ರಮೇಶ ಕುಮಾರ ವಿರುದ್ಧ ಪತ್ರಕರ್ತರ ಪ್ರತಿಭಟನೆ

ಸಿಂಧನೂರು.ಆ.೦೨-ಪತ್ರಕರ್ತರ ಮೇಲೆ ಹಲ್ಲೆಗೆ ಯತ್ನಿಸಿದ ಮಾಜಿ ವಿಧಾನ ಸಭೆಯ ಸ್ಪೀಕರ ರಮೇಶ ಕುಮಾರ ಕೂಡಲೆ ಪತ್ರಕರ್ತರ ಕ್ಷೇಮೆ ಕೇಳಬೇಕು ಎಂದು ಅಗ್ರಹಿಸಿ ತಾಲುಕಾ ಕಾರ್ಯನಿರತ ಪತ್ರಕರ್ತರ ಸಂಘ ನಗರದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಮಾಜಿ ಸ್ಪೀಕರ ರಮೇಶ ಕುಮಾರ ಕಾರ್ಯಕ್ರಮ ವೊಂದರಲ್ಲಿ ಪತ್ರಕರ್ತರನ್ನು ತಳ್ಳಿ ಹಲ್ಲೆ ಮಾಡಿರುವುದನ್ನು ತಾಲುಕಾ ಕಾರ್ಯನಿರತ ಪತ್ರಕರ್ತರ ಸಂಘ ತೀವ್ರ ವಾಗಿ ಖಂಡಿಸುತ್ತದೆ ಇನ್ನು ಮುಂದೆ ಇಂಥಹ ಘಟನೆ ನಡೆಯದಂತೆ ಎಚ್ಚರ ವಹಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಲಾಯಿತು.
ಪತ್ರಕರ್ತರ ಮೇಲೆ ಹಲ್ಲೆ ಮಾಡಿ ರಮೇಶ ಕುಮಾರ ಗೂಂಡಾಗಳಂತೆ ವರ್ತನೆ ಮಾಡಿದ್ದು ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕೆಲಸ ಮಾಡಲು ಹೊರಟ್ಟಿದ್ದು ಪ್ರಜಾಪ್ರಭುತ್ವದ ವಿರೋಧಿ ಯಾಗಿದೆ ರಮೇಶ ಕುಮಾರ ಪತ್ರಕರ್ತರ ಕ್ಷೇಮೆ ಕೇಳಬೇಕು ಸರ್ಕಾರ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುಬೇಕು ಎಂದು ಸರ್ಕಾರವನ್ನು ಒತ್ತಾಯಿಸಲಾಯಿತು.
ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ತಾಲುಕಾ ಅಧ್ಯಕ್ಷರಾದ ಡಿ.ಎಚ್.ಕಂಬಳಿ ಪ್ರಧಾನ ಕಾರ್ಯದರ್ಶಿ ಶರಣಗೌಡ ಗೋರೆಬಾಳ ಪತ್ರಕರ್ತರಾದ ವೀರಭದ್ರಪ್ಪ, ಚಿದಾನಂದ ದೊರೆ, ಶ್ಯಾಮ ಕುಮಾರ, ಪ್ರಹ್ಲಾದ ಗುಡಿ, ಅಶೋಕ ಬೆನ್ನೂರ, ಶಿವಪುತ್ರ ಧನಶೆಟ್ಟಿ, ದುರಗೇಶ, ಚಂದ್ರಶೇಖರ, ಯಾರದಿಹಾಳ ಚಂದ್ರಶೇಖರ ಬೆನ್ನೂರ, ಬೀರಪ್ಪ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.