ರವಿಬೋಪಣ್ಣ ಟ್ರೈಲರ್ ಅನಾವರಣ

ಕನಸುಗಾರ ಕ್ರೇಜಿಸ್ಟಾರ್ ರವಿಚಂದ್ರನ್ ಇತ್ತೀಚಿಗೆ ಒಂದಕ್ಕಿಂತ ಒಂದು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡು ಅಭಿಮಾನಿಗಳ  ಕುತೂಹಲವನ್ನು ಮತ್ತಷ್ಟು ಹೆಚ್ಚು ಮಾಡುತ್ತಿದ್ದಾರೆ.

ಇದರ ಸಾಲಿಗೆ ಮತ್ತೊಂದು ಹೊಸ ಸೇರ್ಪಡೆ “ರವಿ ಬೋಪಣ್ಣ”. ವಿಭಿನ್ನ ಕಥಾ ಹಂದರವಿರುವ ಪಾತ್ರದಲ್ಲಿ ಕಾಣಿಸಿಕೊಂಡಿರುವ “ರವಿ ಬೋಪಣ್ಣ” ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.

ಮರ್ಡರ್ ಮಿಸ್ಟ್ರಿಯ ಜೊತೆಗೆ ಥ್ರಿಲ್ಲರ್ ಕಥೆಯನ್ನು ಒಳಗೊಂಡಿರುವ ಚಿತ್ರದ ಟ್ರೈಲರ್ ಅಭಿಮಾನಿಗಳಿಗೆ ಹಬ್ಬದ ವಾತಾವರಣ ಸೃಷ್ಠಿಮಾಡಿದೆ. ಟ್ರೈಲರ್‍ಗೆ ಅಭಿಮಾನಿಗಳು ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದಾರೆ.

ರವಿಬೋಪಣ್ಣ ಚಿತ್ರದಲ್ಲಿ ರವಿಚಂದ್ರನ್ ಅವರು ವಿಭಿನ್ನ ಮತ್ತು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಅಭಿಮಾನಿಗಳನ್ನು ತುದಿಗಾಲ ಮೇಲೆ ನಿಲ್ಲುವಂತೆ ಮಾಡಿದೆ.

ಚಿತ್ರದಲ್ಲಿ ಕೊಲೆಯ ಜಾಡು ಹಿಡಿದು ಅದನ್ನು ಬೆನ್ನತ್ತುವ ಪಾತ್ರದಲ್ಲಿ ರವಿಚಂದ್ರನ್ ಕಾಣಿಸಿಕೊಂಡಿದ್ದಾರೆ,ಹೀಗಾಗಿಯೇ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಹಿಮ್ಮಡಿಗೊಳಿಸಿದೆ.

ಅಂದಹಾಗೆ ಕನ್ನಡ ಚಿತ್ರರಂಗ ಕಂಡ ಅಪರೂಪದ ನಟ, ನಿರ್ದೇಶಕ, ನಿರ್ಮಾಪಕ ರವಿಚಂದ್ರನ್ ಅವರ ತಂದೆ ಎನ್,ವೀರಾಸ್ವಾಮಿ ಅವರು ಸ್ಥಾಪಿಸಿದ ಈಶ್ವರಿ ಕಂಬೈನ್ಸ್ ಸಂಸ್ಥೆಗೆ 50 ವರ್ಷ ಪೂರ್ಣಗೊಂಡಿರುವ ಸುವರ್ಣ ಹಬ್ಬದ ಸಮಯದಲ್ಲಿ “ರವಿ ಬೋಪಣ್ಣ” ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.

ವಿಶೇಷ ಸಂದರ್ಭದಲ್ಲಿ ಬಿಡುಗಡೆಯಾಗಿರುವ “ರವಿ ಬೋಪಣ್ಣ” ಚಿತ್ರದ ಟ್ರೈಲರ್ ಕೂಡ ಗಮನ ಸೆಳಿದಿದೆ. ರವಿಚಂದ್ರನ್ ಅವರು ನಿರ್ದೇಶನ ಮಾಡಿರುವ ಚಿತ್ರದಲ್ಲಿ ರವಿಚಂದ್ರನ್, ಸುದೀಪ್, ರಮ್ಯಾ ಕೃಷ್ಣಾ, ಜೈಜಗದೀಶ್, ರವಿಶಂಕರ್ ಗೌಡ, ಮೋಹನ್,ಕಾವ್ಯ ಶೆಟ್ಟಿ ಮತ್ತಿತರರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ,