ರಮೇಶ ಜಾರಕಿಹೊಳಿ ಬಂಧಿಸುವಂತೆ ಕಾಂಗ್ರೆಸ್ ಮಹಿಳಾ ಕಾರ್ಯಕರ್ತರ ಆಗ್ರಹ

ವಿಜಯಪುರ, ಜೂ.3-ಮಾಜಿ ಸಚಿವ ರಮೇಶ ಜಾರಕಿಹೊಳಿ ವಿರುದ್ಧ ರಾಜ್ಯ ಮಹಿಳಾ ಆಯೋಗ ಸೂಕ್ತ ಕಾನೂನು ಕ್ರಮ ಜರುಗಿಸಿ ಬಂಧಿಸುವಂತೆ ಗುಮ್ಮಟನಗರಿ ಕೈ ಮಹಿಳಾ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿಯವರು ಅತ್ಯಾಚಾರ ಪ್ರಕರಣದ ಆರೋಪಿಯಾಗಿರುವ ರಮೇಶ್ ಜಾರಕಿಹೊಳಿ ವಿರುದ್ಧ ನಿಪ್ಪಕ್ಷಪಾತ ತನಿಖೆ ಮಾಡುತ್ತಿಲ್ಲ. ಬದಲಾಗಿ ಸಂತ್ರಸ್ತೆ ಯುವತಿಯ ವಿರುದ್ಧವಾಗಿ ತನಿಖೆ ಮಾಡಲಾಗುತ್ತಿದೆ. ಇನ್ನು ಯುವತಿ ವಿಶೇಷ ತನಿಖಾ ತಂಡದ ಎದುರು ರಮೇಶ ವಿರುದ್ಧ ಸಂಪೂರ್ಣ ಮಾಹಿತಿ ನೀಡಿದ್ರೂ ಸರ್ಕಾರ ಬಂಧಿಸುವ ಧೈರ್ಯ ತೋರಿಲ್ಲ. ಅದಕ್ಕಾಗಿ ರಾಜ್ಯ ಮಹಿಳಾ ಆಯೋಗ ಮಧ್ಯಸ್ಥಿಕೆ ವಹಿಸಿ ಅತ್ಯಾಚಾರ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆಕೈಗೊಂಡು ಆರೋಪಿ ಬಂಧಿಸಲು ಪೆÇೀಲಿಸರಿಗೆ ನಿರ್ದೇಶನ ನೀಡಬೇಕೆಂದು ಒತ್ತಾಯಿಸಿ ಡಿಸಿ ಮೂಲಕ ಮಹಿಳಾ ಆಯೋಗಕ್ಕೆ ಮನವಿ ಸಲ್ಲಿಸಿದರು.