ರಮೇಶ ಕುಮಾರ ಹಲ್ಲೆ ಖಂಡಿಸಿ ಪತ್ರಕರ್ತರ ಸಂಘದಿಂದ ಮನವಿ

ಸಿರವಾರ.ಆ.೦೩- ಕೋಲಾರ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಗಲಾಟೆಯ ವಿಡಿಯೋ ಮಾಡುವಾಗ ಪತ್ರಕರ್ತರ ಮೇಲೆ ಮಾಜಿ ಸಚಿವ ಮಾಜಿ ಸ್ಪೀಕರ್ ರಮೇಶ ಕುಮಾರ ಹಲ್ಲೆಮಾಡಿರುವುದು ಖಂಡನೀಯವಾಗಿದ್ದೂ,
ಮಾಜಿ ಸಚಿವ ರಮೇಶಕುಮಾರ ಅವರ ಮೇಲೆ ಸೂಕ್ತಕ್ರಮ ಜರುಗಿಸಬೇಕು, ಪತ್ರಕರ್ತರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಸಿರವಾರ ತಾಲೂಕು ಘಟಕದಿಂದ ಮುಖ್ಯ ಮಂತ್ರಿಗಳಿಗೆ ಬರದೆ ಮನವಿ ಪತ್ರವನ್ನು ತಹಸೀಲ್ದಾರಾದ ವಿಜಯೇಂದ್ರ ಹುಲಿನಾಯಕ ಮೂಲಕ ಸಲ್ಲಿಸುವ ಮೂಲಕ ಒತ್ತಾಯಿಸಲಾಯಿತು.
ಸಿರವಾರ ಹಾಗೂ ಕವಿತಾಳ ಪಟ್ಡಣದಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕೆ ಸರ್ಕಾರಿ ಭೂಮಿಯನ್ನು ಒದಗಿಸಿಕೊಡಬೇಕು ಎಂದು ಪ್ರತೇಕ ಮನವಿ ಪತ್ರದ ಮೂಲಕ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಎಂ.ಗುಂಡಪ್ಪ, ಪ್ರಧಾನ ಕಾರ್ಯದರ್ಶಿ ಹೆಚ್.ವೀರೇಶ, ಉಪಾಧ್ಯಕ್ಷರಾದ ಬಸವರಾಜ ಪೂಜಾರಿ, ನಾಗರಾಜ ಕರಿಬಿಲ್ಕರ್,ರಂಗನಾಥನಾಯಕ, ಅಮರೇಶ ಕವಿತಾಳ,ಮಾಜಿ ಅಧ್ಯಕ್ಷ ಸುರೇಶ ಹೀರಾ, ಖಜಾಂಚಿ ಮಹ್ಮದ್ ಅಲಿ, ಸಂಘದ ಪದಾಧಿಕಾರಿಗಳಾದ ಹನುಮೇಶ ಛಲವಾದಿ, ಎಂ.ದುರುಗಪ್ಪ, ರಷೀದ್ ಕವಿತಾಳ, ಹೊನ್ನಪ್ಪ ಶಾಖಾಪುರ ಸೇರಿದಂತೆ ಅನೇಕರು ಇದ್ದರು.