ರಮೇಶ ಅವರು ಮಂತ್ರಾಲಯಕ್ಕೆ ಭೇಟಿ ಸನ್ಮಾನ

ರಾಯಚೂರು, ಜುಲೈ,೨೩,ಬೆಂಗಳೂರು ಉತ್ತರ ವಲಯದ ಬೆಸ್ಕಾಂ ಕಂಪನಿಯ ಮುಖ್ಯ ಅಭಿಯಂತರರಾದ ರಮೇಶ ಅವರು ಇಂದು ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದರು.
ರಮೇಶ ಅವರು ಈ ಹಿಂದೆ ರಾಯಚೂರಿನ ಕೆಪಿಟಿಸಿಎಲ್ ಅನೇಕ ವರ್ಷಗಳಿಂದ ಇಇ ಆಗಿ ಕಾರ್ಯನಿರ್ವಹಿಸಿ ಸಿಬ್ಬಂದಿಗಳಿಗೆ ಮುಂಬಡ್ತಿಗಳನ್ನು ನೀಡಿ ಉತ್ತಮ ಕಾರ್ಯನಿರ್ವಹಿಸಿದ್ದಾರೆ. ಯಾರು ಮಾಡದ ಕೆಲಸ ಇವರು ಮಾಡಿ ಎಲ್ಲಾ ನೌಕರರ ಮನದಲ್ಲಿ ಉಳಿದಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಗಿಲ್ಲೆಸೂಗೂರು ಶಾಖೆ ಕಚೇರಿಯ ಸಿಬ್ಬಂದಿಗಳು ಅವರಿಗೆ ಸನ್ಮಾನ ಮಾಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಹುಲಿ ರಾಜ್ ಕಾರ್ಯದರ್ಶಿ ಕೆಪಿಟಿಸಿಎಲ್ ಕರರ ಸಂಘ ಹಾಗೂ ಸ್ಥಳೀಯ ಸಮತಿ ಸಿಬ್ಬಂದಿಗಳು ಇದ್ದರು.