ರವಾ ಬಾತ್

ಬೇಕಾಗುವ ಸಾಮಗ್ರಿಗಳು

*ಬನ್ಸಿ ರವೆ – ೧/೪ ಕೆ.ಜಿ
*ಬದನೆ ಕಾಯಿ – ೨
*ಟೊಮೆಟೊ – ೨
*ಕ್ಯಾರೆಟ್ – ೧೦
*ಬೀನ್ಸ್ – ೧೦
*ಹಸಿ ಬಟಾಣಿ – ೧ ಕಪ್
*ತೆಂಗಿನಕಾಯಿ ತುರಿ – ೧ ಕಪ್
*ಗುಂಟೂರು ಮೆಣಸಿನಕಾಯಿ – ೫
*ಬ್ಯಾಡಗಿ ಮೆಣಸಿನಕಾಯಿ – ೫
*ಸಾಸಿವೆ – ೧ ಚಮಚ
*ಈರುಳ್ಳಿ – ೨
*ಉದ್ದಿನ ಬೇಳೆ – ೨ ಚಮಚ
*ಕಡಲೇಬೇಳೆ – ೨ ಚಮಚ
*ಚಕ್ಕೆ – ೮ ಪೀಸ್
*ಲವಂಗ – ೮
*ಏಲಕ್ಕಿ – ೮
*ಲಿಂಬೆರಸ – ೧ ಚಮಚ
*ತುಪ್ಪ – ೩ ಚಮಚ
*ಉಪ್ಪು – ೨ ಚಮಚ
*ಎಣ್ಣೆ – ೧೦೦ ಮಿ.ಲೀ
*ನೀರು – ೩೦೦ ಮಿ.ಲೀ

ಮಾಡುವ ವಿಧಾನ :

ಬಾಣಲಿಗೆ ತುಪ್ಪ, ಬನ್ಸಿ ರವೆ ಹಾಕಿ ಕೆಂಪಗೆ ಹುರಿದುಕೊಳ್ಳಿ. ಪಾತ್ರೆಗೆ ನೀರು ಹಾಕಿ ಬಿಸಿಯಾಗಲು ಇಡಿ. ಚಕ್ಕೆ, ಲವಂಗ, ಏಲಕ್ಕಿ, ಬ್ಯಾಡಗಿ ಮೆಣಸಿನಕಾಯಿ, ಗುಂಟೂರು ಮೆಣಸಿನಕಾಯಿ, ತೆಂಗಿನ ಕಾಯಿ ತುರಿಯನ್ನು ನೀರು ಹಾಕದೆ ರುಬ್ಬಿಕೊಳ್ಳಿ. ಬಾಣಲಿಗೆ ತುಪ್ಪ, ಎಣ್ಣೆ ಹಾಕಿ. ಬಿಸಿಯಾದ ಮೇಲೆ ಸಾಸಿವೆ, ಜೀರಿಗೆ, ಕಡಲೇಬೇಳೆ, ಉದ್ದಿನಬೇಳೆ, ಈರುಳ್ಳಿ, ಹಾಕಿ ಹುರಿಯಿರಿ.ಇದಕ್ಕೆ ಟೊಮೆಟೊ, ಬೀನ್ಸ್, ಕ್ಯಾರೆಟ್, ಬದನೆಕಾಯಿ ಹಾಕಿ. ನಂತರ ರುಚಿಗೆ ತಕ್ಕಷ್ಟು ಉಪ್ಪು, ರುಬ್ಬಿದ ಮಸಾಲೆ, ಬಿಸಿನೀರು ಹುರಿದ ಬನ್ಸಿ ರವೆ ಹಾಕಿ, ಮುಚ್ಚಳ ಮುಚ್ಚಿ ಬೇಯಲು ಬಿಡಿ. ಕೊನೆಯಲ್ಲಿ ನಿಂಬೆರಸ ಹಾಕಿದರೆ ರವಾ ಬಾತ್ ತಿನ್ನಲು ರೆಡಿ.