ರವಿ ಪಾಟೀಲ್ ಹುಟ್ಟುಹಬ್ಬ : ಕೈ ಕಲ್ಲು ಎತ್ತುವ ಸ್ಪರ್ಧೆ

ರಾಯಚೂರು,ಆ.೦೧- ಗ್ರಾಮೀಣ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ರವಿ ಪಾಟೀಲ್ ಅವರ ೪೪ನೇ ಹುಟ್ಟುಹಬ್ಬದ ಅಂಗವಾಗಿ ಕ್ಷೇತ್ರದ ಯುವಕರು ಮತ್ತು ಸಾದಪೂರು ಗ್ರಾಮದ ಯುವಕರು ಹಾಗೂ ರವಿ ಪಾಟೀಲ್ ಅವರ ಅಭಿಮಾನಿಗಳ ಬಳಗದ ವತಿಯಿಂದ ಕೈ ಕಲ್ಲು ಹಾಗೂ ಭಾರದ ಚೀಲ ಎತ್ತುವ ಸ್ಪರ್ಧೆಯನ್ನು ಸಾದಪೂರು ಗ್ರಾಮದಲ್ಲಿ ಏರ್ಪಡಿಸಲಾಗಿತ್ತು.
ಕೈ ಕಲ್ಲು ಎತ್ತುವ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಥಮ ಬಹುಮಾನ ೭ ತೊಲೆ ಬೆಳ್ಳಿ, ದ್ವಿತೀಯ ಬಹುಮಾನ ೫ ತೊಲೆ ಹಾಗೂ ತೃತೀಯ ಬಹುಮಾನ ೨ ತೊಲೆ ಬೆಳ್ಳಿಯನ್ನು ವಿತರಣೆ ಮಾಡಿದರು. ಭಾರದ ಚೀಲ ಎತ್ತುವ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಥಮ ಬಹುಮಾನ ೭ ತೊಲೆ ಬೆಳ್ಳಿ, ದ್ವಿತೀಯ ಬಹುಮಾನ ೫ ತೊಲೆ, ಹಾಗೂ ತೃತೀಯ ಬಹುಮಾನ ೩ ತೊಲೆ ಬೆಳ್ಳಿಯನ್ನು ಜೆಡಿಎಸ್ ಪಕ್ಷದ ಗ್ರಾಮೀಣ ಕ್ಷೇತ್ರದ ಅಭ್ಯರ್ಥಿ ರವಿ ಪಾಟೀಲ್ ಅವರು ವಿತರಣೆ ಮಾಡಿ ಅಭಿಮಾನಿಗಳಿಗೆ ಹಾಗೂ ಕ್ಷೇತ್ರದ ಯುವಕರಿಗೆ ಕೃತಜ್ಞತೆ ಸಲ್ಲಿಸಿ ಶುಭಕೋರಿದರು.
ಆ.೨ ರಂದು ರವಿ ಪಾಟೀಲ್ ಅವರು ೪೪ನೇ ವಸಂತಕ್ಕೆ ಕಾಲಿಡಿಲಿದ್ದಾರೆ.ಅವರ ಹುಟ್ಟುಹಬ್ಬದ ಮುಂಚಿತವಾಗಿಯೇ ಅಭಿಮಾನಿಗಳು ಕ್ಷೇತ್ರದ ಯುವಕರು ಕೈ ಕಲ್ಲು ಹಾಗೂ ಭಾರದ ಚೀಲ ಎತ್ತುವ ಸ್ಪರ್ಧೆ ಹಾಗೂ ಇತರೇ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.
ಈ ಸಂದರ್ಭದಲ್ಲಿ ರವಿ ಪಾಟೀಲ್ ಬೆಂಬಲಿಗರು, ಅಭಿಮಾನಿಗಳು, ಸಾದಪೂರು ಗ್ರಾಮದ ಯುವಕರು ಹಾಗೂ ಸುತ್ತ ಮುತ್ತಲಿನ ಗ್ರಾಮಸ್ಥರು ಸೇರಿದಂತೆ ಉಪಸ್ಥಿತರಿದ್ದರು.