ರಮೇಶ ಜಿಗಜಿಣಗಿ ಹಾಗೂ ಗೋವಿಂದ ಕಾರಜೋಳ ಗೆ ಕೇಂದ್ರದಲ್ಲಿ ಸಚಿವ ಸ್ಥಾನ ನೀಡಲು ಆಗ್ರಹ.


ಸಂಜೆವಾಣಿ ವಾರ್ತೆ
ಹೊಸಪೇಟೆ ಜೂ10:  ರಾಜ್ಯದ ಹಿರಿಯರು   ರಾಜಕಾರಣಿಗಳು ಅನುಭವಿಗಳು ಆಗಿರುವ ನಮ್ಮ ಮಾದಿಗ ಸಮುದಾಯದ ರಮೇಶ ಜಿಗಜಿಣಗಿ ಹಾಗೂ ಗೋವಿಂದ ಕಾರಜೋಳ ಗೆ ಕೇಂದ್ರದಲ್ಲಿ ಸಚಿವ ಸ್ಥಾನ ನೀಡಲು ಮಾದಿಗ ಮಹಾಸಭಾದ ವಿಜಯನಗರ ಜಿಲ್ಲಾ ಘಟಕ ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ.
ಹೊಸಪೇಟೆಯ ಪತ್ರಿಕಾಭವನದಲ್ಲಿ ಸೋಮವಾರ  ಮಾದಿಗ ಮಹಾಸಭಾದ ವಿಜಯನಗರ ಜಿಲ್ಲಾ ಘಟಕದ ಪದಾಧಿಕಾರಿಗಳು ಹಮ್ಮಿಕೊಂಡ ಸುದ್ಧಿ ಗೋಷ್ಠಿಯಲ್ಲಿ ಮಾತನಾಡಿ ಕೇಂದ್ರ ಸಚಿವ ಸಂಪುಟದಲ್ಲಿ ಎಡಗೈ ಸಮುದಾಯದ ಗೋವಿಂದ ಕಾರಜೋಳ ರವರು ಹಾಗೂ ರಮೇಶ ಜಿಗಜಿಣಗಿ ರವರನ್ನು ಕೈ ಬಿಟ್ಟಿರುವುದು ಸರಿಯಾದ ಕ್ರಮವಲ್ಲಾ, ಕೇವಲ ಸಮುದಾಯಕ್ಕೆ ಸೀಮಿತವಾಗದೆ ರಾಜ್ಯದ ಹಿತದೃಷ್ಟಿಯಿಂದ ಅತ್ಯಂತದೊಡ್ಡ ಸಮುದಾಯವಾಗಿದ್ದರು ಕೇವಲ ಎಲ್ಲಾ ಪಕ್ಷಗಳು ಓಟಬ್ಯಾಂಕ್ ಆಗಿ ಬಳಸಿಕೊಳ್ಳಲು ಮುಂದಾಗಿದ್ದು ವಿಷಾದನೀಯ, ಆದರೆ ಈ ಭಾರಿ ಅತ್ಯಂತ ಅನುಭವಿಯಾಗಿರುವ ಇಬ್ಬರು ಸಚಿವ ಸ್ಥಾನ ಪಡೆಯಲು ಅರ್ಹರಿದ್ದು ಅವಕಾಶ ನೀಡಬೇಕು, ಮುಂದಿ ದಿನಗಳಲ್ಲಾದರೂ ಅವಕಾಶ ನೀಡಬೇಕು ಎಂದು ವಿಜಯನಗರ ಜಿಲ್ಲೆ ಮಾದಿಗ ಮಹಾಸಭಾದ ಎಂ.ಸಿ.ವೀರಾಸ್ವಾಮಿ ರಾಮಚಂದ್ರ, ಭರತ್ ಕುಮಾರ, ಜಗನ್ (ಜಗದೀಶ) ಸಣ್ಣಮಾರೆಪ್ಪ, ಗಾದಿಲಿಂಗಪ್ಪ ಸೇರಿದಂತೆ ಮಾತನಾಡಿದ ಗಣ್ಯರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು
ಗೋಷ್ಠಿಯಲ್ಲಿ ಸೆಲ್ವಂ, ರಾಜು, ಹನುಮಂತಪ್ಪ, ಪಂಪಾಪತಿ, ರಘು, ಶ್ರೀನಿವಾಸ್, ಶೇಷು, ಕರಿಯಪ್ಪ ಸೇರಿದಂತೆ ಇತರರು ಹಾಜರಿದ್ದರು.