ರವಿ ಪೂಜಾರಿ ಬೆನ್ನತ್ತಿದ್ದ ಕೇರಳ ಪೊಲೀಸರು

ಬೆಂಗಳೂರು/ತಿರುವನಂತಪುರಂ, ಜ.೮- ಕೊಲೆ ಸೇರಿದಂತೆ ಗಂಭೀರ ಅಪರಾಧ ಪ್ರಕರಣಗಳ ಸಂಬಂಧ ಬಂಧನ ಕ್ಕೊಳಗಾಗಿರುವ ಭೂಗತ ಪಾತಕಿ ರವಿ ಪೂಜಾರಿಯ ಬೆನ್ನ ಹಿಂದೆ ಇದೀಗ ಕೇರಳ ಪೊಲೀಸರು ಬಿದ್ದಿರುವ ವಿಚಾರ ಬೆಳಕಿಗೆ ಬಂದಿದೆ.
ಕೇರಳದ ಪ್ರತಿಪಕ್ಷದ ನಾಯಕ ರಮೇಶ್ ಚೆನ್ನಿಥಾಲಾ ಅವರಿಗೆ ೨೦೧೬ ರಲ್ಲಿ ಬೆದರಿಕೆ ಹಾಕಿದ ಪ್ರಕರಣ ಸಂಬಂಧ ಕೇರಳ ರಾಜ್ಯದ ಪೊಲೀಸರ ತಂಡವೊಂದು ಬೆಂಗಳೂರಿಗೆ ಬಂದು ರವಿ ಪೂಜಾರಿ ಅನ್ನು ವಿಚಾರಣೆ ನಡೆಸಿ, ಆತನ ಹೇಳಿಕೆಗಳನ್ನು ದಾಖಲು ಮಾಡಿಕೊಂಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಕೇರಳ ಪೊಲೀಸ್ ತಂಡದ ತಿರುವನಂತಪುರಂ ಕಂಟೋನ್ಮೆಂಟ್ ಸಹಾಯಕ ಆಯುಕ್ತ ಸುನೀಶ್ ಬಾಬು, ನಾವು ಪ್ರಸ್ತುತ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರವಿ ಪೂಜಾರಿ ಅವರನ್ನು ಪ್ರಶ್ನಿಸಿದ್ದೇವೆ. ದೂರವಾಣಿ ಕರೆ ಮಾಡಿದ್ದ ರವಿ ಪೂಜಾರಿ ಈ ರಮೇಶ್ ಚೆನ್ನಿಥಾಲಾ ಅವರಿಗೆ ಕೊಲೆ ಬೆದರಿಕೆ ಹಾಕಿದ್ದ ಎಂದರು.
ಆದರೆ, ಕೇರಳದ ಮಾಜಿ ಗೃಹ ಸಚಿವರಾಗಿದ್ದ ಚೆನ್ನಿಥಾಲಾಗೆ ಬೆದರಿಕೆವೊಡ್ಡಿಲ್ಲ.ಅಲ್ಲದೆ, ಈ ಪ್ರಕರಣದಲ್ಲಿ ಯಾವುದೇ ಪಾತ್ರವಿಲ್ಲ ಎಂದು ರವಿಪೂಜಾರಿ ಹೇಳಿಕೆ ನೀಡಿರುವುದಾಗಿ ತಿಳಿದುಬಂದಿದೆ.
ರವಿ ಪೂಜಾರಿ ಮೇಲೆ ಕೇರಳದಲ್ಲೂ ಅನೇಕ ಪ್ರಕರಣಗಳು ದಾಖಲಾಗಿವೆ. ಪ್ರಮುಖವಾಗಿ ಕೊಚ್ಚಿಯಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ನಟಿ ಲೀನಾ ಮಾರಿಯಾ ಪಾಲ್ ಅವರಿಂದ ಹಣ ಸುಲಿಗೆ ಮಾಡಿದ ಆರೋಪ.ಜತೆಗೆ
೨೦೧೮ ರಲ್ಲಿ ರವಿ ಪೂಜಾರಿ ಬಂಟರು ಎನ್ನಲಾದ ಇಬ್ಬರು ವ್ಯಕ್ತಿಗಳು ಗುಂಡು ಹಾರಿಸಿದ್ದರು.