ರವಿಶಾಸ್ತ್ರಿ ಸಲಹೆ ಸ್ಮರಿಸಿದ ಕೊಹ್ಲಿ

ಪ್ರಸ್ತುತ ವಿಶ್ವದ ಶ್ರೆಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿರುವ ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ, ತಮ್ಮ ವೃತ್ತಿ ಜೀವನದ ಅತ್ಯಂತ ಕೆಟ್ಟ ಹಂತದಲ್ಲಿ ರವಿಶಾಸ್ತ್ರಿ ನೀಡಿದ್ದ ಸಲಹೆಯನ್ನು ಸ್ಮರಿಸಿಕೊಂಡಿದ್ದಾರೆ.

ನವದೆಹಲಿ, ಜು 25-2014ರ ಇಂಗ್ಲೆಂಡ್‌ ಪ್ರವಾಸದ ವೈಫಲ್ಯದಿಂದ ಕಂಗೆಟ್ಟಿದ್ದ ಟೀಂ ಇಂಡಿಯಾದ ನಾಯಕ ವಿರಾಟ್‌ ಕೊಹ್ಲಿ ಅವರಿಗೆ ಅಂದಿನ ತಂಡದ ನಿರ್ದೇಶಕರಾಗಿದ್ದ ರವಿಶಾಸ್ತ್ರಿ ಅವರು ಕೊಟ್ಟ ಸಲಹೆಯನ್ನು ಸ್ಮರಿಸಿಕೊಂಡಿದ್ದಾರೆ.  ಐಸಿಸಿ 19 ವಯೋಮಿತಿ ವಿಶ್ವಕಪ್‌ ಟೂರ್ನಿಯಲ್ಲಿ  ಅದ್ಭುತ ಪ್ರದರ್ಶನ ತೋರಿದ್ದ ಬಳಿಕ  ನಾಯಕ ವಿರಾಟ್‌ ಕೊಹ್ಲಿ, 2014ರ ಇಂಗ್ಲೆಂಡ್‌ ಪ್ರವಾಸದಲ್ಲಿ ಹಿರಿಯರ ತಂಡದಲ್ಲಿ ಸತತ ವೈಫಲ್ಯ ಅನುಭವಿಸಿದ್ದರು. ಆಗ ರವಿಶಾಸ್ತ್ರಿ ಅವರು ಕೊಟ್ಟ ಸಲಹೆಗಳು ನನ್ನ ಕ್ರಿಕೆಟ್‌ ಜೀವನಕ್ಕೆ ಸುಗಮ ದಾರಿ ಮಾಡಿಕೊಟ್ಟಿತ್ತು.

ಟೀಮ್‌ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್‌ ಮಯಾಂಕ್ ಅಗರ್ವಾಲ್‌ ಅವರ ಬಿಸಿಸಿಐ ಟಿವಿಯ ‘ಓಪನ್‌ ನೆಟ್ಸ್‌ ವಿಥ್‌ ಮಯಾಂಕ್‌’ ಕಾರ್ಯಕ್ರಮದಲ್ಲಿ ಮಾತನಾಡಿದ ಕೊಹ್ಲಿ 2014ರ ಇಂಗ್ಲೆಂಡ್‌ ಪ್ರವಾಸದ ಟೆಸ್ಟ್ ಸರಣಿಯಲ್ಲಿ 10 ಇನಿಂಗ್ಸ್‌ಗಳಿಂದ ಗಳಿಸಿದ್ದು 134 ರನ್‌ಗಳು, ತಮ್ಮ ವೃತ್ತಿ ಜೀವನದಲ್ಲೇ ಅತ್ಯಂತ ಕೆಟ್ಟ ಹಂತ ಹಾಗೂ ತನ್ನ ಕ್ರಿಕೆಟ್‌ ವೃತ್ತಿ ಬದುಕಿನ ಅಂತ್ಯ ಎಂದೇ ಕೊಹ್ಲಿ ಅಂದು ಭಾವಿಸಿದ್ದರು.

2014ರ ಟೆಸ್ಟ್ ಸರಣಿ ಬಳಿಕ ಒಳ್ಳೆಯದೇ ಆಯಿತು. ನನ್ನನ್ನು ಹಾಗೂ ಧವನ್‌ ಇಬ್ಬರನ್ನೂ ರವಿ ಶಾಸ್ತ್ರಿ, ಅವರ ಕೊಠಡಿಗೆ ಕರೆದು,  ನೀವು ಮಾಡುವ ಸಣ್ಣಪುಟ್ಟ ಕೆಲಸಗಳು ಭಾರಿ ವ್ಯತ್ಯಾಸವನ್ನುಂಟುಮಾಡುತ್ತವೆ, ಅದು ಅವರಿಗೆ ತಿಳಿದಿದೆ. ಏಕೆಂದರೆ, ಕೆಳ ಕ್ರಮಾಂಕದ ಆಟಗಾರ ಭಾರತದ ಪರ ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಆಡಿ 40 ಕ್ಕಿಂತ ಹೆಚ್ಚು ಸರಾಸರಿ ಮತ್ತು ವಿಶ್ವದ ಎಲ್ಲೆಡೆ ಶತಕಗಳನ್ನು ಗಳಿಸಿಬೇಕಾದರೆ, ನೀವು ಆಟದ ಬಗ್ಗೆ ಉತ್ತಮ ತಿಳುವಳಿಕೆಯನ್ನು ಹೊಂದಿರಬೇಕು. ಆದ್ದರಿಂದ ರವಿ ಶಾಸ್ತ್ರಿ ಅವರ ತಿಳುವಳಿಕೆ ತುಂಬಾ ತೀಕ್ಷ್ಣವಾಗಿತ್ತು,” ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.

ರವಿಶಾಸ್ತ್ರಿ ಸಲಹೆಯನ್ನು ಪರಿಗಣಿಸಿ ಕ್ರೀಸ್‌ನಿಂದ ಹೊರ ನಿಂತು ಅಭ್ಯಾಸ ಶುರು ಮಾಡಿದೆ. ಆಡುವಾಗ ಮನಸ್ಸು ಹೇಗಿಟ್ಟುಕೊಳ್ಳಬೇಕೆಂದು ಅವರು ತಿಳಿಸಿದ್ದರು. ‘ಬ್ಯಾಟಿಂಗ್‌ ಮಾಡುವಾಗ ಕ್ರೀಸ್‌ ಹಾಗೂ ನಿಮ್ಮ ನಡುವಿನ ಅಂತರವನ್ನು ನಿಯಂತ್ರಣದಲ್ಲಿರಬೇಕು ಹಾಗೂ ಬೌಲರ್‌ಗೆ ವಿಕೆಟ್‌ ನೀಡಬಾರದು. ಕ್ರೀಸ್‌ನಿಂದ ಹೊರ ನಿಂತಾಗ ಹಲವು ಬಾರಿ ಔಟ್‌ ಆಗುವ ಸಾಧ್ಯತೆಗಳಿರುತ್ತವೆ.’ ಇದೇ ರೀತಿ ನಾನು ಆಸ್ಟ್ರೇಲಿಯಾದಲ್ಲಿ ಆಡಿದೆ, ಫಲಿತಾಂಶ ಅದ್ಭುತವಾಗಿ ಮೂಡಿಬಂತು ಎಂದು ಕೊಹ್ಲಿ ಸ್ಮರಿಸಿದ್ದಾರೆ.