ರಮೇಶ ಸಿಡಿ ಪ್ರಕರಣ: ಸಿಬಿಐ ಗೆ ನೀಡಲು ಒತ್ತಾಯ

ರಾಯಚೂರು, ಮಾ.೨೬- ಮಾಜಿ ಸಚಿವ ರಮೇಶ ಜಾರಕಿಹೊಳಿ ಯುವತಿ ಜೊತೆ ರಾಸಲೀಲೆ ಸಿ.ಡಿ ಬಹಿರಂಗಗೊಂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಈ ಪ್ರಕರಣವನ್ನು ಸಿ.ಬಿ.ಐ ತನಿಖೆಗೆ ಒಪ್ಪಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಧಿಕಾರಿಗಳ ಮೂಲ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ. ಮಾಜಿ ಸಚಿವ ರಮೇಶ ಜಾರಕಿಹೊಳಿ ಯುವತಿ ಜೊತೆ ರಾಸಲೀಲೆ ಪ್ರಕರಣವು ಸಿ.ಡಿ. ಮೂಲಕ ಬಹಿರಂಗಗೊಂಡಿದ್ದು ಸದರಿ ರಾಸಲೀಲೆ ಪ್ರಕರಣವು ರಾಜ್ಯ ಸರ್ಕಾರವು ನಿಷ್ಪಕ್ಷಪಾತವಾಗಿ ತನಿಖೆ ನಡೆಸಲು ಸಾಧ್ಯವಾಗುತ್ತಿಲ್ಲ. ಕಾರಣ ಇದನ್ನು ಕೇಂದ್ರ ಸಿ.ಬಿ.ಐ. ತನಿಖೆಗೆ ಒಳಪಡಿಸಬೇಕೆಂದು ಒತ್ತಾಯಿಸಿದರು.
ಯಡಿಯೂರಪ್ಪನವರು ಮುಖ್ಯ ಮಂತ್ರಿಯಾಗಬೇಕಾದರೆ ರಮೇಶ ಜಾರಕಿಹೊಳಿ ಇವರು ಶಾಸಕರುಗಳಿಗೆ ಸಾಮೂಹಿಕ ರಾಜೀನಾಮೆ ಕೊಡಿಸಿ ಅವರನ್ನು ಬಾಂಬೆ ಮತ್ತು ರೆಸಾರ್ಟ್‌ಗಳಿಗೆ ಕರೆದುಕೊಂಡು ಹೋಗಿ ಮಜಾ ಮಸ್ತು ಮಾಡಿಸಿ ಅವರಿಗೆ ಅಧಿಕಾರ ಮತ್ತು ಕೋಟ್ಯಾಂತರ ರೂಪಾಯಿ ಆಮಿಷ ಒಡ್ಡಿ ಅವರ ಸ್ಥಾನಗಳಿಗೆ ರಾಜೀನಾಮೆ ಕೊಡಿಸಿ ಯಡಿಯೂರಪ್ಪನವರು ಮುಖ್ಯ ಮಂತ್ರಿಯಾಗಲು ರಮೇಶ ಜಾರಣಹೊಳೆ ಇವರ ಕಾರಣ ಇಂತಹ ವ್ಯಕ್ತಿಯ ವಿರುದ್ಧ ರಾಜ್ಯ ಸರ್ಕಾರವು ನಿಷ್ಪಕ್ಷಪಾತವಾಗಿ ತನಿಖೆ ನಡೆಸಲು ಸಾಧ್ಯವಿಲ್ಲ ಎಂದು ದೂರಿದರು.
ರಮೇಶ ಜಾರಕಿಹೋಳಿ ಕೃಪಾಶೀರ್ವಾದದಿಂದ ಮುಖ್ಯಮಂತ್ರಿಯಾದ ಯಡಿಯೂರಪ್ಪನವರು ಕೇವಲ ನಾಟಕೀಯವಾಗಿ ಎಸ್.ಐ.ಟಿ. ತನಿಖೆಗೆ ಆದೇಶಿಸಿದ್ದು,ಇದು ನಿಷ್ಪಕ್ಷ ತನಿಖೆಗೆ ಸಾಧ್ಯವೇ ಇಲ್ಲ. ರಾಸಲೀಲಾ ಸಿ.ಡಿ. ಪ್ರಕರಣವು ಏನೆಲನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದು,ಇದರಲ್ಲಿ ಯಾರು ತಪ್ಪಿತಸ್ಥರೆಂದು ಇನ್ನೂ ನಿಗೂಡವಾಗಿದೆ,೮ ಜನ ಶಾಸಕರು ತಮ್ಮ ವಿರುದ್ಧ ಯಾವುದೇ ಸಿ.ಡಿ.ಯನ್ನು ಪ್ರಕಟಿಸಬಾರದೆಂದು ನ್ಯಾಯಾಲಯದ ತಡೆಯಾಜ್ಞೆ ತಂದಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ ಎಂದು ಆರೋಪಿಸಿದರು.
ರಮೇಶ ಜಾರಕಿಹೊಳಿ ರಾಸಲೀಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂದು ಮೇಲ್ನೋಟಕ್ಕೆ ಸಾಬೀತಾಗುತ್ತದೆ.೩ ಪಕ್ಷಗಳು ಒಬ್ಬರ ಮೇಲೆ ಒಬ್ಬರು ಆರೋಪ ಮಾಡುವುದರಲ್ಲಿ ನಿರತರಾಗಿದ್ದಾರೆ. ಇದು ಕರ್ನಾಟಕ ಒಬ್ಬ ಮಹಿಳೆಯ ಮಾನಮರ್ಯಾದೆ ಪ್ರಶ್ನೆಯಾಗಿದ್ದು ಇದು ಒಬ್ಬ ಮಹಿಳೆಯ ಮತ್ತು ಕುಟುಂಬದ ಮಾನ ಹಾನಿ ಹಾಗೂ ತೇಜೋವಧೆ ಮಾಡುವಂತಹ ವಿಷಯವಾಗಿದ್ದರಿಂದ ಹಾಗೂ ಸರ್ಕಾರದ ಮರ್ಯಾದೆ ಪ್ರಶ್ನೆಯಾಗಿದ್ದು. ಈ ವಿಷಯವನ್ನು ಸರ್ಕಾರ ಕೂಡಲೇ ಸಿ.ಬಿ.ಐ , ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಎಂ ಈರಣ್ಣ, ಎಂ ವಸಂತಕುಮಾರ,ಪ್ರಸಾದ್ ಅಶಾಪೂರ,ಯಲ್ಲಪ್ಪ,ಸೇರಿದಂತೆ ಅನೇಕರು ಇದ್ದರು.