ರವಿಕುಮಾರ್ ಕೀಲಾರ್ ಮೂಲೆಯವರಿಗೆ ಮುಖ್ಯಮಂತ್ರಿಗಳಿಂದ ಪದಕ

ಸುಳ್ಯ,ಎ.೨- ಕರ್ನಾಟಕ ರಾಜ್ಯ ಪೋಲಿಸ್ ಇಲಾಖೆಯಲ್ಲಿ ಪ್ರಾಮಾಣಿಕ ಹಾಗೂ ದಕ್ಷತೆಯಿಂದ ಸೇವೆ ಸಲ್ಲಿಸಿದ ಸಂಪಾಜೆ ಗ್ರಾಮದ ಕೀಲಾರ್‌ಮೂಲೆ ರವಿಕುಮಾರ್‌ರವರು ಮುಖ್ಯಮಂತ್ರಿಗಳಿಂದ ಪದಕ ಸ್ವೀಕರಿಸಿದರು. ರಾಜ್ಯ ಪೋಲಿಸ್ ಧ್ವಜ ದಿನಾಚರಣೆ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪದಕ ಪ್ರದಾನ ಮಾಡಿದರು. ರವಿಕುಮಾರ್ ಬೆಂಗಳೂರು ನಗರ ಪೋಲಿಸ್ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.