ್ಲಿ ಮೇಲ್ಪಂಕ್ತಿಯಲ್ಲಿ ಬೆಳೆದವರು. ಅವರ ತನಿಖಾ ವರದಿಗಳು ಮತ್ತು ಜಾಹೀರಾತು ರಹಿತ ಪತ್ರಿಕೆಯನ್ನು ಮುನ್ನೆಡೆಸುವ ರೀತಿ ಹಲವು ಓದುಗರನ್ನು ಸೆಳೆದಿತ್ತು. ಇಂತವರ ಕಾರ್ಯಕ್ಷಮತೆಯನ್ನು ಇಂದಿನ ಯುವ ಪತ್ರಕರ್ತರು ಅಳವಡಿಸಿಕೊಳ್ಳಬೇಕಾಗಿದೆ ಎಂದರು. ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಸವರಾಜ ಬ್ಯಾಗವಾಟ ಮಾತನಾಡಿದರು.
ಈ ಸಂದರ್ಭದಲ್ಲಿ ಸಂಘದ ಪ್ರಧಾನ-ಕಾರ್ಯದರ್ಶಿ ಬಾಬು ಅಲಿ ಕರಿಗುಡ್ಡ, ಉಪಾಧ್ಯಕ್ಷರಾದ ಮಾರ್ಕಂಡಯ್ಯ ನಾಡದಾಳ, ಪತ್ರಕರ್ತರಾದ ರವಿಕುಮಾರ ಪಾಟೀಲ್ ಅಳ್ಳುಂಡಿ, ಬೆಳ್ಳಿಯಪ್ಪ ಬಲ್ಲಿದವ್, ನಾಗರಾಜ ತೇಲ್ಕರ್, ನಾಗರಾಜ ಸುಟ್ಟಿ, ಗುರುನಾಥ ಇಂಗಳದಾಳ ಸೇರಿದಂತೆ ಇನ್ನಿತರರು ಇದ್ದರು.
೧೪-ಡಿವಿಡಿ-೪