ರಮೇಶ ಭೂಸನೂರಗೆ ಬಿಜೆಪಿಯಿಂದ ಸನ್ಮಾನ

ವಿಜಯಪುರ, ನ.3-ಸಿಂದಗಿ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿಯಾದ ರಮೇಶ ಭೂಸನೂರ ಅವರು ಪ್ರಚಂಡ ಬಹುಮತದಿಂದ ಗೆಲವು ಸಾಧಿಸಿದ ಬಳಿಕೆ ಬಿಜೆಪಿ ಕಛೇರಿಗೆ ಭೇಟಿ ನೀಡಿದÀ ವೇಳೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ್ ಕುಚಬಾಳ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಸಿಂದಗಿ ಮತದಾರರು ಉಪಚುನಾವಣೆಯಲ್ಲಿ ಭೂಸನೂರ ಅವರನ್ನು 31 ಸಾವಿರ 88 ಮತಗಳ ಅಂತರದಿಂದ ಗೆಲವು ಸಾಧಿಸುವುದರ ಮೂಲಕ ಆರ್ಶೀವದಿಸಿದ್ದಾರೆ. ಇದು ಬಿಜೆಪಿಯ ಗೆಲವು ಆಗಿದೆ. ಜನರು ಬಿಜೆಪಿ ಪರವಾಗಿಯೇ ಇದ್ದಾರೆ ಎಂಬುವುದಕ್ಕೆ ಸಿಂದಗಿ ಉಪಚುನಾವಣೆ ಸಾಕ್ಷಿಯಾಗಿದೆ ಎಂದರು.
ಈ ಒಂದು ಉಪಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ರಮೇಶ ಭೂಸನೂರ ಗೆಲುವಿಗೆ ಕಾರಣಿಭೂತರಾದ ರಾಜ್ಯದ ಮುಖ್ಯಮಂತ್ರಿಯಾದ ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷರಾದ ನಳೀನಕುಮಾರ ಕಟೀಲ, ಮಾಜಿ ಡಿ.ಸಿ.ಎಂ. ಲಕ್ಷ್ಮಣ ಸವದಿ, ಸಚಿವರುಗಳಾದ ಗೋವಿಂದ ಕಾರಜೋಳ, ವಿ.ಸೋಮಣ್ಣ, ಸಿ.ಸಿ. ಪಾಟೀಲ್, ಶಶಿಕಲಾ ಜೊಲ್ಲೆ, ಜಿಲ್ಲೆಯ ಸಂಸದರಾದ ರಮೇಶ ಜಿಗಜಿಗಣಗಿ, ಜಿಲ್ಲೆಯ ಶಾಸಕರುಗಳಾದ ಸೋಮನಗೌಡ ಸಾಸನೂರ, ಎ.ಎಸ್.ಪಾಟೀಲ್ ನಡಹಳ್ಳಿ, ಬಸನಗೌಡ ಪಾಟೀಲ್ ಯತ್ನಾಳ, ವಿಧಾನ ಪರಿಷತ್ ಸದಸ್ಯರಾದ ಅರುಣ ಶಹಾಪೂರ, ವಿಜುಗೌಡ ಪಾಟೀಲ್, ಅಶೋಕ ಅಲ್ಲಾಪೂರ ಸೇರಿದಂತೆ ರಾಜ್ಯ ಹಾಗೂ ಜಿಲ್ಲೆಯ ಬಿಜೆಪಿ ಮುಖಂಡರು, ಕಾರ್ಯಕರ್ತರು, ಪದಾಧಿಕಾರಿಗಳಿಗೆ ಅವಿರತವಾಗಿ ಶ್ರಮಿಸಿದ್ದಾರೆ ಹಾಗೂ ಸಿಂದಗಿ ಮತಕ್ಷೇತ್ರದ ಮತದಾರರಿಗೆ ನಾನು ಹೃದಯಪೂರ್ವಕವಾಗಿ ಅಭಿನಂದನೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀಮತಿ ಶಶಿಕಲಾ ಜೊಲ್ಲೆ, ಶಾಸಕರಾದ ಸೋಮನಗೌಡ ಸಾಸನೂರ, ಬೆಳಗಾಂವ ವಿಭಾಗದ ಪ್ರಭಾರಿಗಳಾದ ಚಂಧ್ರಶೇಖರ ಕವಟಗಿ, ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ, ಜಿಲ್ಲೆಯ ಪ್ರಧಾನ ಕಾರ್ಯದರ್ಶಿಗಳಾದ ಬಸವರಾಜ ಬಿರಾದಾರ, ಮಲ್ಲಿಕಾರ್ಜುನ ಜೋಗೂರ, ಕಾಸುಗೌಡ ಬಿರಾದಾರ, ಗುರುಲಿಂಗಪ್ಪ ಅಂಗಡಿ, ಸಿಂದಗಿ ಮಂಡಲದ ಅಧ್ಯಕ್ಷರಾದ ಈರಣ್ಣ ರಾವೂರ, ಸುರೇಶ ಬಿರಾದಾರ, ವಿಜಯಜೋಶಿ ಸೇರಿದಂತೆ ಪಕ್ಷದ ಮುಖಂಡರುಗಳ ಕಾರ್ಯಕರ್ತರು ಉಪಸ್ಥಿತರಿದ್ದರು.